For Quick Alerts
  ALLOW NOTIFICATIONS  
  For Daily Alerts

  ಮಗುವನ್ನು ಪತಿಯಿಂದ ಬೇರೆ ಮಾಡಲ್ಲ: ಮಾಜಿ ಪತಿ ಬಗ್ಗೆ ಮಹಾಲಕ್ಷ್ಮಿ

  |

  ಕೆಲವು ದಿನಗಳ ಹಿಂದಷ್ಟೇ ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ವಿವಾಹ ಜರುಗಿದೆ. ಅಲ್ಲಿಂದ ಇವರಿಬ್ಬರ ಮದುವೆನೇ ಚರ್ಚೆಯಲ್ಲಿದೆ. ಈ ಮಧ್ಯೆ ವಿವಾಹದ ಬಳಿಕ ಇದೇ ಮೊದಲ ಬಾರಿಗೆ ನಟಿ ಮಹಾಲಕ್ಷ್ಮಿ ತನ್ನ ಮಾಜಿ ಪತಿಯ ಬಗ್ಗೆ ಮಾತಾಡಿದ್ದಾರೆ.

  ರವೀಂದ್ರನ್ ಚಂದ್ರಶೇಖರನ್ ಕಾಲಿವುಡ್‌ನ ನಿರ್ಮಾಪಕ. ಲಿಬ್ರಾ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯಿದೆ. ಈ ಸಂಸ್ಥೆಯಡಿ 'ಚುಟ್ಟಕಥಾ', 'ಮುರುಂಗೈಕಾಯಿ ಚಿಪ್ಸ್' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹ ರವೀಂದ್ರನ್ ನಡೆಸುತ್ತಾರೆ.

  ನಿರ್ಮಾಪಕನ ಜೊತೆ ನಟಿ ಮದುವೆ: ನಿಜವಾ-ಸುಳ್ಳಾ? ಗೊಂದಲದಲ್ಲಿ ಅಭಿಮಾನಿಗಳುನಿರ್ಮಾಪಕನ ಜೊತೆ ನಟಿ ಮದುವೆ: ನಿಜವಾ-ಸುಳ್ಳಾ? ಗೊಂದಲದಲ್ಲಿ ಅಭಿಮಾನಿಗಳು

  ಇತ್ತ ಮಹಾಲಕ್ಷ್ಮಿ ಮೊದಲು ನಿರೂಪಕಿಯಾಗಿ ಕೆಲಸ ಆರಂಭಿಸಿದ್ದರು. ಬಳಿಕ ಕಿರುತೆರೆಯಲ್ಲಿ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಹಾಲಕ್ಷ್ಮಿ ಹಾಗೂ ರವೀಂದ್ರನ್ ಇಬ್ಬರೂ ಸೆಪ್ಟೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  ರವೀಂದ್ರನ್-ಮಹಾಲಕ್ಷ್ಮಿ ವಿವಾಹ

  ರವೀಂದ್ರನ್-ಮಹಾಲಕ್ಷ್ಮಿ ವಿವಾಹ

  ನಿರ್ಮಾಪಕ ರವೀಂದ್ರನ್ ಹಾಗೂ ನಟಿ ಮಹಾಲಕ್ಷ್ಮಿ ಮದುವೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ತಿರುಪತಿಯಲ್ಲಿ ಇಬ್ಬರೂ ಮದುವೆ ಆಗಿದ್ದರಿಂದ ಆಪ್ತರು ಹಾಗೂ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದರು. ವಿವಾಹದ ಫೋಟೊಗಳು ವೈರಲ್ ಆಗುತ್ತಿದ್ದಂತೆ ಜೋಡಿಗೆ ಕೆಲವರು ಶುಭ ಕೋರಿದರೆ, ಮತ್ತೆ ಕೆಲವರು ಹಣಕ್ಕಾಗಿಯೇ ಮದುವೆ ಆಗಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

  ದಂಪತಿಸ ಹನಿಮೂನ್

  ದಂಪತಿಸ ಹನಿಮೂನ್

  ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೇ ಟ್ರೋಲ್ ಆದರೂ, ದಂಪತಿ ಇದಕ್ಕೆಲ್ಲಾ ತಲೆಕೆಡಿಸಿಕೊಂಡಿಲ್ಲ. ಮಹಾಬಲಿಪುರಂನ ಇಂಟರ್‌ಕಾಂಟಿನೆಂಟಲ್ ರೆಸಾರ್ಟ್‌ನಲ್ಲಿ ದಂಪತಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. 'ಲೈಫ್ ಈಸ್ ಬ್ಯೂಟಿಫುಲ್' ಎಂದು ಮಹಾಲಕ್ಷ್ಮಿ ಬರೆದುಕೊಂಡಿದ್ದರೆ, "ಬದುಕಿಗೆ ಪ್ರೀತಿ ಬೇಕು, ಪ್ರೀತಿಗೆ ಮಹಾಲಕ್ಷ್ಮಿ ಬೇಕು" ಎಂದು ನಿರ್ಮಾಪಕ ರವೀಂದ್ರನ್ ಬರೆದು ಪೋಸ್ಟ್ ಮಾಡಿದ್ದಾರೆ.

  ಬಲವಂತದ ಮದುವೆಯಲ್ಲ

  ಬಲವಂತದ ಮದುವೆಯಲ್ಲ

  ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಮದುವೆ ವೈರಲ್ ಆಗುತ್ತಿದ್ದಂತೆ ಸಂದರ್ಶನ ನೀಡಲು ಆರಂಭಿಸಿದ್ದಾರೆ. ಇದರಲ್ಲಿ ಬಲವಂತವಾಗಿ ನಾನು ಮದುವೆಯಾಗಿಲ್ಲ. ಪತಿ ರವೀಂದ್ರನ್
  ಮದುವೆಯಾಗುವಂತೆ ಬಲವಂತ ಪಡಿಸಿಲ್ಲ ಎಂದು ಹೇಳಿದ್ದಾರೆ. ಒಬ್ಬರನ್ನೊಬ್ಬರು ಪ್ರೀತಿಸಿ ಅರ್ಥ ಮಾಡಿಕೊಂಡ ಬಳಿಕ ಮದುವೆಯಾಗಿದ್ದೇವೆ. ಆದರೆ, ನಮ್ಮ ಪ್ರೀತಿ ಮಾಧ್ಯಮದವರಿಗೆ ತಿಳಿಯದಂತೆ ನೋಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

  ಮೊದಲ ಪತಿ ಬಗ್ಗೆ ಹೇಳಿದ್ದೇನು?

  ಮೊದಲ ಪತಿ ಬಗ್ಗೆ ಹೇಳಿದ್ದೇನು?

  ಇದೇ ವೇಳೆ ಮಹಾಲಕ್ಷ್ಮಿ ಮೊದಲ ಪತಿ ಅನಿಲ್‌ ಅವರಿಂದ ಮಗುವನ್ನು ಬೇರ್ಪಡಿಸಿದ್ದಾರೆಂಬ ಆರೋಪ ಕೂಡ ಕೇಳಿ ಬಂದಿತ್ತು. ಅದಕ್ಕೂ ಮುಕ್ತವಾಗಿ ಮಹಾಲಕ್ಷ್ಮಿ ಉತ್ತರಿಸಿದ್ದಾರೆ. ನಾವು ವಿಚ್ಛೇದನ ಪಡೆದಲ್ಲಿಂದ ಮಗ ನನ್ನ ಬಳಿಯೇ ಇದ್ದಾನೆ. ಮೊದಲ ಪತಿ ಈಗಾಗಲೇ ಬೇರೆ ಮದುವೆಯಾಗಿದ್ದಾರೆ. ಆ ಬಳಿಕವೇ ನಾನು ಇನ್ನೊಂದು ಮದುವೆಯಾಗಿದ್ದೇನೆ. ಈ ಮದುವೆಗೆ ನನ್ನ ಮಗನ ಅನುಮತಿಯೂ ಕೂಡ ಇದೆ ಎಂದು ಸಂದರ್ಶನ ನೀಡಿದ್ದಾರೆ.

  English summary
  Tamil Serial Actress Mahalakshmi Talks About Her First Husband, Know More.
  Saturday, September 10, 2022, 10:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X