ಪ್ರಭಾಸ್ ಮದ್ವೆ ಆದ್ಮೇಲೆ ನನ್ನ ಮದ್ವೆ ಎಂದ ನಟ; ಇದೇನಿದು ಹೊಸ ರಾಗ?
ಬಾಹುಬಲಿ ಪ್ರಭಾಸ್ ಮದುವೆ ವಿಚಾರ ಸಾಕಷ್ಟು ಬಾರಿ ಚರ್ಚೆ ಆಗಿದೆ. ವಯಸ್ಸು 40 ದಾಟಿದ್ರು ಯಂಗ್ ರೆಬಲ್ ಸ್ಟಾರ್ ಯಾಕೊ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಇದೀಗ ತೆಲುಗು, ತಮಿಳು ನಟರೆಲ್ಲಾ ಪ್ರಭಾಸ್ ಮದುವೆ ಆದ್ಮೇಲೆ ನಮ್ಮ ಮದುವೆ ಎಂದು ಹೊಸ ರಾಗ ಎಳೆಯಲು ಆರಂಭಿಸಿದ್ದಾರೆ.
ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಮದುವೆ ಈ ವರ್ಷ, ಮುಂದಿನ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಡಾರ್ಲಿಂಗ್ ದೊಡ್ಡಮ್ಮ ಕೂಡ ಆದಷ್ಟು ಬೇಗ ಅವನ ಮದುವೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಇದಕ್ಕೂ ಮುನ್ನ ದೊಡ್ಡಪ್ಪ ಕೃಷ್ಣಂರಾಜುಗೂ ಇದೇ ಪ್ರಶ್ನೆ ಎದುರಾಗುತ್ತಿತ್ತು.

'ಬಾಹುಬಲಿ' ಸರಣಿ ಮುಗಿದ ಬಳಿಕ ಮದುವೆ ಎಂದು ಪ್ರಭಾಸ್ ಹಿಂದೆ ಹೇಳಿದ್ದರು. ಇನ್ನು ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಮದುವೆ ಆಗುತ್ತಾರೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಆದರೆ ಯಾವುದು ನಿಜವಾಗಲಿಲ್ಲ. ಇದೆಲ್ಲದರ ನಡುವೆ ಸ್ಟಾರ್ ನಟರು ಮದುವೆ ಬಗ್ಗೆ ಪ್ರಶ್ನೆ ಕೇಳಿದರೆ ಪ್ರಭಾಸ್ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಪ್ರಭಾಸ್ ಮದುವೆ ಆದಮೇಲೆ ನಮ್ಮ ಮದುವೆ ಎನ್ನುತ್ತಿದ್ದಾರೆ. ಈ ಹಿಂದೆ ತೆಲುಗು ನಟ ಶರ್ವಾನಂದ್ ಸಂದರ್ಶನವೊಂದರಲ್ಲಿ ಇದೇ ಮಾತು ಹೇಳಿದ್ದರು. ಆದರೆ ಕಳೆದ ವರ್ಷ ಶರ್ವಾನಂದ್ ನಡೆದಿತ್ತು. ಇದೀಗ ತಮಿಳು ನಟ ವಿಶಾಲ್ ಇದೇ ಉತ್ತರ ಕೊಡಲು ಆರಂಭಿಸಿದ್ದಾರೆ. ತಮಿಳು ನಟ ಸದ್ಯ 'ರತ್ನಂ' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಂದರ್ಶನದ ವೇಳೆ ಈ ರೀತಿ ಜಾರಿಕೊಳ್ಳುವ ಉತ್ತರ ಕೊಡುತ್ತಿದ್ದಾರೆ.
ಈ ಹಿಂದೆ ಅನಿಶಾ ರೆಡ್ಡಿ ಎಂಬ ಹುಡುಗಿಯ ಜೊತೆ ವಿಶಾಲ್ ಮದುವೆ ನಿಶ್ಚಿಯವಾಗಿತ್ತು. ಇಬ್ಬರೂ ಉಂಗುರ ಬದಲಿಸಿಕೊಂಡಿದ್ದರು. ಆದರೆ ಬಳಿಕ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಅದಕ್ಕೂ ಮುನ್ನ ಸಾಕಷ್ಟು ನಟಿಯರ ಜೊತೆ ವಿಶಾಲ್ ಹೆಸರು ತಳುಕು ಹಾಕಿಕೊಂಡಿತ್ತು. ವರಲಕ್ಷ್ಮಿ ಶರತ್ ಕುಮಾರ್ ಜೊತೆ ವಿಶಾಲ್ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಯಾವುದು ನಿಜವಾಗಲಿಲ್ಲ.
ಸದ್ಯ ವಿಶಾಲ್ ನಟನೆಯ 'ರತ್ನಂ' ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಆಂಧ್ರದಲ್ಲೂ ಸಿನಿಮಾ ಪ್ರಚಾರ ನಡೀತಿದೆ. ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿರುವ ವಿಶಾಲ್, ತಮ್ಮ ಮದುವೆ ವಿಚಾರದ ಸ್ಪಷ್ಟನೆ ನೀಡಿದ್ದಾರೆ. ನೀವು ನನ್ನ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತೀರಾ ಎನ್ನುವುದು ಗೊತ್ತು. ನಾನೇ ಹೇಳ್ತೀನಿ, ಪ್ರಭಾಸ್ ಮದುವೆ ಮುಗಿದ ಮೇಲೆ ನನ್ನ ಮದುವೆ. ಅವರಿಗೆ ಮೊದಲ ಲಗ್ನ ಪತ್ರಿಕೆ ಕೊಡ್ತೀನಿ ಎಂದು ಹೇಳಿ ಸದ್ಯಕ್ಕೆ ಮದುವೆ ಇಲ್ಲ ಎಂದುಬಿಟ್ಟಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಭಾಸ್‌ಗೆ ಪ್ರಶ್ನೆ ಎದುರಾಗಿತ್ತು. ಶರ್ವಾನಂದ್ ಮದುವೆ ಯಾವಾಗ ಅಂದ್ರೆ, ಪ್ರಭಾಸ್ ಮದುವೆ ನಂತರ ಎನ್ನುತ್ತಾರೆ. ನೀವೇನು ಹೇಳ್ತೀರಾ ಎಂದಾಗ ನಾನು ಸಲ್ಮಾನ್ ಖಾನ್ ಹೆಸರು ತೆಗೆದುಕೊಳ್ಳಬೇಕು ಎನ್ನಿಸುತ್ತಿದೆ ಎಂದು ತಮಾಷೆ ಮಾಡಿ ಸುಮ್ಮನಾಗಿದ್ದರು.
ಇದೀಗ ವಿಶಾಲ್ ಇದೇ ರೀತಿಯ ಉತ್ತರ ಕೊಟ್ಟಿರುವುದು ಹೊಸ ಚರ್ಚೆ ಹುಟ್ಟಾಕ್ಕಿದೆ. ಪ್ರಭಾಸ್ ಮದುವೆ ವಿಚಾರ ಕೂಡ ಪ್ರಚಾರ ವಸ್ತುವಾಗಿ ಬಿಡ್ತಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











