For Quick Alerts
  ALLOW NOTIFICATIONS  
  For Daily Alerts

  ತೆಲಂಗಾಣ ಸಿಎಂ ಮೊಮ್ಮಗ ಚಿತ್ರರಂಗಕ್ಕೆ, ಸ್ಟಾರ್ ನಿರ್ದೇಶಕನ ಹೆಸರು?

  |

  ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ನಂತರ ಮಗ ಕೆಟಿಆರ್ ತನ್ನ ರಾಜಕೀಯ ವಾರಸುದಾರ ಎನ್ನುವುದು ತಿಳಿದಿರುವ ಸಂಗತಿ. ಕೆಟಿಆರ್ ಬಳಿಕ ಅವರ ಮಗ ಹಿಮಾಂಶು ರಾವ್ ಕಲ್ವಕುಂತ್ಲಾ ಸಹ ರಾಜಕೀಯ ಪ್ರವೇಶಿಸುತ್ತಾರೆ. ತಮ್ಮ ಪಕ್ಷದ ಸಾರಥ್ಯ ವಹಿಸಲಿದ್ದಾರೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

  ಆದರೆ, ಕೆಸಿಆರ್ ಮೊಮ್ಮಗ ನಾನು ರಾಜಕೀಯಕ್ಕೆ ಬರಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ. ಮಂಗಳವಾರ ಹಿಮಾಂಶು ರಾವ್ ಮಾಡಿದ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೆಸಿಆರ್ ಮೊಮ್ಮಗ ಚಿತ್ರರಂಗಕ್ಕೆ ಬರುವ ಹಾದಿಯಲ್ಲಿದ್ದಾರೆ, ಅದಕ್ಕಾಗಿ ಸ್ಟಾರ್ ನಿರ್ಮಾಪಕ-ನಿರ್ದೇಶಕ ಸಿದ್ದರಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ...

  ಹೇಳಿದಂತೆ ತೆಲಂಗಾಣ ಸಚಿವ ಕೆಟಿಆರ್ ಭೇಟಿ ಮಾಡಿದ ಸೋನು ಸೂದ್ಹೇಳಿದಂತೆ ತೆಲಂಗಾಣ ಸಚಿವ ಕೆಟಿಆರ್ ಭೇಟಿ ಮಾಡಿದ ಸೋನು ಸೂದ್

  ನಾನು ರಾಜಕೀಯಕ್ಕೆ ಬರಲ್ಲ

  ನಾನು ರಾಜಕೀಯಕ್ಕೆ ಬರಲ್ಲ

  ಜುಲೈ 6, 2021 ರಂದು ಹಿಮಾಂಶು ರಾವ್ ಕಲ್ವಕುಂತ್ಲಾ ಟ್ವಿಟ್ಟರ್‌ನಲ್ಲಿ ನಾನು ರಾಜಕೀಯಕ್ಕೆ ಬರಲ್ಲ ಎಂದು ಖಚಿತಪಡಿಸಿದ್ದಾರೆ. ''ನಾನು ಎಂದಿಗೂ ರಾಜಕೀಯ ಪ್ರವೇಶ ಮಾಡಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತಿದ್ದೇನೆ. ಏಕಂದ್ರೆ ನನಗೆ ನನ್ನದೇ ಆದ ಗುರಿ ಮತ್ತು ಉದ್ದೇಶವಿದೆ'' ಎಂದು ಪ್ರಕಟಿಸಿಕೊಂಡಿದ್ದಾರೆ.

  ರಾಜಕೀಯ ಇಲ್ಲ ಅಂದ್ರೆ ಸಿನಿಮಾ?

  ರಾಜಕೀಯ ಇಲ್ಲ ಅಂದ್ರೆ ಸಿನಿಮಾ?

  ತಾತ ಮುಖ್ಯಮಂತ್ರಿ, ತಂದೆ ಸಚಿವ ಆಗಿರುವ ಕಾರಣ ಹಿಮಾಂಶು ರಾವ್ ಸಹ ರಾಜಕೀಯ ಪ್ರವೇಶಿಸುವ ನಿರೀಕ್ಷೆ ಇದೆ. ತಾತ ಹಾಗೂ ತಂದೆಯ ಜೊತೆ ಹಲವು ಬಾರಿ ಸರ್ಕಾರಿ ಕಾರ್ಯಕ್ರಮಗಳಲ್ಲಿ, ರಾಜಕೀಯ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದರು. ಆದ್ರೀಗ, ರಾಜಕೀಯಕ್ಕೆ ಬರಲ್ಲ ಎನ್ನುವುದಾರೇ ಸಿನಿಮಾ ರಂಗ ಪ್ರವೇಶ ಮಾಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

  ಸ್ಟಾರ್ ನಿರ್ದೇಶಕ-ನಿರ್ಮಾಪಕ ಪ್ಲಾನ್?

  ಸ್ಟಾರ್ ನಿರ್ದೇಶಕ-ನಿರ್ಮಾಪಕ ಪ್ಲಾನ್?

  ಸಚಿವ ಕೆಟಿ ರಾಮಾರಾವ್ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಆಪ್ತರು. ಅದಕ್ಕಾಗಿ ತಯಾರಿ ಸಹ ನಡೆಸುತ್ತಿದ್ದಾರೆ ಎಂಬ ಮಾತಿದೆ. ಹಿಮಾಂಶು ರಾವ್ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಲು ತೆಲುಗು ಇಂಡಸ್ಟ್ರಿಯ ಸ್ಟಾರ್ ನಿರ್ದೇಶಕ ಮತ್ತು ನಿರ್ಮಾಪಕರು ಸಹ ಆಸಕ್ತಿ ತೋರಿದ್ದು, ಆ ಸಂಬಂಧ ಚರ್ಚೆಯೂ ಆಗ್ತಿದೆ ಎಂದು ಹೇಳಲಾಗಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

  KGF 2 ರಿಲೀಸ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ Prashanth Neel | Filmibeat Kannada
  ಕೆಟಿಆರ್ ಭೇಟಿ ಮಾಡಿ ವಂಶಿ ಪೈದಿಪಲ್ಲಿ

  ಕೆಟಿಆರ್ ಭೇಟಿ ಮಾಡಿ ವಂಶಿ ಪೈದಿಪಲ್ಲಿ

  ಕೆಸಿಆರ್ ಮೊಮ್ಮಗನನ್ನು ಹೀರೋ ಆಗಿ ಪರಿಚಯ ಮಾಡಲು ತೆಲುಗು ನಿರ್ದೇಶಕ ವಂಶಿ ಪೈದಿಪಲ್ಲಿ ಸಿದ್ದತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ವಂಶಿ ಜೊತೆ ದಿಲ್ ರಾಜ್ ಕೈ ಜೋಡಿಸಿ ತಮ್ಮದೇ ಸಂಸ್ಥೆಯಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರಂತೆ. ಆದರೆ ಹಿಮಾಂಶು ಓದುತ್ತಿದ್ದಾರೆ. ಈಗಲೇ ರಾಜಕೀಯ, ಸಿನಿಮಾ ಅನುಮಾನ. ಆದರೂ ತೆರೆಮರೆಯಲ್ಲಿ ಇಂತಹ ಪ್ರಯತ್ನ ಆಗುತ್ತಿದೆ ಎನ್ನುತ್ತಾರೆ ಆಪ್ತರು. ಇತ್ತೀಚಿಗಷ್ಟೆ ವಂಶಿ, ಸೋನು ಸೂದ್ ಸಚಿವ ಕೆಟಿಆರ್ ಅವರನ್ನು ಭೇಟಿ ಮಾಡಿದ್ದರು.

  English summary
  Telangana Chief Minister KCR Grandson Himanshu rao Kalvakuntla has clarified he will not enter Politics in future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X