twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರ ಕುರಿತು ತೆಲಂಗಾಣ ಹೊಸ ಆದೇಶ: 'ರಾಬರ್ಟ್‌' ಹಾದಿ ಸುಗಮ

    |

    ಚಿತ್ರಮಂದಿರ ಕುರಿತು ತೆಲಂಗಾಣ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಹೊಸ ಆದೇಶವು ದರ್ಶನ್ ನಟನೆಯ ರಾಬರ್ಟ್ ಸಿನಿಮಾಕ್ಕೆ ಹಾದಿ ಸುಗಮಗೊಳಿಸಿದೆ.

    ಕೊರೊನಾ ಕಾರಣಕ್ಕೆ ತೆಲಂಗಾಣ ಚಿತ್ರಮಂದಿರಗಳು ಸೀಟು ಸಾಮರ್ಥ್ಯದ 50% ಅಷ್ಟನ್ನೇ ಬಳಸಿಕೊಂಡು ಪ್ರೇಕ್ಷಕರಿಗೆ ಸಿನಿಮಾ ವೀಕ್ಷಿಸಲು ಅವಕಾಶ ನೀಡಿತ್ತು. ಆದರೆ ಈ ನಿಯಮವನ್ನು ಹಿಂಪಡೆದು, ಕೇಂದ್ರದ ಹೊಸ ಆದೇಶದಂತೆ ಚಿತ್ರಮಂದಿರದ ಸಂಪೂರ್ಣ ಸೀಟು ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಆದೇಶ ಹೊರಡಿಸಿದೆ.

    ತೆಲಂಗಾಣ ಸರ್ಕಾರದ ಈ ಆದೇಶವನ್ನು ತೆಲುಗು ಚಿತ್ರರಂಗ ಸ್ವಾಗತಿಸಿದೆ. ಹಲವು ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದು. ಸರ್ಕಾರದ ಹೊಸ ಆದೇಶದಿಂದ ನಿರ್ಮಾಪಕರಿಗೆ ನಿರಾಳವಾಗಿದೆ.

    Telangana Government Orders 100% Occupancy In Theaters

    ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಸಹ ತೆಲಂಗಾಣದಲ್ಲಿ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ತೆಲಂಗಾಣ ಸರ್ಕಾರದ ಆದೇಶದಿಂದ ರಾಬರ್ಟ್ ಸಿನಿಮಾ ತಂಡವೂ ಖುಷಿಯಾಗಿರಲಿಕ್ಕೆ ಸಾಕು.

    ಆದರೆ ಪಕ್ಕದ ತೆಲುಗು ರಾಜ್ಯ ಆಂಧ್ರ ಪ್ರದೇಶದಲ್ಲಿ ಚಿತ್ರಮಂದಿರಗಳ ಭರ್ತಿಗೆ ಇನ್ನೂ ಅವಕಾಶ ನೀಡಲಾಗಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆಯಾದರೂ ಇನ್ನೂ ಕೆಲವು ರಾಜ್ಯಗಳ ಸರ್ಕಾರಗಳು ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆಯುವಂತೆ ಆದೇಶ ನೀಡಲು ಮೀನ-ಮೇಷ ಎಣಿಸುತ್ತಿವೆ.

    Recommended Video

    ನನ್ನ ಸಿನಿಮಾ ಉಳಿಸಿಕೊಡಿ ಎಂದು ಬೇಡಿಕೊಂಡ ಅನಿಶ್ | Anish Tejeshwar | Ramarjuna | Filmibeat Kannada

    ಕರ್ನಾಟಕದಲ್ಲಿ ಚಿತ್ರಮಂದಿರಗಳು ಪೂರ್ಣವಾಗಿ ಕಾರ್ಯನಿರ್ವಹಿಸಲು ಸರ್ಕಾರ ಆದೇಶ ನೀಡಿದ್ದು, ಇಂದಿನಿಂದ ಎಲ್ಲ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ತೆರೆದಿವೆ.

    English summary
    Telangana government orders 100% occupancy in theaters and multiplexes in the state.
    Saturday, February 6, 2021, 8:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X