ತೆಲುಗು ನಟನೊಂದಿಗೆ ಕೀರ್ತಿ ಸುರೇಶ್ ರೊಮ್ಯಾನ್ಸ್‌; ಮದುವೆ ಮುನ್ನ ದಿಢೀರನೇ ವೈರಲ್ ಆಗಿದ್ದೇಕೆ ವಿಡಿಯೋ?

By ಫಿಲ್ಮಿಬೀಟ್ ಡೆಸ್ಕ್

Keerthy Suresh: 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಸದ್ಯ ಸುದ್ದಿಯಲ್ಲಿರುವ ನಟಿ. ಹಲವು ವರ್ಷಗಳಿಂದ ಕೀರ್ತಿ ಸುರೇಶ್ ಮದುವೆ ಬಗ್ಗೆ ನೂರೆಂಟು ಸುದ್ದಿಗಳು ಹರಿದಾಡುತ್ತಲೇ ಇದ್ದವು. ಸಂಗೀತ ನಿರ್ದೇಶಕ, ಉದ್ಯಮಿ, ನಟರೊಂದಿಗೆ ಕೀರ್ತಿ ಸುರೇಶ್ ಮದುವೆ ಮ್ಯಾಟರ್ ಅನ್ನು ತಗಲಾಕಿದ್ದರು. ಕೆಲವೊಮ್ಮೆ ತಮ್ಮ ಮದುವೆ ಬಗ್ಗೆ ಹಬ್ಬಿದ ಸುದ್ದಿಗೆ ಬೇಸತ್ತು ಆಕ್ರೋಶದಿಂದ ಪ್ರತಿಕ್ರಿಯೆ ಕೂಡ ನೀಡಿದ್ದರು.

ಕೀರ್ತಿ ಸುರೇಶ್ ದಕ್ಷಿಣ ಭಾರತದ ಪ್ರಮುಖ ನಟಿ. ಈಕೆಯ ನಟನೆಗೆ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಮಲಯಾಳಂ, ತಮಿಳು, ತೆಲುಗು ಬಳಿಕ ಈಗ ಹಿಂದಿ ಭಾಷೆಯ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಹೀಗೆ ವೃತ್ತಿ ಬದುಕಿನಲ್ಲಿಯೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಕೀರ್ತಿ ಸುರೇಶ್ ಶೀಘ್ರದಲ್ಲಿಯೇ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

Tamil actress Keerthy Suresh romance with Nithiin in Rang De movie is trending after three years

ಬಹುಭಾಷಾ ನಟಿ ಕೀರ್ತಿ ಸುರೇಶ್ ಮದುವೆ ಫಿಕ್ಸ್ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಬಾಲ್ಯದ ಗೆಳೆಯನನ್ನೇ ಕೀರ್ತಿ ಸುರೇಶ್ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮುಂದಿನ ತಿಂಗಳು ಮದುವೆ ಅಂತಲೂ ಸುದ್ದಿಯಾಗಿದೆ. ಇದೇ ಬೆನ್ನಲ್ಲೇ ಕೀರ್ತಿ ಸುರೇಶ್ ತೆಲುಗು ನಟನೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಆ ವೈರಲ್ ವಿಡಿಯೋ ಹಿನ್ನೆಲೆಯೇನು? ಇಲ್ಲಿದೆ ಡಿಟೈಲ್ಸ್.

ಕೀರ್ತಿ ಸುರೇಶ್ ಬಾಲ್ಯದ ಗೆಳೆಯ ಆಂಟನಿ ತಟ್ಟಿಲ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋದು ಸುದ್ದಿ. ಈ ಬಗ್ಗೆ ಕೀರ್ತಿ ಸುರೇಶ್ ಇದೂವರೆಗೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿದಲ್ಲ. ಆದರೂ, ಗೋವಾದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆ ಆಗಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ನಿತಿನ್ ಜೊತೆ ನಟಿಸಿದ ರೊಮ್ಯಾಂಟಿಕ್ ದೃಶ್ಯ ವೈರಲ್ ಆಗುತ್ತಿದೆ.

Tamil actress Keerthy Suresh romance with Nithiin in Rang De movie is trending after three years

ಮೂರು ವರ್ಷಗಳ ಹಿಂದೆ ಕೀರ್ತಿ ಸುರೇಶ್ ಹಾಗೂ ತೆಲುಗು ನಟ ನಿತಿನ್ ಜೊತೆ 'ರಂಗ್‌ ದೇ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಜೋಡಿ ಟಾಲಿವುಡ್‌ನ ಕ್ಯೂಟ್ ಪೇರ್ ಅಂತಲೇ ಫೇಮಸ್ ಆಗಿತ್ತು. ಇದೇ ಚಿತ್ರದ ಎಮಿಟೋ ಇದೆ ಅನ್ನುವ ಹಾಡಿನಲ್ಲಿ ಕೀರ್ತಿ ಸುರೇಶ್ ಹಾಗೂ ನಿತಿನ್ ಇಬ್ಬರೂ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದರು. ಇದೇ ಹಾಡು ಕೀರ್ತಿ ಸುರೇಶ್ ಮದುವೆ ವಿಷಯ ಕೇಳಿ ಬಂದ ಬಳಿಕ ವೈರಲ್ ಆಗಿದೆ.

ಅಷ್ಟಕ್ಕೂ ಯಾರೋ ಕಿಡಿಗೇಡಿಗಳು ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಆದರೆ, ಕೀರ್ತಿ ಸುರೇಶ್ ಇಂತಹ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದು ತೀರಾ ಕಡಿಮೆ. ಕೀರ್ತಿ ಸುರೇಶ್ ಅಪರೂಪಕ್ಕೆ ಎಂಬಂತೆ ವೃತ್ತಿ ಬದುಕಿನಲ್ಲಿ ಇಂತಹ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಂಡಿದ್ದಾರೆ. ಅದನ್ನೇ ಇಟ್ಟುಕೊಂಡು ವೈರಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸದ್ಯ ಈ ವಿಡಿಯೋ ಕೂಡ ಸಂಚಲನ ಸೃಷ್ಟಿಸುತ್ತಿದೆ.

ಕೀರ್ತಿ ಸುರೇಶ್ ಸದ್ಯಕ್ಕೀಗ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ ಸಿನಿಮಾ 'ಬೇಬಿ ಜಾನ್'ನಲ್ಲಿ ನಟಿಸಿದ್ದು ಅದು ಬಿಡುಗಡೆ ಸಜ್ಜಾಗಿದೆ. ಇದೇ ಹೊತ್ತಲ್ಲೇ ಮದುವೆ ಮ್ಯಾಟರ್ ಹೆಚ್ಚು ಚರ್ಚೆಯಲ್ಲಿದೆ. ಜೊತೆಗೆ ರೊಮ್ಯಾಂಟಿಕ್ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಇದೆಲ್ಲವನ್ನು ಬಿಟ್ಟು ಡಿಸೆಂಬರ್ 25ಕ್ಕೆ ರಿಲೀಸ್ ಆಗುತ್ತಿರುವ 'ಬೇಬಿ ಜಾನ್' ಸಿನಿಮಾವನ್ನು ಫ್ಯಾನ್ಸ್ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

More from Filmibeat

English summary
Tamil actress Keerthy Suresh romance with Nithiin in Rang De movie is trending after three years;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X