Odela- 2 Trailer: ಸೈತಾಶ್- ಶಿವಶಕ್ತಿ ನಡುವಿನ ಕದನ; ತಮನ್ನಾ- ವಸಿಷ್ಠ ಏಟು ಎದಿರೇಟು

ಮಿಲ್ಕಿ ಬ್ಯೂಟಿ ತಮನ್ನಾ ನಟನೆಯ 'ಓದೆಲಾ-2' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಕಂಚಿನ ಕಂಠದ ಕನ್ನಡ ನಟ ವಸಿಷ್ಠ ಸಿಂಹ ವಿಲನ್ ಆಗಿ ಅಬ್ಬರಿಸಿದ್ದಾರೆ. ಅಶೋಕ್ ತೇಜ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು ಏಪ್ರಿಲ್ 17ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಮಧು ಕ್ರಿಯೇಷನ್ಸ್ ಹಾಗೂ ಸಂಪತ್ ನಂದಿ ಟೀಮ್‌ವರ್ಕ್ಸ್ ಜಂಟಿಯಾಗಿ ಈ ಸೂಪರ್‌ನ್ಯಾಚುರಲ್ ಥ್ರಿಲ್ಲರ್ ಸಿನಿಮಾ ನಿರ್ಮಾಣ ಮಾಡಿದೆ. ನಿರ್ದೇಶಕ ಸಂಪತ್ ನಂದಿ ಕಥೆ, ಚಿತ್ರಕಥೆ ಬರೆದು ಚಿತ್ರಕ್ಕೂ ಹಣವನ್ನು ಹೂಡಿದ್ದಾರೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸಿನಿಮಾ ಬಗ್ಗೆ ಕುತೂಹಲ ಮೂಡುವಂತಾಗಿದೆ. ಹೆಬ್ಬಾ ಪಟೇಲ್ ಹಾಗೂ ಮುರಳಿ ಶರ್ಮಾ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿರುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತಿದೆ.

Tamannaah bhatia Vasishta n simha starrer Odela 2 trailer released

ಅಜನೀಶ್ ಲೋಕನಾಥ್ ಸಂಗೀತ ಟ್ರೈಲರ್‌ನಲ್ಲಿ ಹೈಲೆಟ್ ಎನಿಸಿಕೊಂಡಿದೆ. ಈಗಾಗಲೇ ಪರಭಾಷಾ ಸಿನಿಮಾಗಳಿಗೆ ಅಜನೀಶ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಈ ಹಿಂದೆ ತೆಲುಗಿನ 'ಮಂಗಳವಾರಂ' ಚಿತ್ರದಲ್ಲಿ ಕೂಡ ಅಜನೀಶ್ ಮ್ಯೂಸಿಕ್ ಸದ್ದು ಮಾಡಿತ್ತು. ಇನ್ನು ವಸಿಷ್ಠ ಸಿಂಹ ಕೂಡ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. 'ಓದೆಲಾ- 2' ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿದೆ. ತಮನ್ನಾ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದು ಆಕೆಗೆ ಎದುರಾಗಿ ವಸಿಷ್ಠ ಅಬ್ಬರಿಸಿದ್ದಾರೆ.

3 ವರ್ಷಗಳ ಹಿಂದೆ 'ಓದೆಲಾ ರೈಲ್ವೆ ಸ್ಟೇಷನ್' ಎಂಬ ಸಿನಿಮಾ ಬಂದು ಗೆದ್ದಿತ್ತು. ಅದರು ಮುಂದುವರೆದ ಭಾಗ ಇದು. ಆ ಚಿತ್ರದಲ್ಲಿ ಹೆಬ್ಬಾ ಪಟೇಲ್ ಹಾಗೂ ವಸಿಷ್ಠ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸೀಕ್ವೆಲ್‌ನಲ್ಲಿ ತಮನ್ನಾ ಶಿವಶಕ್ತಿಯಾಗಿ ಅಬ್ಬರಿಸಿದ್ದಾರೆ. ಸೈತಾನನಾಗಿ ವಸಿಷ್ಠ ಸವಾಲು ಹಾಕಿದ್ದಾರೆ. ಇವರಿಬ್ಬರು ಏಟು ಎದಿರೇಟು ಸಿನಿರಸಿಕರಿಗೆ ಕಿಕ್ ಕೊಡುವ ಸುಳಿವು ಸಿಕ್ತಿದೆ.

Tamannaah bhatia Vasishta n simha starrer Odela 2 trailer released

ವಾರಣಾಸಿಯಲ್ಲಿ 'ಓದೆಲಾ'-2 ಸಿನಿಮಾ ಶುರುವಾಗಿತ್ತು. ಬಳಿಕ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಕುಂಭಮೇಳದಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಿತ್ತು ಚಿತ್ರತಂಡ. ಇದೀಗ ಟ್ರೈಲರ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಿದೆ. ತಮ್ಮ 20 ವರ್ಷಗಳ ಸಿನಿಕರಿಯರ್‌ನಲ್ಲಿ ತಮನ್ನಾ ನಿಭಾಯಿಸಿರುವ ಬಹಳ ಪವರ್‌ಫುಲ್ ಪಾತ್ರ ಇದಾಗಿದೆ.

'ಓದೆಲಾ ರೈಲ್ವೆ ಸ್ಟೇಷನ್' ಚಿತ್ರದಲ್ಲಿ ರಾಧಾಳ ಪತಿ ತಿರುಪತಿ ಆಗಿ ವಸಿಷ್ಠ ನಟಿಸಿದ್ದರು. ಇದೀಗ ಮುಂದುವರೆದ ಭಾಗದಲ್ಲಿ ಅದೇ ಪಾತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗಿದೆ. ವಾಮಚಾರದ ಮೂಲಕ ಶಿವಶಕ್ತಿಗೆ ಟಕ್ಕರ್ ಕೊಡುವ ಪಾತ್ರ ಇದಾಗಿದೆ. ಟ್ರೈಲರ್ ನೋಡಿದವರು ವಿಷ್ಯುವಲ್ಸ್ ಹಾಗೂ ಬಿಜಿಎಂ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಭೂತ ಪ್ರೇತದ ಕಥೆಗೆ ಬೇಕಾದ ಫೀಲ್ ಚಿತ್ರದಲ್ಲಿದೆ. ಸೌಂದರ್ಯ ರಾಜನ್ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಓದೆಲಾ ಎಂಬ ಊರಿನಲ್ಲಿ ಮತ್ತೆ ಪ್ರೇತಾತ್ಮಗಳ ಹಾವಳಿ ಶುರುವಾಗಿದ್ದು ಅದನ್ನು ಪರಿಹರಿಸಲು ಶಿವಶಕ್ತಿ ಅಲ್ಲಿಗೆ ಬರುತ್ತಾಳೆ. ಮುಂದೇನು ಏನೆಲ್ಲಾ ಆಗುತ್ತದೆ ಎನ್ನುವುದೇ ಸಿನಿಮಾ ಕಥೆ ಎಂದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಅಂದಾಜು 25 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎನ್ನಲಾಗ್ತಿದೆ.

18 ಕೋಟಿ ರೂ.ಗೆ ಚಿತ್ರದ ಡಿಜಿಟಲ್ ರೈಟ್ಸ್ ಅಮೇಜಾನ್ ಪ್ರೈಂ ಕೊಂಡುಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಟ್ರೈಲರ್‌ನಲ್ಲಿರುವ ಡೈಲಾಗ್ಸ್ ಕೂಡ ಕಿಕ್ ಕೊಡ್ತಿದೆ. ಆರ್ಮುಗ ರವಿಶಂಕರ್ ಹಿನ್ನೆಲೆ ಧ್ವನಿಯೊಂದಿಗೆ ಟ್ರೈಲರ್ ಆರಂಭವಾಗುತ್ತದೆ, ಬಳಿಕ ವಸಿಷ್ಠ ಬೇಸ್ ವಾಯ್ಸ್‌ನಲ್ಲಿ ಮತ್ತಷ್ಟು ಆಸಕ್ತಿ ಮೂಡಿಸುತ್ತದೆ.

More from Filmibeat

English summary
Most expected Supernatural thriller Odela 2 trailer out now;
Read more about: tamannaah bhatia tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X