11 ಭಾಷೆಗಳಲ್ಲಿ ಪ್ರಭಾಸ್, ಮಹೇಶ್‌ಗೆ 'ಹನುಮಾನ್' ಸವಾಲ್: ಯುವನಟನ ಧೈರ್ಯ ಮೆಚ್ಚಲೇಬೇಕು
ಪೌರಾಣಿಕ, ಫ್ಯಾಂಟಸಿ ಸಿನಿಮಾಗಳ ಸಂಖ್ಯೆ ಚಿತ್ರರಂಗದಲ್ಲಿ ಹೆಚ್ಚಾಗುತ್ತಿದೆ. 'ಕಾರ್ತಿಕೇಯ-2' ಸಿನಿಮಾ ಉತ್ತರ ಭಾರತದಲ್ಲೂ ಸದ್ದು ಮಾಡಿತ್ತು. ಇದೀಗ ಯುವನಟರ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಿದೆ. ತೆಲುಗಿನಲ್ಲಿ ತೇಜ ಸಜ್ಜಾ 'ಹನುಮಾನ್' ಎನ್ನುವ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈಗಾಗಲೇ ಈ ಸೂಪರ್ ಹೀರೋ ಸಿನಿಮಾ ಟೀಸರ್ ರಿಲೀಸ್ ಆಗಿ ನಿರೀಕ್ಷೆ ಹುಟ್ಟುಹಾಕಿದೆ.
'ಕಲ್ಕಿ', 'ಜೊಂಬಿ ರೆಡ್ಡಿ' ಸಿನಿಮಾಗಳ ನಿರ್ದೇಶಕ ಪ್ರಶಾಂತ್ ವರ್ಮಾ 'ಹನುಮಾನ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಟೈಟಲ್‌ನ ಹನು ಮ್ಯಾನ್ ಎನ್ನು ಅರ್ಥ ಬರುವಂತೆಯೂ ಚಿತ್ರತಂಡ ಡಿಸೈನ್ ಮಾಡಿದೆ. ಪ್ರೀಮೆಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ನಿರಂಜನ್ ರೆಡ್ಡಿ 'ಹನುಮಾನ್' ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಬೆಂಗಳೂರು ಮೂಲದ ನಟಿ ಅಮೃತಾ ಅಯ್ಯರ್ ನಾಯಕಿಯಾಗಿ ಮಿಂಚಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ವಿನಯ್ ರೈ, ವೆನ್ನೆಲ ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಚಿರಂಜೀವಿ ನಟನೆಯ 'ಇಂದ್ರ' ಸಿನಿಮಾ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಚಿರಂಜೀವಿ ಬಾಲ್ಯದ ಪಾತ್ರದಲ್ಲಿ ನಟಿಸಿದ್ದ ತೇಜ ಸಜ್ಜಾ ನಟಿಸಿದ್ದರು. 'ಜೊಂಬಿ ರೆಡ್ಡಿ' ಚಿತ್ರದಲ್ಲಿ ಹೀರೊ ಆಗಿ ಚಿತ್ರರಂಗಕ್ಕೆ ಮತ್ತೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ 'ಹನುಮಾನ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ.
ಸಂಕ್ರಾಂತಿಗೆ ಬರ್ತಿದ್ದಾನೆ 'ಹನುಮಾನ್'
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ 'ಹನುಮಾನ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬರೋದು ತಡವಾಗುತ್ತಿದೆ. ಮುಂದಿನ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 12ಕ್ಕೆ ಸಿನಿಮಾ ತೆರೆಗೆ ತರೋದಾಗಿ ಈಗ ಘೋಷಿಸಲಾಗಿದೆ. ಏಕಕಾಲಕ್ಕೆ 11 ಭಾಷೆಗಳಲ್ಲಿ ಈ ಸೂಪರ್ ಹೀರೊ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಬರಲಿದೆ.

ಮಹೇಶ್, ಪ್ರಭಾಸ್‌ಗೆ ಸವಾಲ್
ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಮಹೇಶ್ ಬಾಬು ನಟನೆಉ 'ಗುಂಟೂರು ಖಾರಂ' ಸಿನಿಮಾ ಅದೇ ಸಮಯದಲ್ಲಿ ರಿಲೀಸ್ ಆಗುತ್ತಿದೆ. ಇನ್ನು ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟನೆಯ 'ಪ್ರಾಜೆಕ್ಟ್- ಕೆ' ಚಿತ್ರವನ್ನು ಕೂಡ ಸುಗ್ಗಿ ಹಬ್ಬದ ವೀಕೆಂಡ್‌ನಲ್ಲಿ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಈ ಎರಡು ದೊಡ್ಡ ಸಿನಿಮಾಗಳ ನಡುವೆ 'ಹನುಮಾನ್' ರಿಲೀಸ್‌ಗೆ ರೆಡಿಯಾಗಿದೆ.
ತಡವಾಗುತ್ತಾ 'ಪ್ರಾಜೆಕ್ಟ್- ಕೆ'?
'ಹನುಮಾನ್' ಚಿತ್ರವನ್ನು ಸಂಕ್ರಾಂತಿಗೆ ರಿಲೀಸ್ ಮಾಡುತ್ತಿರುವ ಅಚ್ಚರಿ ಮೂಡಿದೆ. 'ಪ್ರಾಜೆಕ್ಟ್- ಕೆ' ರಿಲೀಸ್ ತಡವಾಗುತ್ತದೆ ಎನ್ನುವ ಕಾರಣಕ್ಕೆ ಆ ಜಾಗಕ್ಕೆ ತೇಜ ಸಜ್ಜಾ ಸಿನಿಮಾ ಬಂದಿರುವ ಸಾಧ್ಯತೆಯಿದೆ. ಇತ್ತೀಚೆಗೆ ಕಮಲ್ ಹಾಸನ್ 'ಪ್ರಾಜೆಕ್ಟ್- ಕೆ' ತಂಡ ಸೇರಿದ್ದಾರೆ. ಹಾಗಾಗಿ ಶೂಟಿಂಗ್ ತಡವಾಗಲಿದ್ದು ಸಿನಿಮಾ ಸುಗ್ಗಿ ಹಬ್ಬಕ್ಕೆ ಬರೋದು ಅನುಮಾನ ಎನ್ನಲಾಗ್ತಿದೆ. ಸಿನಿಮಾ ಮುಂದಿನ ವರ್ಷ ಸಮ್ಮರ್‌ಗೆ ರಿಲೀಸ್ ಆಗುವ ಸಾಧ್ಯೆತೆಯಿದೆ.
'ಹನುಮಾನ್'ಗೆ ಆಂಜನೇಯನ ಬಲ
ಈ ಚಿತ್ರದಲ್ಲಿ ತೇಜ ಸಜ್ಜಾ ಹನುಮಂತು ಎನ್ನುವ ಯುವಕನ ಪಾತ್ರದಲ್ಲಿ ನಟಿಸ್ತಿದ್ದಾರೆ. ಆಂಜನೇಯ ಶಕ್ತಿಯಿಂದ ದುಷ್ಟರ ಸಂಹಾರ ಮಾಡುವ ಸೂಪರ್ ಹೀರೊ ಆಗಿ ಅಬ್ಬರಿಸಿದ್ದಾರೆ. ಅಷ್ಟಕ್ಕೂ ಆತನಿಗೆ ಆ ಶಕ್ತಿ ಹೇಗೆ ಸಿಕ್ತು? ಅದರಿಂದ ಏನೆಲ್ಲಾ ಆಗುತ್ತದೆ? ಅನ್ನೋದೇ ಸಿನಿಮಾ ಕಥೆ. ಅಂಜನಾದ್ರಿ ಎನ್ನುವ ಕಾಲ್ಪನಿಕ ಊರಿನ ಹಿನ್ನೆಲೆಯಲ್ಲಿ ಕಥೆ ಕಟ್ಟಕೊಡಲಾಗಿದೆ. ಈಗಾಗಲೇ ಚಿತ್ರದ ಹಿಂದಿ ವರ್ಷನ್ ಹಕ್ಕುಗಳನ್ನು ಜೀ5 ಸಂಸ್ಥೆ 16 ಕೋಟಿ ರೂ.ಗೆ ಖರೀದಿಸಿದೆ. ಈ ಚಿತ್ರವನ್ನು ಭಾರತದ ಭಾಷೆಗಳಲ್ಲಿ ಮಾತ್ರವಲ್ಲ ಕೊರಿಯಾ, ಜಪಾನೀಸ್ ಹಾಗೂ ಚೈನೀಸ್ ಭಾಷೆಗಳಲ್ಲೂ ರಿಲೀಸ್ ಮಾಡಲಾಗ್ತಿದೆ.


Click it and Unblock the Notifications











