ನಟ ಪ್ರಭಾಸ್ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ತಮನ್ನಾ

ಪ್ರಭಾಸ್ ಎಲ್ಲರ ನೆಚ್ಚಿನ ಡಾರ್ಲಿಂಗ್, ಪ್ರಭಾಸ್ ಅನ್ನು ಪರಿಚಿತರು, ಅಭಿಮಾನಿಗಳು ಕರೆಯುವುದೇ ಡಾರ್ಲಿಂಗ್ ಎಂದು. ಸ್ವತಃ ಪ್ರಭಾಸ್ ಸಹ ತನ್ನ ಗೆಳೆಯರನ್ನು ಡಾರ್ಲಿಂಗ್ ಎಂದೇ ಕರೆಯುವ ಅಭ್ಯಾಸ ಇಟ್ಟುಕೊಂಡಿದ್ದಾರೆ.

Recommended Video

ತೆಲುಗು ಸಿನಿಮಾದಲ್ಲಿ ನಟಿಸುವ ಆಸೆ ಹೊರಹಾಕಿದ ಶಿವಣ್ಣ..! | Shivaraj Kumar | Filmibeat Kannada

ಎಲ್ಲರ ಡಾರ್ಲಿಂಗ್ ಪ್ರಭಾಸ್‌ ಬಗ್ಗೆ ಕೆಲವು ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ ಪ್ರಭಾಸ್ ಜೊತೆ ಮೂರು ಸಿನಿಮಾಗಳಲ್ಲಿ ನಟಿಸಿರುವ ಮಿಲ್ಕಿ ಬ್ಯೂಟಿ ನಟಿ ತಮನ್ನಾ.

ಪ್ರಭಾಸ್ ಜೊತೆ ರೆಬೆಲ್, ಬಾಹುಬಲಿ 1 ಹಾಗೂ ಎರಡನೇ ಸಿನಿಮಾಗಳಲ್ಲಿ ನಟಿಸಿರುವ ತಮನ್ನಾ ಪ್ರಭಾಸ್ ಅನ್ನು ಬಹು ವರ್ಷಗಳಿಂದ ಬಲ್ಲವರು ಮತ್ತು ಉತ್ತಮ ಗೆಳತಿ ಸಹ. ಅವರು ಇತ್ತೀಚಿಗೆ ನಡೆದ ಆನ್‌ಲೈನ್ ಸಂದರ್ಶನದಲ್ಲಿ ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ.

ನಾನು ಜೊತೆಯಾಗಿ ಕೆಲಸ ಮಾಡಿದ ಅತ್ಯುತ್ತಮ ವ್ಯಕ್ತಿ ಪ್ರಭಾಸ್: ತಮನ್ನಾ

ನಾನು ಜೊತೆಯಾಗಿ ಕೆಲಸ ಮಾಡಿದ ಅತ್ಯುತ್ತಮ ವ್ಯಕ್ತಿ ಪ್ರಭಾಸ್: ತಮನ್ನಾ

ಸಂದರ್ಶನದಲ್ಲಿ ಪ್ರಭಾಸ್‌ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ತಮನ್ನಾ, 'ನಾನು ಈ ವರೆಗೆ ಕೆಲಸ ಮಾಡಿದ ವ್ಯಕ್ತಿಗಳಲ್ಲಿ ಪ್ರಭಾಸ್ ಅತ್ಯುತ್ತಮ ಮತ್ತು ಮೃದು ಸ್ವಭಾವದ ವ್ಯಕ್ತಿ' ಎಂದಿದ್ದಾರೆ ಅವರು.

ಪ್ರಭಾಸ್ ನಾಚಿಕೆ ಸ್ವಭಾವದವರು: ತಮನ್ನಾ

ಪ್ರಭಾಸ್ ನಾಚಿಕೆ ಸ್ವಭಾವದವರು: ತಮನ್ನಾ

ಪ್ರಭಾಸ್ ತುಸು ನಾಚಿಕೆ ಸ್ವಭಾವದ ವ್ಯಕ್ತಿ. ಅದರಲ್ಲಿಯೂ ಲೇಡಿ ಫ್ಯಾನ್ಸ್‌ಗಳ ಜೊತೆಗಂತೂ ಬಹಳ ನಾಚಿಕೆಯಿಂದಲೇ ವ್ಯವಹರಿಸುತ್ತಾರೆ. ಆಗ ಅವರನ್ನು ನೋಡುವುದೇ ಚಂದ ಎನ್ನುತ್ತಾರೆ ತಮನ್ನಾ.

ಪ್ರಭಾಸ್ ಕ್ಯೂಟ್ ಆಗಿ ಕಾಣ್ತಾರೆ: ತಮನ್ನಾ

ಪ್ರಭಾಸ್ ಕ್ಯೂಟ್ ಆಗಿ ಕಾಣ್ತಾರೆ: ತಮನ್ನಾ

ಲೇಡಿ ಫ್ಯಾನ್ಸ್‌ಗಳು ಪ್ರಭಾಸ್ ಅನ್ನು ಮುತ್ತಿಕೊಂಡರೆ ಬಹಳ ನಾಚಿಕೆಪಟ್ಟುಕೊಂಡು ಬಿಡುತ್ತಾರೆ. ಲೇಡಿ ಫ್ಯಾನ್ಸ್‌ಗಳ ಜೊತೆಗೆ ಅವರು ವ್ಯವಹರಿಸುವ ರೀತಿ ಬಹಳ ಕ್ಯೂಟ್ ಆಗಿರುತ್ತದೆ ಎಂದಿದ್ದಾರೆ ತಮನ್ನಾ.

ತಮನ್ನಾ ಕೈಲಿವೆ ಹಲವು ಸಿನಿಮಾಗಳು

ತಮನ್ನಾ ಕೈಲಿವೆ ಹಲವು ಸಿನಿಮಾಗಳು

ತಮನ್ನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಪ್ರಸ್ತುತ ಇವೆ. ಸೀಟಿಮಾರ್, ದಟ್‌ ಈಸ್ ಮಹಾಲಕ್ಷ್ಮಿ, ಭೋಲೆ ಚೂಡಿಯಾ, ಕಾತ್ತು ಕರುಪ್ಪು, ಎನ್ ಎಂಡ್ರು ಕಾದಲ್ ಎನ್ಬೆನ್, ಚೋರ್ ನಿಕಲ್‌ ಕೆ ಭಾಗ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Tamannaah Bhatia talked about Prabhas in an interview. She says he is a nice person.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X