For Quick Alerts
  ALLOW NOTIFICATIONS  
  For Daily Alerts

  ಜೂ ಎನ್‌ಟಿಆರ್‌ಗೆ ತೆಲಂಗಾಣ ಸಿಎಂ ಟಾಂಗ್: 'ಬ್ರಹ್ಮಾಸ್ತ್ರ' ತಂಡಕ್ಕೆ ಭಾರಿ ನಷ್ಟ!

  |

  ತೆಲುಗು ರಾಜ್ಯಗಳಲ್ಲಿ ಸಿನಿಮಾ ಮತ್ತು ರಾಜಕೀಯ ಒಂದಕ್ಕೊಂದು ಬೆಸೆದುಕೊಂಡಿದೆ. ಸೀನಿಯರ್ ಎನ್‌ಟಿಆರ್ ಸ್ವಂತವಾಗಿ ಪಕ್ಷ ಸ್ಥಾಪಿಸಿ ಅವಿಭಜಿತ ಆಂಧ್ರಪ್ರದೇಶದ ಸಿಎಂ ಆದಂದಿನಿಂದಲೂ, ಈಗ ತೆಲಂಗಾಣ ಹಾಗೂ ಆಂಧ್ರಗಳಲ್ಲಿ ರಾಜಕೀಯದ ಮೇಲೆ ಸಿನಿಮಾದವರ ಪ್ರಭಾವ ಗಾಢ.

  ಅದರಲ್ಲಿಯೂ ನಂದಮೂರಿ ಕುಟುಂಬವನ್ನು ಹೊರತುಪಡಿಸಿ ತೆಲುಗು ರಾಜ್ಯಗಳ ರಾಜಕೀಯ ಹಾಗೂ ಸಿನಿಮಾ ಇತಿಹಾಸ ಬರೆಯುವಂತೆಯೇ ಇಲ್ಲ. ಬರೋಬ್ಬರಿ ನಲವತ್ತು ವರ್ಷಗಳಿಂದಲೂ ಈ ಕುಟುಂಬ ಅವಿಭಜಿತ ಆಂಧ್ರ ರಾಜಕೀಯದಲ್ಲಿ ಅತ್ಯಂತ ಪ್ರಧಾನ ವಹಿಸಿದೆ. ಈಗಲೂ ಸಕ್ರಿಯಾಗಿಯೇ ಇದೆ. ಇದೇ ಕುಟುಂಬಕ್ಕೆ ಸೇರಿದ ಮೂರನೇ ತಲೆಮಾರು ಜೂ ಎನ್‌ಟಿಆರ್‌ ಪ್ರಸ್ತುತ ತೆಲುಗು ಸಿನಿಮಾ ರಂಗದ ಸ್ಟಾರ್ ನಟ. ರಾಜಕೀಯದಿಂದ ಇವರು ಅಂತರ ಕಾಪಾಡಿಕೊಂಡಿದ್ದರೂ ಸಹ ರಾಜಕಾರಣದಿಂದ ಪೂರ್ಣವಾಗಿ ಹೊರತಲ್ಲ.

  ತಮ್ಮ ಪಾಡಿಗೆ ಸಿನಿಮಾಗಳನ್ನು ಮಾಡುತ್ತಾ ರಾಜಕೀಯದಿಂದ ದೂರವೇ ಉಳಿದಿದ್ದರೂ ಜೂ ಎನ್‌ಟಿಆರ್‌ ಒಮ್ಮೊಮ್ಮೆ ರಾಜಕೀಯದ ಕಾರಣದಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಈಗ ಹೀಗೆಯೇ ಆಗಿದೆ. ಆದರೆ ಈ ಬಾರಿ ಜೂ ಎನ್‌ಟಿಆರ್ ಕಾರಣದಿಂದ ಬಾಲಿವುಡ್ ಸಿನಿಮಾ ತಂಡವೊಂದು ನಷ್ಟ ಅನುಭವಿಸಿದೆ.

  ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆ

  ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆ

  ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಅನ್ನು ಹೈದರಾಬಾದ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಭಾರಿ ತಯಾರಿಯನ್ನು ಸಹ ಮಾಡಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜೂ ಎನ್‌ಟಿಆರ್ ಆಗಮಿಸುವವರಿದ್ದರು. ಆದರೆ ಕಾರ್ಯಕ್ರಮ ಹಠಾತ್ತನೆ ರದ್ದಾಯಿತು. ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದ ಪೊಲೀಸ್ ಇಲಾಖೆಯೇ ಕೊನೆಯಲ್ಲಿ ಕಾರ್ಯಕ್ರಮ ನಡೆಸಬಾರದೆಂದಿತು. ಇದರಿಂದಾಗಿ 'ಬ್ರಹ್ಮಾಸ್ತ್ರ' ತಂಡಕ್ಕಾ ಲಕ್ಷಾಂತರ ರುಪಾಯಿ ಹಣ ನಷ್ಟವಾಯಿತು.

  ಗಣೇಶ ಚತುರ್ಥಿಯ ಕಾರಣ ನೀಡಿದ್ದ ಪೊಲೀಸರು

  ಗಣೇಶ ಚತುರ್ಥಿಯ ಕಾರಣ ನೀಡಿದ್ದ ಪೊಲೀಸರು

  ಗಣೇಶ್ ಚತುರ್ಥಿ ಕಾರ್ಯಕ್ರಮ ಸಹ ಇರುವ ಕಾರಣ ಪೊಲೀಸರು ನಿಮ್ಮ ಇವೆಂಟ್‌ಗೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿತು. ಅಸಲಿಗೆ ಕಾರ್ಯಕ್ರಮವು ಕೇವಲ ಮೂರು ಗಂಟೆಗಳಲ್ಲಿ ಮುಗಿದು ಹೋಗುವುದರಲ್ಲಿತ್ತು. ಗಣೇಶ ಚತುರ್ಥಿ ವಿಸರ್ಜನೆಗೆ ಇನ್ನೂ ಸಮಯವಿತ್ತು. ಹಾಗಿದ್ದೂ ಪೊಲೀಸ್ ಇಲಾಖೆಯು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದೆ ಎಂದು ಜೂ ಎನ್‌ಟಿಆರ್ ಅಭಿಮಾನಿಗಳು ಆರೋಪಿಸಿದರು. ಬಹಿರಂಗ ಕಾರ್ಯಕ್ರಮ ರದ್ದಾದ ಬಳಿಕ ನಡೆದ ಸರಳ ಇಂಡೋರ್ ಕಾರ್ಯಕ್ರಮದಲ್ಲಿ ಮಾತನಾಡಿದ ಜೂ ಎನ್‌ಟಿಆರ್ ಸಹ, ಕಾರ್ಯಕ್ರಮಕ್ಕೆ ರದ್ದಾಗಿದ್ದಕ್ಕೆ ಕ್ಷಮಾಪಣೆ ಕೇಳಿದರು.

  ಅಮಿತ್ ಶಾ ಅವರ ಭೇಟಿಯಾಗಿದ್ದ ಜೂ ಎನ್‌ಟಿಆರ್

  ಅಮಿತ್ ಶಾ ಅವರ ಭೇಟಿಯಾಗಿದ್ದ ಜೂ ಎನ್‌ಟಿಆರ್

  ಜೂ ಎನ್‌ಟಿಆರ್ ಕೆಲವು ದಿನಗಳ ಹಿಂದಷ್ಟೆ ಬಿಜೆಪಿ ಮುಖಂಡ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ತೆಲಂಗಾಣ ಸಿಎಂ ಕೆಸಿಆರ್ ಬಿಜೆಪಿಯ ಕಡು ವಿರೋಧಿ. ಜೂ ಎನ್‌ಟಿಆರ್, ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಕೆಸಿಆರ್‌ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಅಲ್ಲದೆ ನಂದಮೂರಿ ಕುಟುಂಬದ ಟಿಡಿಪಿ, ಕೆಸಿಆರ್‌ಗೆ ಪರೋಕ್ಷ ವಿಪಕ್ಷವೂ ಆಗಿರುವ ಕಾರಣ ಜೂ ಎನ್‌ಟಿಆರ್ ಭಾಗವಹಿಸುವ ಕಾರ್ಯಕ್ರಮಕ್ಕೆ ಉದ್ದೇಶಪೂರ್ವಕವಾಗಿ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

  ಆಂಧ್ರದಲ್ಲಿ ಸರ್ಕಾರ v/s ಚಿತ್ರರಂಗ

  ಆಂಧ್ರದಲ್ಲಿ ಸರ್ಕಾರ v/s ಚಿತ್ರರಂಗ

  ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾಗಳನ್ನು ರಾಜಕೀಯಕ್ಕೆ ಬಳಸುವುದು, ರಾಜಕೀಯ ಕಾರಣಕ್ಕೆ ಸಿನಿಮಾಗಳಿಗೆ ತೊಂದರೆ ನೀಡುವುದು ತೀರ ಸಾಮಾನ್ಯ. ಆಂಧ್ರದಲ್ಲಿ ಕೆಲವು ತಿಂಗಳುಗಳ ಹಿಂದೆ ಪವನ್ ಕಲ್ಯಾಣ್ ಸಿನಿಮಾಕ್ಕೆ ಸಮಸ್ಯೆ ಒಡ್ಡಯಾಯಿತು. ಪವನ್ ಕಲ್ಯಾಣ್ ರ 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ವೇಳೆಗೆ ಫ್ಯಾನ್ಸ್ ಶೋ, ಬೆನಿಫಿಟ್ ಶೋ ರದ್ದು ಮಾಡಲಾಯಿತು. ಪವನ್ ಅಭಿಮಾನಿಗಳು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಆನ್‌ಲೈನ್ ಕಿತ್ತಾಟ ತಾರಕಕ್ಕೆ ಹೋಗಿ ಬಳಿಕ ಜಿದ್ದಿಗೆ ಬಿದ್ದ ಸರ್ಕಾರ ಚಿತ್ರಮಂದಿರಗಳು ಹಾಗೂ ಚಿತ್ರರಂಗದ ಮೇಲೆ ನಿಯಂತ್ರಣ ಹೇರಲು ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿತು ಸಹ. ಆಂದ್ರದಲ್ಲಿ ಚಿತ್ರರಂಗ ಹಾಗೂ ಸರ್ಕಾರದ ನಡುವಿನ ತಿಕ್ಕಾಟ ಇನ್ನೂ ಜಾರಿಯಲ್ಲಿದೆ.

  English summary
  Brahmastra movie pre release event canceled due to Police department. Did Telangana CM KCR took things personly on Jr NTR meeting central home minister Amit Shah.
  Tuesday, September 6, 2022, 12:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X