For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಲವ್ ಮಾಕ್‌ಟೇಲ್'ನ ತೆಲುಗು ರೀಮೇಕ್‌ನಲ್ಲಿ ಖ್ಯಾತ ನಟಿ ನಾಯಕಿ

  |

  ಈ ವರ್ಷ ಕನ್ನಡ ಪ್ರೇಕ್ಷಕರ ಮನಸ್ಸು ಮುಟ್ಟಿದ ಚಿತ್ರಗಳಲ್ಲಿ 'ಲವ್ ಮಾಕ್‌ಟೇಲ್' ಕೂಡ ಒಂದು. ಚೆನ್ನಾಗಿ ಓಡುತ್ತಿದ್ದ ಈ ಚಿತ್ರ ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಪ್ರದರ್ಶನ ನಿಲ್ಲಿಸಿತ್ತು. ನಂತರ ಒಟಿಟಿ ಪ್ಲಾಟ್‌ ಫಾರ್ಮ್‌ನಲ್ಲಿ ಬಿಡುಗಡೆಯಾದಾಗ ಮತ್ತೊಂದು ಸಂಚಲನ ಸೃಷ್ಟಿಸಿತು. ಪರಭಾಷೆಯ ಮಂದಿಯೂ ಚಿತ್ರ ವೀಕ್ಷಿಸಿ ಮೆಚ್ಚಿಕೊಂಡರು. ಕಿರುತೆರೆಯಲ್ಲಿಯೂ ಹಲವು ಬಾರಿ ಪ್ರಸಾರವಾಯಿತು.

  ಅಂದು ನನ್ನ ಅಮ್ಮನ ಕಾಲಿಗೆ ಬಿದ್ದು ಕೊಟ್ಟ ಮಾತನ್ನ ಉಳಿಸಿಕೊಂಡರು ಶಿವಣ್ಣ | Shiva Rajkumar | Filmibeat Kannada

  ಈ ನಡುವೆ ಸಲವ್ ಮಾಕ್‌ಟೇಲ್ ಬೇರೆ ಭಾಷೆಗಳಿಗೆ ರೀಮೇಕ್ ಆಗುವ ಸುದ್ದಿ ಹರಿದಾಡುತ್ತಿತ್ತು. ಅದೀಗ ಅಧಿಕೃತವಾಗಿದೆ. ಕನ್ನಡದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರು ತೆಲುಗಿನಲ್ಲಿ ನಿರ್ದೇಶನ ಮಾಡುವುದು ಖಾತರಿಯಾಗಿದೆ. ಕನ್ನಡದಲ್ಲಿ ಡಾರ್ಲಿಂಗ್ ಕೃಷ್ಣ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸಿದ್ದರು. ನಿರ್ಮಾಣ ಮತ್ತು ನಾಯಕನ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಮುಂದೆ ಓದಿ...

  ನಾಗೇಶೇಖರ್ ನಿರ್ದೇಶನ

  ನಾಗೇಶೇಖರ್ ನಿರ್ದೇಶನ

  ಕನ್ನಡದಲ್ಲಿ 'ಸಂಜು ವೆಡ್ಸ್ ಗೀತಾ', 'ಮೈನಾ', 'ಅಮರ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ಈ ಚಿತ್ರವನ್ನು ತೆಲುಗಿನಲ್ಲಿ ರೀಮೇಕ್ ಮಾಡಲಿದ್ದಾರೆ. ಭವಾನಿ ರವಿ ಜತೆಗೂಡಿ ನಾಗೇಶೇಖರ್ ಕೂಡ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

  ತಮನ್ನಾ, ಸತ್ಯದೇವ್

  ತಮನ್ನಾ, ಸತ್ಯದೇವ್

  ಕನ್ನಡದಲ್ಲಿ ಮಿಲನಾ ನಾಗರಾಜ್ ನಿಭಾಯಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಿರ್ವವಹಿಸಲಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಪ್ರತಿಭಾವಂತ ನಟ ಸತ್ಯದೇವ್, ಡಾರ್ಲಿಂಗ್ ಕೃಷ್ಣ ಅವರ ಪಾತ್ರದಲ್ಲಿ ನಟಿಸಲಿದ್ದಾರೆ.

  ಸತ್ಯ ಹೆಗಡೆ ಕ್ಯಾಮೆರಾ

  ಸತ್ಯ ಹೆಗಡೆ ಕ್ಯಾಮೆರಾ

  ನಾಗಶೇಖರ್ ಮೂವೀಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಕಾಲ ಭೈರವ ಸಂಗೀತ ನೀಡಲಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಇರಲಿದೆ. ಕನ್ನಡದಲ್ಲಿ ರಘು ದೀಕ್ಷಿತ್ ಸಂಗೀತ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ನೀಡಿದ್ದರು.

  ಸೆಪ್ಟೆಂಬರ್ ವೇಳೆ ಶುರು

  ಸೆಪ್ಟೆಂಬರ್ ವೇಳೆ ಶುರು

  ಸಿನಿಮಾವನ್ನು ತೆಲುಗೀಕರಣಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ ಮಧ್ಯದ ವೇಳೆಗೆ ಚಿತ್ರೀಕರಣ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ಉಳಿದಂತೆ ಇತರೆ ಪ್ರಮುಖ ಪಾತ್ರಗಳು ಹಾಗೂ ತಂತ್ರಜ್ಞರ ತಂಡದ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.

  English summary
  Tamannaah and Satya Dev to star in the telugu remake of Love Mocktail directed by nagashekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X