For Quick Alerts
  ALLOW NOTIFICATIONS  
  For Daily Alerts

  'ಅಸುರನ್' ತೆಲುಗು ರಿಮೇಕ್ ಟೈಟಲ್ ಫಿಕ್ಸ್: ಭಯಾನಕವಾಗಿದೆ ಫಸ್ಟ್ ಲುಕ್

  |

  ತಮಿಳಿನ ಸೂಪರ್ ಹಿಟ್ 'ಅಸುರನ್' ಸಿನಿಮಾ ರಿಲೀಸ್ ಆಗಿ ನಾಲ್ಕು ತಿಂಗಳಾಗಿದೆ. ಕಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ನಟ ಧನುಷ್ ನಾಯಕನಾಗಿ ಮಿಂಚಿದ್ದಾರೆ. ವೆಟ್ರಿಮಾರನ್ ಸಾರಥ್ಯದಲ್ಲಿ ಮೂಡಿ ಬಂದ ಪಕ್ಕ ರಾ ಫ್ಲೇವರ್ ನ ಸಿನಿಮಾವಿದು.

  ತಮಿಳಿನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡ ಅಸುರನ್, ತೆಲುಗಿಗೆ ರಿಮೇಕ್ ಆಗುತ್ತಿದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೀಗ ಚಿತ್ರದ ಟೈಟಲ್ ಫಸ್ಟ್ ಲುಕ್ ರಿವೀಲ್ ಆಗಿದೆ. ಹೌದು, ತೆಲುಗಿನಲ್ಲಿ 'ನಾರಪ್ಪ' ಹೆಸರಿನಲ್ಲಿ ಸಿನಿಮಾ ತಯಾರಾಗುತ್ತಿದ್ದು, ಚಿತ್ರದ ಫಸ್ಟ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

  ಅನುಷ್ಕಾ ಶೆಟ್ಟಿ ಚಿತ್ರವನ್ನ ತಮಿಳು ಸಿನಿ ಅಂಗಳದಲ್ಲಿ ಕೇಳೋರೇ ಇಲ್ಲ ಕಣ್ರೀ.!ಅನುಷ್ಕಾ ಶೆಟ್ಟಿ ಚಿತ್ರವನ್ನ ತಮಿಳು ಸಿನಿ ಅಂಗಳದಲ್ಲಿ ಕೇಳೋರೇ ಇಲ್ಲ ಕಣ್ರೀ.!

  ನಾರಪ್ಪ ಚಿತ್ರಲ್ಲಿ ವೆಂಕಟೇಶ್ ದಗ್ಗುಬಾಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಗಳು ಭಯಂಕರವಾಗಿದೆ. ಹಳ್ಳಿ ಸ್ಟೈಲ್ ನಲ್ಲಿ ಕತ್ತಿ, ಲಾಂಗ್ ಹಿಡಿದಿರುವ ವೆಂಕಟೇಶ್ ಮುಖದಲ್ಲಿ ರಕ್ತ ಮೆತ್ತಿಕೊಂಡಿದೆ. ಪೋಸ್ಟರ್ ನೋಡುವುದಕ್ಕೆ ಇಷ್ಟು ಭಯಾನಕವಾಗಿದೆ ಅಂದರೆ ಇನ್ನು ಸಿನಿಮಾ ಹೇಗೆ ಮೂಡಿ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  ಅಂದ್ಹಾಗೆ ನಾರಪ್ಪ ಚಿತ್ರಕ್ಕೆ ಶ್ರೀಕಾಂತ್ ಅಡ್ಡಲಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವೆಂಕಟೇಶ್ ಎಡರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡ ಅಸುರನ್ ತೆಲುಗಿನಲ್ಲಿ ನಾರಪ್ಪ ಕೂಡ ಅಷ್ಟೆ ದೊಡ್ಡ ಮಟ್ಟಕ್ಕೆ ಹಿಟ್ ಆಗುತ್ತಾ ಎನ್ನುವುದು ಕಾದುನೋಡಬೇಕು.

  ಇನ್ನು ಅಸುರನ್ ತಮಿಳಿನ ವೆಕೈ ಕಾದಂಬರಿ ಆಧಾರಿತ ಸಿನಿಮಾ. 1980ರ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದಲ್ಲಿನ ಜಾತಿ ಮತ್ತು ರಾಜಕಾರಣವನ್ನು ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈಗ ತೆಲುಗಿಗೂ ರಿಮೇಕ್ ಆಗುತ್ತಿರುವುದು ತೆಲುಗು ಚಿತ್ರಾಭಿಮಾನಿಗಳಿಗೆ ಸಂತಸ ತಂದಿದೆ.

  English summary
  Tamil Super hit Asuran movie Telugu remake titled Narappa. Actor Venkatesh Daggubati starrer Narappa movie first look released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X