ಫಾಲೋವರ್ಸ್ ಜಾಸ್ತಿ ಬೇಕು ಎಂದ ಯುವತಿಗೆ ಅಲ್ಲು ಅರ್ಜುನ್ ಸಾಥ್: ವಿಡಿಯೋ ವೈರಲ್ ಆದ ನಂತರ ನಟನ ಫ್ಯಾನ್ಸ್ ಮಾಡಿದ್ದು ಹೀಗೆ!
ಈಗೇನಿದ್ದರೂ ಸಾಮಾಜಿಕ ಜಾಲತಾಣಗಳದ್ದೇ ಹವಾ. ಟಿಕ್ ಟಾಕ್ ಬ್ಯಾನ್ ಆದ ಮೇಲೆ ಇನ್‌ಸ್ಟಾಗ್ರಾಮ್ ಆ ಜಾಗಕ್ಕೆ ಬಂದು ಕೂತಿದೆ. ಇದು ಕೇವಲ ಮನರಂಜನೆಗೆ ಮಾತ್ರವಲ್ಲದೇ ಆದಾಯದ ಮೂಲವೂ ಆಗಿದ್ದು, ಯುವಜನತೆಗೆ ಇದರಲ್ಲಿ ತಮ್ಮ ಫಾಲೋವರ್ಸ್ ಜಾಸ್ತಿಯಾಗಬೇಕು ಎಂದು ಬಯಸುವುದು ಸಹಜ. ಇದಕ್ಕೆ ತೆಲಂಗಾಣದಲ್ಲಿ ಒಬ್ಬ ಯುವತಿ ಕೂಡ ತನ್ನ ಫಾಲೋವರ್ಸ್ ಜಾಸ್ತಿಯಾಗಬೇಕು ಎಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಹಾಯ ಪಡೆದಿದ್ದಾರೆ.
ಬುಧವಾರ ನವೆಂಬರ್ 30 ರಂದು ತೆಲಂಗಾಣ ವಿಧಾನಸಭಾ ಚುನಾವಣೆ ಗೆ ಮತದಾನ ನಡೆಯುತ್ತಿದೆ. ಹೈದರಾಬಾದ್‌ನಲ್ಲಿ ಬೆಳಗ್ಗೆಯೇ ನಟ ಅಲ್ಲು ಅರ್ಜುನ್ ಮತ ಚಲಾಯಿಸಿದ್ದಾರೆ. ಮತದಾನ ಮಾಡಿದ ಬಳಿಕ ಹಲವರು ಸೆಲ್ಫಿ, ಫೋಟೋಗಳನ್ನು ತೆಗೆದುಕೊಂಡಿದ್ದು, ಒಬ್ಬ ಯುವತಿಯ ವಿಡಿಯೋ ಮಾತ್ರ ಈಗ ವೈರಲ್ ಆಗುತ್ತಿದೆ. ಆಕೆಯ ಆಸೆಯೇನು..? ಅದಕ್ಕೆ ಅಲ್ಲು ಅರ್ಜುನ್ ಸಾಥ್ ನೀಡಿದ್ದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

ಅಭಿಮಾನಿಗಾಗಿ ಸೆಲ್ಫಿ ವಿಡಿಯೋ ಮಾಡಿದ ಅಲ್ಲು ಅರ್ಜುನ್
ಮತಗಟ್ಟೆ ಬಳಿಕ ಸಿಕ್ಕ ಅಲ್ಲು ಅರ್ಜುನ್ ಅಭಿಮಾನಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಾಗಲು ಸಹಾಯ ಮಾಡುವಂತೆ ನಟನಿಗೆ ಕೇಳಿದ್ದಾರೆ. ತಮ್ಮ ಜೊತೆಗಿನ ವಿಡಿಯೋ ಅಪ್‌ಲೋಡ್ ಮಾಡಿದರೆ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಅನುಯಾಯಿಗಳ ಸಂಖ್ಯೆ ಹೆಚ್ಚಾಗುತ್ತದೆಯೇ ಎಂದು ನಟ ಕೇಳಿ, ವಿಡಿಯೋ ಮಾಡಿದ್ದಾರೆ. ಈ ಮುದ್ದಾದ ವಿಡಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅಲ್ಲು ಅರ್ಜುನ್ ನಡೆಯನ್ನು ಶ್ಲಾಘಿಸಿದ್ದಾರೆ.
ಜುಬಿಲಿ ಹಿಲ್ಸ್‌ನ ಮತಗಟ್ಟೆಯಲ್ಲಿ ಮತದಾನ ಮಾಡಲು ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳೊಂದಿಗೆ ಫೋಟೋ, ವಿಡಿಯೋ ತೆಗೆಸಿಕೊಂಡಿದ್ದಾರೆ. ಈ ವೇಳೆ ಅಶ್ವಿನಿ ಎಂಬ ಅಭಿಮಾನಿ ಕೂಡ ಬಂದಿದ್ದು, ಅವರೇ ಸೆಲ್ಫಿ ವಿಡಿಯೋ ಮಾಡುವಂತೆ ಅಲ್ಲು ಅರ್ಜುನ್ ಅವರಲ್ಲಿ ಮನವಿ ಮಾಡಿದ್ದಾರೆ.
ಫ್ಯಾನ್ ಮತ್ತು ಅಲ್ಲು ಅರ್ಜುನ್ ಮಾತುಕಥೆ ಹೀಗಿದೆ
ಅಲ್ಲು ಅರ್ಜುನ್ ಮತ್ತು ಅವರ ಅಭಿಮಾನಿಯ ಸೆಲ್ಫಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ ಎಷ್ಟು ಫಾಲೋವರ್ಸ್ ಇದ್ದಾರೆ ಎಂದು ಅಲ್ಲು ಅರ್ಜುನ್ ತಮ್ಮ ಅಭಿಮಾನಿಯನ್ನು ಕೇಳುತ್ತಾರೆ. ಇದಕ್ಕೆ ಆಕೆ '13k' (ಹದಿಮೂರು ಸಾವಿರ) ಎಂದು ಉತ್ತರಿಸಿಸುತ್ತಾರೆ.
ಇದಾದ ನಂತರ, ಇನ್ನೂ ಎಷ್ಟು ಅನುಯಾಯಿಗಳು ಬೇಕು ಎಂದು ಅಲ್ಲು ಅರ್ಜುನ್ ಕೇಳುತ್ತಾರೆ. ಇದಕ್ಕೆ ಆಕೆ '30k (ಮೂವತ್ತು ಸಾವಿರ) ಎಂದು ಹೇಳುತ್ತಾರೆ. ಇದಕ್ಕೆ, "ಈ ವಿಡಿಯೋ ನೋಡಿದ ನಂತರ ಅಷ್ಟು ಜನ ಫಾಲೋ ಮಾಡುತ್ತಾರಾ?" ಎಂದು ಕೇಳಿದ್ದು, ಆಕೆ ವಿಶ್ವಾಸದಿಂದ ಹೌದು ಎಂದು ಹೇಳುತ್ತಾರೆ. "ಹಾಗಾದರೆ, ನಿಮಗೆ ಅಷ್ಟು ಫಾಲೋವರ್ಸ್ ಬರುತ್ತಾರೆ" ಎಂದು ಹೇಳುತ್ತಾರೆ.
ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದಾರೆ ಫಾಲೋವರ್ಸ್!
ಈ ವಿಡಿಯೋವನ್ನು ಅಶ್ವಿನಿ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಹಾಕುವ ಮುನ್ನ ಆಕೆಯ ಅನುಯಾಯಿಗಳ ಸಂಖ್ಯೆ ಅಪ್ಲಿಕೇಶನ್‌ನಲ್ಲಿ 13.7K ಇತ್ತು. ವಿಡಿಯೋ ಪೋಸ್ಟ್ ಮಾಡಿ ಮೂರು ಗಂಟೆಯೊಳಗೆ ಆಕೆಯ ಫಾಲೋವರ್ಸ್ 17K ಕ್ಕೆ ಹೆಚ್ಚಾಗಿದ್ದು, 'ಬನ್ನಿ' ಅಭಿಮಾನಿಗಳು ಆಕೆಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ.
ಹಲವು ಮಂದಿ ಅಲ್ಲು ಅರ್ಜುನ್ ಅಭಿಮಾನಿಗಳು ನೀನು ಯಾರು ಅಂತ ಕೂಡ ಗೊತ್ತಿಲ್ಲ ಆದರೆ ನಾನು ಅಲ್ಲು ಅರ್ಜುನ್ ಅಭಿಮಾನಿ ಅದಕ್ಕಾಗಿ ನಿನ್ನ ಫಾಲೋ ಮಾಡ್ತಿದ್ದಿನಿ ಎಂದು ಹಲವು ಫ್ಯಾನ್ಸ್ ಆಕೆಯನ್ನು ಫಾಲೋ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳು ಈಕೆಯನ್ನು ಫಾಲೋ ಮಾಡಿ ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಆಕೆಯ ಅನುಯಾಯಿಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ.


Click it and Unblock the Notifications










