For Quick Alerts
  ALLOW NOTIFICATIONS  
  For Daily Alerts

  ನಿತಿನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ನಟಿ ತಮನ್ನಾ

  |

  ವ್ಯಾಪಕ ಮೆಚ್ಚುಗೆಗೆ ಒಳಗಾಗಿದ್ದ ಹಿಂದಿ ಚಿತ್ರ 'ಅಂಧಾಧುನ್' ತೆಲುಗಿಗೆ ರಿಮೇಕ್ ಆಗುತ್ತಿದೆ ಎನ್ನುವ ವಿಚಾರ ಅನೇಕ ತಿಂಗಳಿಂದ ಕೇಳುತ್ತಿದ್ದೀರಿ. ತೆಲುಗು ರಿಮೇಕ್ ನಲ್ಲಿ ನಾಯಕರಾಗಿ ನಿತಿನ್ ನಟಿಸುತ್ತಿದ್ದಾರೆ. ಆದರೆ ನಾಯಕಿ ಯಾರು ಎಂಬ ಚರ್ಚೆಗೆ ಉತ್ತರ ಸಿಕ್ಕಿರಲಿಲ್ಲ. ಆದರೀಗ ಸಿನಿಮಾದ ಸಂಪೂರ್ಣ ವಿವರ ಬಹಿರಂಗವಾಗಿದೆ.

  ಚಿತ್ರದಲ್ಲಿ ಕನ್ನಡ ನಟಿಯ ಜೊತೆ ತಮನ್ನಾ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಮಿಲ್ಕಿ ಬ್ಯೂಟಿ ತಮನ್ನಾ ನಟ ನಿತಿನ್ ಜೊತೆ ರೊಮ್ಯಾನ್ಸ್ ಮಾಡುವುದು ಅಧಿಕೃತವಾಗಿದೆ. ಅಂದ್ಹಾಗೆ ಮತ್ತೋರ್ವ ನಾಯಕಿಯಾಗಿ ಕನ್ನಡತಿ ನಭಾ ನಟೇಶ್ ಅಭಿನಯಿಸುತ್ತಿದ್ದಾರೆ.

  ನಟ ನಿತಿನ್ ಮದುವೆ ಫೋಟೋಗಳು: ಗೆಳತಿ ಶಾಲಿನಿ ಜೊತೆ ಹಸೆಮಣೆ ಏರಿದ ನಿತಿನ್ನಟ ನಿತಿನ್ ಮದುವೆ ಫೋಟೋಗಳು: ಗೆಳತಿ ಶಾಲಿನಿ ಜೊತೆ ಹಸೆಮಣೆ ಏರಿದ ನಿತಿನ್

  ನಿತಿನ್ ಜೊತೆ ತಮನ್ನಾ ರೊಮ್ಯಾನ್ಸ್

  ನಿತಿನ್ ಜೊತೆ ತಮನ್ನಾ ರೊಮ್ಯಾನ್ಸ್

  ಹಿಂದಿಯಲ್ಲಿ ಆಯುಷ್ಮಾನ್ ಖುರಾನಾ ಮತ್ತು ರಾಧಿಕಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಅವರೊಂದಿಗೆ ಹಿರಿಯ ನಟಿ ಟಬು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತೆಲುಗು 'ಅಂಧಾಧುನ್' ಸಿನಿಮಾದಲ್ಲಿ ಆಯುಷ್ಮಾನ್ ಪಾತ್ರದಲ್ಲಿ ನಟ ನಿತಿನ್ ಅಭಿನಯಿಸುತ್ತಿದ್ದಾರೆ. ರಾಧಿಕಾ ಆಪ್ಟೆ ಪಾತ್ರದಲ್ಲಿ ನಭಾ ನಟೇಶ್ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಟಬು ಪಾತ್ರದಲ್ಲಿ ತಮನ್ನಾ ಅಭಿನಯಿಸುತ್ತಿದ್ದಾರೆ.

  ಟಬು ಪಾತ್ರಕ್ಕೆ ಕೇಳಿ ಬಂದಿತ್ತು ಅನೇಕ ನಟಿಯರ ಹೆಸರು

  ಟಬು ಪಾತ್ರಕ್ಕೆ ಕೇಳಿ ಬಂದಿತ್ತು ಅನೇಕ ನಟಿಯರ ಹೆಸರು

  ಅಂದ್ಹಾಗೆ ಟಬು ಪಾತ್ರಕ್ಕೆ ಸಾಕಷ್ಟು ನಾಯಕಿಯರ ಹೆಸರುಗಳು ಕೇಳಿ ಬರುತಿತ್ತು. ಈ ಮೊದಲು ಟಬು ಪಾತ್ರದಲ್ಲಿ ನಟಿ ರಮ್ಯಾ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಶಿಲ್ಪ ಶೆಟ್ಟಿ ಹೆಸರು ಸಹ ಕೇಳಿ ಬಂದಿತ್ತು. ಕೊನೆಗೆ ಟಬುನೇ ಅಭಿನಯಿಸಿದರೆ ಹೇಗೆ ಎಂದು ನಿರ್ಧರಿಸಿ ನಿರ್ಮಾಪಕರು ಟಬುಗೆ ಆಫರ್ ನೀಡಿದ್ರು. ಆದರೆ ಟಬು ಸಂಭಾವನೆ ಕೇಳಿ ಚಿತ್ರತಂಡ ಹಿಂದೇಟು ಹಾಕಿತು. ಕೊನೆಯದಾಗಿ ಟಬು ಪಾತ್ರ ಈಗ ತಮನ್ನಾ ಕೈ ಸೇರಿದೆ.

  'ಭೀಷ್ಮಾ' ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ನಿತಿನ್'ಭೀಷ್ಮಾ' ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ನಿತಿನ್

  ನವೆಂಬರ್ ನಿಂದ ಚಿತ್ರೀಕರಣ

  ನವೆಂಬರ್ ನಿಂದ ಚಿತ್ರೀಕರಣ

  ನಟ ನಿತಿನ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಚಿತ್ರಕ್ಕೆ ಮರ್ಲಪಾಕಾ ಗಾಂಧಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯ ಲಾಕ್ ಡೌನ್ ನಿಂದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದ ಚಿತ್ರತಂಡ, ನವೆಂಬರ್ ನಿಂದ ಶೂಟಿಂಗ್ ಪ್ರಾರಂಭಿಸಲು ತಯಾರಾಗಿದೆ. ಈ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ಭರ್ಜರಿ ಹಿಟ್ ಆಗಿದ್ದ 'ಅಂಧಾಧುನ್'

  ಭರ್ಜರಿ ಹಿಟ್ ಆಗಿದ್ದ 'ಅಂಧಾಧುನ್'

  ಶ್ರೀರಾಮ್ ರಾಘವನ್ ನಿರ್ದೇಶನದ ಹಿಂದಿಯ 'ಅಂಧಾಧುನ್' 2018ರಲ್ಲಿ ತೆರೆಕಂಡಿತ್ತು. ಅಂಧನ ಪಾತ್ರದಲ್ಲಿ ನಟಿಸಿದ್ದ ಆಯುಷ್ಮಾನ್ ಖುರಾನಾ ಅವರಿಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. 32 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಒಟ್ಟಾರೆ 450 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.

  English summary
  Actress Tamanna romance with Actor Nithin in the Telugu remake of Andhadhun. Nabha Natesh to play Radhika Apte's role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X