Jai Hanuman: ಸೂಪರ್ ಹಿಟ್ 'ಹನುಮಾನ್' ಚಿತ್ರದ ಸೀಕ್ವೆಲ್ ತರಲು ಸಜ್ಜಾದ ಪ್ರಶಾಂತ್ ವರ್ಮಾ

ಈ ವರ್ಷ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾದ ಸಿನಿಮಾಗಳಲ್ಲಿ ಇನ್ನು ಚಿತ್ರಮಂದಿರಗಳಲ್ಲಿ ಸುಂಟರಗಾಳಿಯಂತೆ ಸುತ್ತುತ್ತಿರುವುದು ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ, 'ಹನುಮಾನ್'. ಯುವನಟ ತೇಜ ಸಜ್ಜಾ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಜೋಡಿ ಮೋಡಿ ಮಾಡಿದ್ದು, ಪ್ರೇಕ್ಷಕರು ಈ ಸೂಪರ್ ಹೀರೋ ಕಾನ್ಸೆಪ್ಟ್‌ಗೆ ಫಿದಾ ಆಗಿದ್ದಾರೆ.

ಈಗ 'ಹನುಮಾನ್' ಸಿನಿಮಾದ ಹೊಸ ಅಪ್‌ಡೇಟ್ ಪ್ರಕಾರ, ಚಿತ್ರದ ಸೀಕ್ವೆಲ್‌ಗೆ ಸಿದ್ಧತೆ ನಡೆಯುತ್ತಿದೆ. ಹೌದು.. ಜನವರಿ 22 ರಂದು ದೇಶವೇ ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಲ್ಲಿತ್ತು. ಇದೇ ವೇಳೆ ಹಲವು ಸಿನಿಮಾಗಳು ಘೋಷಣೆಯಾಗಿವೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ "ಶ್ರೀ ರಾಮ್, ಜೈ ಹನುಮಾನ್" ಪೋಸ್ಟರ್ ರಿಲೀಸ್ ಆಗಿದೆ. ಇದರ ಬೆನ್ನಲ್ಲೇ ಹನುಮಾನದ ಸಿನಿಮಾದ ಸೀಕ್ವೆಲ್ ಸ್ಟ್ರಿಪ್ಟ್ ಪೂಜೆ ನಡೆದಿದೆ.

Teja Sajjas Superhero film HanuMan sequel Jai Hanuman pre production begins

'ಹನುಮಾನ್' ಸೀಕ್ವೆಲ್ 'ಜೈ ಹನುಮಾನ್'

ರಾಮಮಂದಿರ ಉದ್ಘಾಟನೆಯ ಶುಭ ಸಂದರ್ಭದಲ್ಲಿ, ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಮ ಪ್ರಾಣ ಪ್ರತಿಷ್ಠಾಪನೆ ದಿನ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಮುಂಬರುವ ಚಿತ್ರದ ಸ್ಕ್ರೀಪ್ಟ್ ಹಿಡಿದು ಆಶೀರ್ವಾದ ಪಡೆಯಲು ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಲ್ಲಿಯೇ ತಮ್ಮ ಮುಂದಿನ ಸಿನಿಮಾ 'ಜೈ ಹನುಮಾನ್' ಸೀಕ್ವೆಲ್‌ನ ಸ್ಟ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ. ಜೊತೆಗೆ ಪ್ರಿ-ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದೆ.

ಪ್ರಶಾಂತ್ ವರ್ಮಾ ನಿರ್ದೇಶನ ಮತ್ತು ತೇಜ ಸಜ್ಜಾ ಅವರ ಸೂಪರ್ ಹೀರೋ ಚಿತ್ರ 'ಹನುಮಾನ್' ಜನವರಿ 12 ರಂದು ಬಿಡುಗಡೆಯಾಗಿದೆ. ಸಿನಿಮಾದಲ್ಲಿ ತೇಜ ಸಜ್ಜಾ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಅಮೃತ ಅಯ್ಯರ್ ಮತ್ತು ವಿನಯ್ ರೈ ನಟಿಸಿದ್ದು, ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಸಕ್ಸಸ್ ಬೆನ್ನಲ್ಲೇ 'ಜೈ ಹನುಮಾನ್' ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಶುರುವಾಗಿವೆ.

Teja Sajjas Superhero film HanuMan sequel Jai Hanuman pre production begins

ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್

'ಹನುಮಾನ್' ಸಿನಿಮಾ ಮೂಲಕ ಪ್ರಶಾಂತ್ ವರ್ಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈಗ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ನಿಂದ ಮತ್ತೊಂದು ಮಹಾಕಾವ್ಯ ಬರಲಿದೆ. PVCU ಭಾಗವಾಗಿ ಜೈ ಹನುಮಾನ್ ಸಿನಿಮಾ ಘೋಷಿಸಿದ್ದು, ದೊಡ್ಡ ಮಟ್ಟದಲ್ಲಿ ಮೂಡಿಬರಲಿದೆ ಎನ್ನಲಾಗಿದೆ.

'ಹನುಮಾನ್' ಸಿನಿಮಾದ 'ಜೈ ಹನುಮಾನ್' ಸೀಕ್ವೆಲ್‌ಗಾಗಿ ನಿರ್ದೇಶಕ ಪ್ರಶಾಂತ್ ವರ್ಮಾ ಈಗಾಗಲೇ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಹೈದರಾಬಾದ್‌ನ ಹನುಮಾನ್ ದೇವಾಲಯದ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬರಲಿದೆ.

More from Filmibeat

English summary
Prasanth Varma's HanuMan sequel 'Jai Hanuman' pre production begins.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X