ಚಿತ್ರೀಕರಣಕ್ಕೆ ಅನುಮತಿ ನೀಡಿದ ತೆಲಂಗಾಣ ಸರ್ಕಾರ
ಕೊರೊನಾ ಲಾಕ್ ಡೌನ್ ಪರಿಣಾಮ ಚಿತ್ರೀಕರಣ ಪ್ರದರ್ಶನ ಸೇರಿದ್ದಂತೆ ಅನೇಕ ಚಟುವಟಿಗಳು ಬಂದ್ ಆಗಿತ್ತು. ಆದ್ರೀಗ ಲಾಕ್ ಡೌನ್ ಬಹುತೇಕ ತೆರವಾಗಿದೆ. ಈಗಾಗಲೆ ಕರ್ನಾಟಕದಲ್ಲಿ ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೆ ಇನ್ನೂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿಲ್ಲ. ಆದರೆ ಪಕ್ಕದ ತೆಲುಗುರಂಗದಲ್ಲಿ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
Recommended Video
ಇತ್ತೀಚಿಗೆ ತೆಲುಗು ನಟ ಚಿರಂಜೀವಿ ನೇತೃತ್ವದ ತೆಲುಗು ಚಿತ್ರರಂಗದ ನಿಯೋಗವೊಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿ, ಚಿತ್ರೀಕರಣಕ್ಕೆ ಮಾಡುವುದಕ್ಕೆ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿ ತೆಲಂಗಾಣದ ಕೆಸಿಆರ್ ಸರ್ಕಾರ, ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಅನುಮತಿ ನೀಡಿದೆ.
ತೆಲಂಗಾಣ ಸರ್ಕಾರ ಚಿತ್ರೀಕರಣ ಜೊತೆಗೆ ಧಾರಾವಾಹಿ ಚಿತ್ರೀಕರಣಕ್ಕೂ ಅನುಮತಿ ನೀಡಿದೆ. ಆದರೆ ಸೂಕ್ತ ಮುನ್ನಚ್ಚರಿಕೆಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಬೇಕು. ಆದರೆ ಚಿತ್ರೀಕರಣಕ್ಕೆ ಹೊರ ರಾಜ್ಯಗಳಿಗೆ ಹೋಗುವಂತಿಲ್ಲ. ಸದ್ಯ ಸಾಕಷ್ಟು ಶರತ್ತುಗಳ ಆಧಾರದ ಮೇಲೆ ಚಿತ್ರೀಕರಕಣಕ್ಕೆ ಅನುಮತಿ ಸಿಕ್ಕಿದೆ ಆದರೆ ಇನ್ನೂ ಚಿತ್ರ ಪ್ರದರ್ಶನಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ.

ಕೇವಲ ಟಾಲಿವುಡ್ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಚಿತ್ರೀಕರಣಕ್ಕೆ ಅನುಮತಿ ನೀಡಬೇಕೆನ್ನುವ ಒತ್ತಾಯ ಕೇಳಿ ಬರುತ್ತಿದೆ. ಸಾಕಷ್ಟು ಸಿನಿಮಾಗಳು ಚಿತ್ರೀಕರಣಕ್ಕೆ ಹೊರಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅನುಮತಿ ನೀಡುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.


Click it and Unblock the Notifications











