ಡ್ರಗ್ ಕೇಸ್: ನಟ ನವದೀಪ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬೇಡಿ ಎಂದ ತೆಲಂಗಾಣ ಹೈಕೋರ್ಟ್

ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ಪ್ರಕರಣ ಮತ್ತೆ ಸುದ್ದಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಸಿನಿಮಾ ಫೈನಾನ್ಶಿಯರ್ ಕೆ.ವೆಂಕಟರತ್ನಂ ಹಾಗೂ ಮತ್ತೋರ್ವ ಆರೋಪಿ ಕಾಪ ಭಾಸ್ಕರ್ ಬಾಲಾಜಿ ಅವರನ್ನು ಬಂಧಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ನಟ ನವದೀಪ್‌ಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಕಳೆದ ಒಂದು ವಾರದಿಂದ ನಟ ನವದೀಪ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಟ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಘೋಷಿಸಿದ್ದಾರೆ. ಇದರ ನಡುವೆಯೇ ನವದೀಪ್ ತೆಲಂಗಾಣ ಹೈಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದರು.

Telangana High Court on Navdeep Drug Case


ತೆಲಂಗಾಣ ಹೈಕೋರ್ಟ್ ಹೇಳಿದ್ದೇನು?

ತೆಲಂಗಾಣ ಹೈಕೋರ್ಟ್ ತನಿಖಾ ತಂಡಕ್ಕೆ ನಟನನ್ನು ಪರೀಕ್ಷಿಸಲು ಅಥವಾ ವಿಚಾರಣೆ ಮಾಡಲು ಬಯಸಿದರೆ ಸೆಕ್ಷನ್ 41A ಅಡಿಯಲ್ಲಿ ನೋಟಿಸ್‌ಗಳನ್ನು ಜಾರಿ ಮಾಡಲು ತಿಳಿಸಿದೆ. ಪೊಲೀಸರು CrPC ಯ ಸೆಕ್ಷನ್ 41A ಅಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸಬೇಕು. ಪೊಲೀಸರು ಅವರನ್ನು ಪ್ರಶ್ನಿಸಬಹುದು ಅಥವಾ ವಿಚಾರಣೆ ಮಾಡಬಹುದು. ಆದರೆ ಅವನನ್ನು ಬಂಧಿಸುವಂತಿಲ್ಲ ಎಂದು ಹೇಳಿದೆ.

ನಟನಿಗೂ ನಿರ್ದೇಶನ ನೀಡಿರುವ ನ್ಯಾಯಾಲಯ ತನಿಖೆಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ ತಿಳಿಸಿದೆ. ನವದೀಪ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ. ಸುರೇಂದರ್ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಇತರ ಆರೋಪಿಗಳ ರಿಮಾಂಡ್ ವರದಿಯಲ್ಲಿ ನವದೀಪ್ ಮಾದಕ ದ್ರವ್ಯ ಸೇವಿಸಿದ ಶಂಕಿತ ವ್ಯಕ್ತಿ ಮಾತ್ರವೇ ಹೊರತು ದಂಧೆಕೋರನಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ನವದೀಪ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

Telangana High Court on Navdeep Drug Case

ಇದನ್ನು ಹೈಲೈಟ್ ಮಾಡಿದ ವಕೀಲರು, ಔಷಧಿಗಳ ಗ್ರಾಹಕರು ಕಾನೂನಿನಿಂದ ಸ್ವಲ್ಪ ವಿನಾಯಿತಿ ಹೊಂದಿದ್ದಾರೆ ಎಂದು ವಾದಿಸಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಸೂಕ್ತ ಆದೇಶಗಳನ್ನು ನೀಡಬೇಕು ಎಂದು ವಿನಂತಿಸಿದ್ದಾರೆ. ಆದರೆ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಸುದರ್ಶನ್ ಸಾರಾ ಅವರು ಮನವಿಯನ್ನು ನಿರಾಕರಿಸಿದ್ದಾರೆ.

ನವದೀಪ್ ಅವರನ್ನು ಈ ಹಿಂದೆ ಟಾಲಿವುಡ್ ಡ್ರಗ್ ಪ್ರಕರಣದಲ್ಲಿ ಪರೀಕ್ಷಿಸಲಾಗಿತ್ತು. ಅದರಲ್ಲಿ ಅವರು ಅಪರಾಧಿ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ತಿಳಿಯದೆ, ನವದೀಪ್ ಕೇವಲ ಗ್ರಾಹಕ ಎಂದು ಖಚಿತಪಡಿಸಲು ಸಾಧ್ಯವಿಲ್ಲ. ಆರೋಪಿ ನವದೀಪ್‌ನ ವಿಚಾರಣೆಯಿಂದ ಹಲವು ವಿಷಯಗಳು ಬಹಿರಂಗವಾಗಬಹುದು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸುದರ್ಶನ್ ವಾದಿಸಿದ್ದಾರೆ.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಸಿಆರ್‌ಪಿಸಿಯ ಸೆಕ್ಷನ್ 41 ಎ ಅಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸಲು ಆದೇಶಗಳನ್ನು ನೀಡಿದರು. ಇನ್ನು ಡ್ರಗ್ಸ್ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ತಮ್ಮ ಮುಂದೆ ಹಾಜರಾಗುವಂತೆ ಪೊಲೀಸರು ಬುಧವಾರ ಸಂಜೆ ನವದೀಪ್ ಅವರಿಗೆ 41ಎ ನೋಟಿಸ್ ಜಾರಿ ಮಾಡಿದ್ದಾರೆ. ಇತ್ತೀಚೆಗೆ, ಕಳ್ಳತನ ಮಾಡುತ್ತಿದ್ದ ಮೂವರು ನೈಜೀರಿಯನ್ನರನ್ನು ಗುಡಿಮಲ್ಕಾಪುರ ಪೊಲೀಸರು ಬಂಧಿಸಿದ ನಂತರ ಮತ್ತೊಮ್ಮೆ ಡ್ರಗ್ಸ್ ಪ್ರಕರಣ ಸದ್ದು ಮಾಡುತ್ತಿದೆ.


ನವದೀಪ್

ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ನವದೀಪ್ ಕಿರುತೆರೆ ನಿರೂಪಕನಾಗಿಯೂ ಗುರುತಿಸಿಕೊಂಡಿದ್ದಾರೆ. 2004 ರಲ್ಲಿ 'ಜೈ' ಸಿನಿಮಾ ಮೂಲಕ ನವದೀಪ್ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಬಳಿಕ ಗೌತಮ್ SSE, ಆರ್ಯ-2, ಧ್ರುವ, ನೆಕ್ಸ್ಟ್ ಏಂಟಿ, ರನ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ 'ಲವ್ ಮೌಳಿ' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತೆಲುಗು ಬಿಗ್‌ಬಾಸ್ ಸೀಸನ್ ಒಂದರ ಸ್ಪರ್ಧಿಯಾಗಿ ಫೈನಲ್‌ವರೆಗೂ ಹೋಗಿದ್ದರು.

More from Filmibeat

English summary
Telangana High Court on Navdeep Drug Case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X