ಮುಖಕ್ಕೆ ಎಂಜಲು ಹಚ್ಚಿಕೊಳ್ತಿದ್ದ ನಟಿ ತಮನ್ನಾ; ಕಾರಣವೇನು?
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಮೇಕಪ್ ಇಲ್ಲದೆಯೇ ಅತೀ ಸುಂದರವಾಗಿ ಕಾಣಿಸುವ ಸ್ಫುರದ್ರೂಪಿ ನಟಿ ತಮನ್ನಾ ತನ್ನ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಉತ್ತರ ಭಾರತದ ಈ ಸುಂದರಿಯ ಕೋಮಲ ತ್ವಚೆಯ ರಹಸ್ಯ ಕೇಳಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.
ಸುಂದರವಾಗಿ ಕಾಣಿಸುವ ಹಿಂದೆ ಸಾಕಷ್ಟು ಶ್ರಮ ಕೂಡ ಇರುತ್ತೆ. ತಮನ್ನಾ ಕೂಡ ಕೋಮಲ ತ್ವಚೆಗಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಮುಖದ ಕಲೆ, ಡಾರ್ಕ್ ಸರ್ಕಲ್, ಪಿಂಪಲ್ ಹೋಗಬೇಕೆಂದರೆ ಸರಿಯಾಗಿ ನಿದ್ದೆ ಮಾಡುವುದು ಮುಖ್ಯ ಎಂದು ಬ್ಯೂಟಿಶಿಯನ್ ಸಲಹೆ ನೀಡುತ್ತಿದ್ದರಂತೆ. ಆದರೆ ಯಾವಾಗಲು ನಿದ್ದೆ ಮಾಡಲು ತಯಾರಿಲ್ಲದ ತಮನ್ನಾ ಬೇರೆ ಏನಾದರು ಇದ್ರೆ ಹೇಳಿ ಎಂದು ಕೇಳುತ್ತಿದ್ದರಂತೆ. ಮುಂದೆ ಓದಿ..

ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದ ತಮನ್ನಾ
ಎಲ್ಲರ ಹಾಗೆ ತಮನ್ನಾ ಕೂಡ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಯಿಂದ ಬಳಲುತ್ತಿದ್ದರು. ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದರಂತೆ. ಅನೇಕ ಔಷಧಿಗಳನ್ನು ಹಚ್ಚಿರುವುದಾಗಿ ಹೇಳಿದ್ದಾರೆ. ಜೊತೆಗೆ ಬೆಳಗ್ಗೆಯ ಎಂಜಲನ್ನು ಹಚ್ಚಿರುವುದಾಗಿ ಬಹಿರಂಗ ಪಡಿಸಿದ್ದಾರೆ.

ಬೆಳಗ್ಗೆಯ ಎಂಜಲು ಹಚ್ಚುತ್ತಿದ್ದ ನಟಿ
ಇತ್ತೀಚಿಗೆ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ತಮನ್ನಾ, "ನಿಮ್ಮ ಬೆಳಗ್ಗಿನ ಎಂಜಲು ನಿಜವಾಗಿಯೂ ತುಂಬಾ ಕೆಲಸ ಮಾಡುತ್ತೆ. ಇದು ನಿಜವಾಗಿಯೂ ಗುಳ್ಳೆಗಳನ್ನು ಒಣಗಿಸುವ ಕೆಲಸ ಮಾಡುತ್ತೆ" ಎಂದು ಬಹಿರಂಗ ಪಡಿಸಿದ್ದಾರೆ. ತಮನ್ನಾ ಹೇಳಿಕೆ ಅನೇಕರಿಗೆ ಅಚ್ಚರಿ ಮೂಡಿಸಿದೆ.

ತಲೆಗೆ ತೆಂಗಿನ ಎಣ್ಣೆ, ಈರುಳ್ಳಿ ರಸ
ಚರ್ಮದ ಸಮಸ್ಯೆ ವಿಚಾರಕ್ಕೆ ಮೊದಲು ವೈದ್ಯರನ್ನು ಸಂಪರ್ಕ ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕೂದಲಿನ ಆರೈಕೆಗೆ ಬಂದರೆ ತಮನ್ನಾ ತೆಂಗಿನ ಎಣ್ಣೆಯನ್ನು ಹಾಕುತ್ತಾರಂತೆ. ಜೊತೆಗೆ ಈರುಳ್ಳಿ ರಸ ಕೂಡ ಉಪಯೋಗವಾಗುತ್ತೆ ಎಂದು ಹೇಳುವ ಮೂಲಕ ತನ್ನ ಸೌಂದರ್ಯದ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ.
Recommended Video

ತಮನ್ನಾ ಬಳಿ ಇರುವ ಸಿನಿಮಾಗಳು
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ಸದ್ಯ ಹಿಂದಿಯ ಸೂಪರ್ ಹಿಟ್ ಅಂಧಾಧುನ್ ತೆಲುಗು ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಇನ್ನು ಕನ್ನಡದ ಸೂಪರ್ ಹಿಟ್ ಲವ್ ಮಾಕ್ಟೇಲ್ ಸಿನಿಮಾದ ರಿಮೇಕ್ ನಲ್ಲೂ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನೂ ಅನೇಕ ಸಿನಿಮಾಗಳು ತಮನ್ನಾ ಕೈಯಲ್ಲಿವೆ.


Click it and Unblock the Notifications











