ಮೆಗಾಸ್ಟಾರ್ ಚಿರಂಜೀವಿಗೆ ಮತ್ತೊಮ್ಮೆ ಜೋಡಿಯಾದ ಮಿಲ್ಕಿ ಬ್ಯೂಟಿ

ಒಂದು ಸಿನಿಮಾ ಮಾಡಬೇಕು ಅಂದರೆ ಅದಕ್ಕೆ ತಯಾರಿಗಳು ಹೆಚ್ಚಿರುತ್ತವೆ. ಆ ಸಿನಿಮಾಗೆ ಸ್ಟಾರ್ ಕಾಸ್ಟ್ ಫೈನಲ್ ಮಾಡಬೇಕು, ಲೋಕೇಶನ್ ಹುಡುಕಬೇಕು, ಕಾಡುಗಳು, ಫೈಟ್‌ಗಳು ಹೇಗಿರಬೇಕು ಎಂದು ಪ್ಲಾನ್ ಮಾಡಬೇಕು. ಎಲ್ಲಕ್ಕೂ ಮಿಗಿಲಾಗಿ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯ ಹುಡುಕಾಟ ತುಂಬಾ ಮುಖ್ಯವಾಗಿರಬೇಕು. ಒಬ್ಬ ಸ್ಟಾರ್ ನಟನ ಸಿನಿಮಾ ಅಂದ್ರೆ ಅದು ಸುಮ್ಮನೆ ಅಲ್ಲ. ಕೋಟ್ಯಾಂತರ ಅಭಿಮಾನಿಗಳು ಅವರನ್ನು ಅನುಸರಿಸುತ್ತಾ ಇರುತ್ತಾರೆ. ಅವರ ಸಿನಿಮಾಗಾಗಿ ವರ್ಷಾನುಗಟ್ಟಲೇ ಕಾಯುತ್ತಾರೆ. ಹೀಗಾಗಿ ಸಿನಿಮಾದ ಪ್ರತೀ ಹೆಜ್ಜೆ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುತ್ತೆ. ಸದ್ಯ ಟಾಲಿವುಡ್‌ನಲ್ಲಿ ಮೆಗಾ ಸ್ಟಾರ್ ಚಿರಂಜೀವಿಯ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ನಾಯಕಿ ಕೂಡ ಈಗ ಫೈನಲ್ ಆಗಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾಗಳು ಅಂದ್ರೆ ಅಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತೆ. ಚಿರಂಜೀವಿ ಸಿನಿಮಾ 100 ಡೇಸ್ ಪಕ್ಕಾ ಅನ್ನುವ ಲೆಕ್ಕಾಚಾರದಲ್ಲೆ ಅಭಿಮಾನಗಳು ಸಿನಿಮಾ ಕ್ವಾಲಿಟಿಯನ್ನು ನಿರೀಕ್ಷಿಸುತ್ತಾರೆ. ಸದ್ಯ ಚಿರಂಜೀವಿ ಅವರ ಬೋಲ ಶಂಕರ ಸಿನಿಮಾ ಅನೌನ್ಸ್ ಆದಾಗಿನಿಂದ ಆಭಿಮಾನಿಗಳು ಈ ಸಿನಿಮಾದ ಪ್ರತೀ ಅಪ್‌ಡೇಟ್ಸ್‌ಅನ್ನು ಕೂಡ ಕಾದು ಕಾದು ತಿಳಿದುಕೊಳ್ಳುತ್ತಿದ್ದಾರೆ. ಈಗ ಸಿನಿಮಾದಲ್ಲಿ ಚಿರುಗೆ ನಾಯಕಿ ಫೈನಲ್ ಆಗಿದ್ದು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿಗೆ ಬೋಲ ಶಂಕರ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ವಿಚಾರವನ್ನು ಸ್ವತಃ ಚಿತ್ರತಂಡ ಅನೌನ್ಸ್ ಮಾಡಿದ್ದು, ಈ ಖುಷಿಯ ವಿಚಾರವನ್ನು ನಟ ತಮನ್ನಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಮತ್ತೊಮ್ಮೆ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಸಿನಿಮಾ ಮಾಡುತ್ತಿರೋದು ಹೆಮ್ಮೆ ಎನ್ನಿಸುತ್ತಿದೆ. ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಲು ಕಾತುರಳಾಗಿದ್ದೇನೆ ಎಂದು ತಮನ್ನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಜಿರುಗೆ ನಾಯಕಿ ಆಗುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ವಿಷಯವನ್ನು ಹಂಚಿಕೊಂಡಿದ್ದರು.

 Tamannaah Bhatia to star opposite Chiranjeevi in Bhola Shankar Movie

ಇದು ಮೆಗಾ ಸ್ಟಾರ್ ಚಿರಂಜೀವಿ ಅವರ 154ನೇ ಸಿನಿಮಾ ಅನ್ನೋದು ವಿಶೇಷ. ಅಕ್ಟೋಬರ್ 25ರಂದು ಚಿರಂಜೀವಿ ಅವರ ಹುಟ್ಟು ಹಬ್ಬದಂದು ಸಿನಿಮಾ ಅನೌನ್ಸ್ ಆಗಿದ್ದು, ನವೆಂಬರ್ 11ಕ್ಕೆ ಚಿತ್ರದ ಮುಹೂರ್ತ ನೆರವೇರಲಿದೆ. ಹೈದರಾಬಾದ್‌ನಲ್ಲಿ ನಡೆಯುವ ಮುಹೂರ್ತದಲ್ಲಿ ಇಡಿ ಚಿತ್ರತಂಡ ಭಾಗಿ ಆಗಲಿದ್ದು, ಚಿರಂಜೀವಿ ಮತ್ತು ತಮನ್ನಾ ಕೂಡ ಇರಲಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಮತ್ತು ತಮನ್ನಾರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಈ ಮೊದಲು ಚಿರು ಅವರ 151ನೇ ಚಿತ್ರ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಈ ಜೋಡಿ ಒಂದಾಗಿತ್ತು. ಇದರಲ್ಲಿ ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೂ ಹಿಡಿಸಿತ್ತು. ಹೀಗಾಗಿ ಮತ್ತೆ ಈ ಜೋಡಿ ಒಂದಾಗುತ್ತಿರುವುದಕ್ಕೆ ಅಭಿಮಾನಿಗಳು ಖುಷಿ ಆಗಿದ್ದಾರೆ. ಚಿತ್ರತಂಡಕ್ಕೆ ವಿಷ್ ಮಾಡುತ್ತಿದ್ದಾರೆ.

ಬೋಲ ಶಂಕರ ಸಿನಿಮಾದ ಕಥೆಯ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಮೆರ್ಹ ರಮೇಶ್ ಬೋಲ ಶಂಕರ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಎಕೆ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿ ಸಿನಿಮಾ ಮೂಡಿ ಬರಲಿದೆ. ಚಿತ್ರದ ತಾರಾಗಣ ಕೂಡ ಬಹುತೇಕ ಖಾತ್ರಿ ಆಗಿದ್ದು, ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಈ ಸಿನಿಮಾದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ತಂಗಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರಂತೆ. ಈ ಪಾತ್ರ ಸಿನಿಮಾದಲ್ಲಿ ಪ್ರಮುಖ ವಾಗಿದ್ದು, ಕೀರ್ತಿ ಸುರೇಶ್ ಅವರೇ ಮಾಡಬೇಕು ಎಂದು ಚಿತ್ರತಂಡ ಅಂದುಕೊಂಡಿತ್ತು. ಈ ವಿಚಾರವನ್ನು ಕೀರ್ತಿ ಸುರೇಶ್ ಬಳಿ ತಿಳಿಸಿದಾಗ ಚಿರಂಜೀವಿ ಅವರಿಗೆ ತಂಗಿ ಆಗುವ ಭಾಗ್ಯ ಸಿಕ್ಕರೆ ಬೇಡ ಎನ್ನುವುದಿಲ್ಲ ಎಂದಿರೋ ಕೀರ್ತಿ ಸುರೇಶ್ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.

 Tamannaah Bhatia to star opposite Chiranjeevi in Bhola Shankar Movie

ಇನ್ನು ಚಿತ್ರತಂಡಕ್ಕೆ ಟಾಲಿವುಡ್‌ನ ಗಣ್ಯಾತಿ ಗಣ್ಯರೆಲ್ಲ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬು ಕೂಡ ಚಿತ್ರತಂಡಕ್ಕೆ ಟ್ವಿಟ್ಟರ್‌ನಲ್ಲಿ ವಿಷ್ ಮಾಡಿದ್ದು, ಚಿತ್ರದ ಟೈಟಲ್‌ ಅನ್ನು ಮಹೇಶ್ ಬಾಬು ಅವರೇ ರಿವೀಲ್ ಮಾಡಿದ್ದಾರೆ. ಚಿರಂಜೀವಿ ಬರ್ತ್‌ಡೇ ಹಿನ್ನೆಲ್ಲೆ ಮಹೇಶ್ ಬಾಬು ಚಿತ್ರದ ಟೈಟಲ್ ರಿವೀಲ್ ಮಾಡುತ್ತಿರುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ. ಬೋಲ ಶಂಕರ ಚಿತ್ರವನ್ನು ನನ್ನ ಆತ್ಮೀಯ ಸ್ನೇಹಿತ ಮೆರ್ಹ ರಮೇಶ್ ನಿರ್ದೇಶನ ಮಾಡುತ್ತಿದ್ದಾರೆ ಹಾಗೇ ಅನಿಲ್ ಶಂಕರ್ ನಿರ್ಮಾಣ ಮಾಡುತ್ತಿರುವುದುಕ್ಕೆ ಖುಷಿ ಇದೆ ಎಂದು ಬರೆದುಕೊಂಡಿದ್ದರು. ಈ ಮೂಲಕ ಚಿತ್ರತಂಡಕ್ಕೆ ಒಳ್ಳೆದಾಗಲಿ ಎಂದು ಮಹೇಶ್ ಬಾಬು ಹರಸಿದ್ದರು.

More from Filmibeat

English summary
Chiranjeevi to romance with Tamannaah Bhatia in the upcoming film Bhola shankar. This will be the second time when Chiranjeevi will share the screen with Tamannah.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X