'ಆದಿಪುರುಷ್' ಪ್ರದರ್ಶನ ಆಗುವ ಎಲ್ಲಾ ಥಿಯೇಟರ್‌ಗಳಲ್ಲೂ ಹನುಮಂತನಿಗಾಗಿ ಒಂದು ಸೀಟ್ ಮೀಸಲು ಯಾಕೆ?
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಜೂನ್ 16ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಇಂದು(ಜೂನ್ 6) ಸಂಜೆ ತಿರುಪತಿಯಲ್ಲಿ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ರಾಮಾಯಣ ಕಾವ್ಯ ಆಧರಿಸಿ ಓಂ ರಾವುತ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸದ್ಯ ಸಿನಿಮಾ ಪ್ರದರ್ಶನವಾಗುವ ಎಲ್ಲಾ ಥಿಯೇಟರ್‌ಗಳಲ್ಲಿ ಒಂದು ಸೀಟ್ ಖಾಲಿ ಬಿಡಲು ಚಿತ್ರತಂಡ ಮುಂದಾಗಿದೆ.
ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದರೆ ಸೀತೆಯಾಗಿ ಕೃತಿ ಸನೂನ್ ಮಿಂಚಿದ್ದಾರೆ. 500 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ಈ ಚಿತ್ರವನ್ನು ತ್ರಿಡಿಯಲ್ಲಿ ಕಟ್ಟಿಕೊಡಲಾಗಿದೆ. ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿಸಿಂಗ್, ಹನುಮಂತನಾಗಿ ದೇವದತ್ತ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. 5 ಭಾಷೆಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಪ್ರೀ ರಿಲೀಸ್ ಬ್ಯುಸಿನೆಸ್ ದಾಖಲೆ ಬರೆದಿದೆ.

ಕಳೆದ ವರ್ಷ ರಿಲೀಸ್ ಆಗಿದ್ದ 'ಆದಿಪುರುಷ್' ಭಾರೀ ಟೀಕೆಗೆ ಗುರಿಯಾಗಿತ್ತು. ಆದರೂ ಕೂಡ ಟೀಸರ್ ಸೂಪರ್ ಹಿಟ್ ಆಗಿತ್ತು. ಪ್ರಭಾಸ್ ಕ್ರೇಜ್ ಎಂಥದ್ದು ಎಂದು ಸಾಬೀತಾಗಿತ್ತು. ಹಾಗಾಗಿ ಅವಸರ ಮಾಡದೇ ನಂತರ ಒಂದಷ್ಟು ಸಮಯ ತೆಗದುಕೊಂಡು ಸಿನಿಮಾ ರೀವರ್ಕ್ ಮಾಡಲಾಗಿತ್ತು. ಇದೀಗ ಹೊಸ ರೂಪದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಟೀಸರ್‌ಗಿಂತ ಟ್ರೈಲರ್ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. 'ಆದಿಪುರುಷ್' ಮ್ಯೂಸಿಕಲ್ ಸಿನಿಮಾ ಕೂಡ ಹೌದು. ಅಜಯ್-ಅತುಲ್ ಹಾಗೂ ಸಚೇತ್ - ಪರಂಪರ ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ.
ಹನುಮಂತನಿಗಾಗಿ ಒಂದು ಸೀಟ್?
'ಆದಿಪುರುಷ್' ರಿಲೀಸ್‌ಗೆ ಸಂಬಂಧಿಸಿದಂತೆ ಇಂಟ್ರೆಸ್ಟಿಂಗ್ ನ್ಯೂಸ್ ಹರಿದಾಡ್ತಿದೆ. ಸಿನಿಮಾ ಬಿಡುಗಡೆಯಾಗಲಿರುವ ಥಿಯೇಟರ್‌ಗಳಲ್ಲಿ ಒಂದು ಸೀಟನ್ನು ಖಾಲಿ ಬಿಡಲು ಚಿತ್ರತಂಡ ತೀರ್ಮಾನಿಸಿದೆಯಂತೆ. ಯಾಕಂದರೆ ರಾಮ ಎಲ್ಲೇ ಇದ್ದರೂ ಹನುಮಂತನೂ ಅಲ್ಲೇ ಇರುತ್ತಾನೆ ಎನ್ನುವ ನಂಬಿಕೆ ಹಲವರಲ್ಲಿದೆ. ರಾಮನಿಗೆ ಸಂಬಂಧಿಸಿದ ಹಬ್ಬ ಹರಿದಿನಗಳು, ಕಾರ್ಯಕ್ರಮಗಳು ನಡೆಯುತ್ತವೆಯೋ ಅಲ್ಲಿ ಹನುಮಂತನೂ ಇರುತ್ತಾನೆ ಎಂದು ಜನ ನಂಬಿದ್ದಾರೆ.
ಹನುಮ ಸಿನಿಮಾ ನೋಡಲು ಬರ್ತಾನೆ?
ರಾಮಾಯಣ ಕಾವ್ಯ ಆಧರಿಸಿ, ಶ್ರೀರಾಮನ ಚರಿತ್ರೆಯನ್ನು ಹೇಳುತ್ತಿರುವ 'ಆದಿಪುರುಷ್' ಸಿನಿಮಾ ವೀಕ್ಷಿಸಲು ಹನುಮ ಬರ್ತಾನೆ ಎನ್ನುವ ಸೂಚಕವಾಗಿ ಎಲ್ಲಾ ಥಿಯೇಟರ್‌ಗಳಲ್ಲಿ ಒಂದು ಸೀಟು ಖಾಲಿ ಇಡಲು ತಂಡ ಮುಂದಾಗಿದೆ. 'ಆದಿಪುರುಷ್' ಸಿನಿಮಾ ನಿರ್ಮಾಪಕರು ಹಿಂದೂಗಳ ನಂಬಿಕೆಯನ್ನು ಗೌರವಿಸುತ್ತಾರೆ ಎನ್ನುವುದು ಇಲ್ಲಿ ವಿಶೇಷವಾಗಿದೆ.

ತಿರುಪತಿಯಲ್ಲಿ ಈವೆಂಟ್
ಸಂಜೆ ತಿರುಪತಿಯ ತಾರಕರಾಮ ಸ್ಟೇಡಿಯಂನಲ್ಲಿ 'ಆದಿಪುರುಷ್' ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಇಡೀ ತಿರುಪತಿ ಈಗಾಗಲೇ ಅಯೋಧ್ಯೆಯನ್ನು ನೆನಪಿಸುವಂತಿದೆ. ಪ್ರಭಾಸ್‌ನ 50 ಅಡಿ ಹೊಲೊಗ್ರಾಮ್ ಅನ್ನು ಪ್ರದರ್ಶಿಸಲಿದ್ದಾರೆ. 100 ನೃತ್ಯಗಾರರು ಮತ್ತು 100 ಗಾಯಕರು ಶ್ರೀರಾಮನ ಭಕ್ತಿಗೀತೆಗಳನ್ನು ಹಾಡಲಿದ್ದಾರೆ. ಲಕ್ಷಾಂತರ ಜನ ಸೇರಲು ವೇದಿಕೆ ಸಿದ್ಧವಾಗಿದೆ.. ಚಿನ್ನ ಜೀಯರ್ ಸ್ವಾಮಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮತ್ತೊಂದು ಟ್ರೈಲರ್ ರಿಲೀಸ್
ಈಗಾಗಲೇ ಚಿತ್ರದ ಒಂದು ಟ್ರೈಲರ್ ರಿಲೀಸ್ ಆಗಿದೆ. ಇದೀಗ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮತ್ತೊಂದು ಟ್ರೈಲರ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡುವ ಪ್ರಯತ್ನ ನಡೀತಿದೆ. ಮೊದಲ ಟ್ರೈಲರ್‌ನಲ್ಲಿ ರಾವಣನನ್ನು ಅಷ್ಟಾಗಿ ತೋರಿಸಿರಲಿಲ್ಲ. ರಾಮ- ರಾವಣರ ಯುದ್ಧದ ಸನ್ನಿವೇಶಗಳನ್ನು ಸೇರಿಸಿ ಹೊಸ ಟ್ರೈಲರ್ ಕಟ್ ಮಾಡಿದ್ದಾರಂತೆ. ಒಟ್ನಲ್ಲಿ 'ಆದಿಪುರುಷ್' ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ತಿದೆ.


Click it and Unblock the Notifications











