ಚಿತ್ರಮಂದಿರಗಳಲ್ಲಿ ಇನ್ಮುಂದೆ ವಾಹನ ಪಾರ್ಕಿಂಗ್ ಉಚಿತ; ಹೈಕೋರ್ಟ್ ಮಹತ್ವದ ಆದೇಶ

ಪ್ರೇಕ್ಷಕರು ಸಿನಿಮಾ ನೋಡುವುದು ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದೆ. ಸಿನಿಮಾ ಟಿಕೆಟ್ ದರ ಮಾತ್ರವಲ್ಲ, ಪಾರ್ಕಿಂಗ್, ಪಾಪ್‌ಕಾರ್ನ್ ಅಂತೆಲ್ಲಾ ಭಾರೀ ಹಣ ತೆರಬೇಕಾಗಿದೆ. ಇದೆಲ್ಲವೂ ಸಿನಿರಸಿಕರಿಗೆ ಹೊರೆಯಾಗುತ್ತಿದೆ. ಹಾಗಾಗಿ ಸಿನಿಮಾ ನೋಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ಚಿತ್ರಮಂದಿರಗಳು ಪ್ರೇಕ್ಷಕರ ಬರ ಎದುರಿಸಲು ಇದು ಕೂಡ ಒಂದು ಕಾರಣ ಎನ್ನಬಹುದು.

ಇನ್ನು ಮುಂದೆ ಸಿಂಗಲ್‌ಸ್ಕ್ರೀನ್ ಚಿತ್ರಮಂದಿರಗಳ ಆವರಣದಲ್ಲಿ ವಾಹನ ಪಾರ್ಕಿಂಗ್ ಮಾಡಿ ಸಿನಿಮಾ ವೀಕ್ಷಿಸಲು ಪಾರ್ಕಿಂಗ್ ಶುಲ್ಕ ನೀಡಬೇಕಿಲ್ಲ ಎಂದು ತೆಲಂಗಾಣ ಹೈಕೋರ್ಟ್ ಆದೇಶ ನೀಡಿದೆ. ಹಾಗಾಗಿ ಸದ್ಯಕ್ಕೆ ಈ ನಿಯಮ ಕರ್ನಾಟಕದಲ್ಲಿ ಜಾರಿ ಆಗಿಲ್ಲ. ತೆಲಂಗಾಣದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಸುವವರಿಗೆ ಈ ಲಾಭ ಸಿಗಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಈ ನಿಮಯ ಜಾರಿಗೆ ಬಂದರೆ ಅಚ್ಚರಿ ಪಡಬೇಕಿಲ್ಲ.

Telangana High Court Orders No Parking Fee for Moviegoers at Single-Screen Theatres

ಕೆಲ ದಿನಗಳ ಹಿಂದೆ ತೆಲಂಗಾಣದ ದಿಲ್ಸುಖ್‌ನಗರದ ಕೊನಾರ್ಕ್ ಥಿಯೇಟರ್‌ನಲ್ಲಿ ಪ್ರೇಕ್ಷಕರಿಂದ 20 ರೂ. ವಾಹನ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಪ್ರಶ್ನಿಸಿ ಪ್ರೇಮ್ ರಾಮಾವತ್ ಎಂಬುವವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಸಿಂಗಲ್-ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ಟಿಕೆಟ್ ಹೊಂದಿರುವ ಪ್ರೇಕ್ಷಕರಿಗೆ ಯಾವುದೇ ಪಾರ್ಕಿಂಗ್ ಶುಲ್ಕ ವಿಧಿಸಬಾರದು ಎಂದು ಸೂಚಿಸಿದೆ.

ಈ ಹಿಂದೆ ತೆಲಂಗಾಣದ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಗಳೆರಡರಲ್ಲೂ ಸಹ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಂದ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ ಎಂದು ಆದೇಶ ನೀಡಿತ್ತು. ಆದರೆ ಕೋವಿಡ್ ಸಂಕಷ್ಟದ ಬಳಿಕ ಥಿಯೇಟರ್ ಮಾಲೀಕರು ಸರ್ಕಾರದ ಮೊರೆ ಹೋಗಿ ಆದೇಶದಿಂದ ವಿನಾಯಿತಿ ಪಡೆದಿದ್ದರು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ 20 ರೂ. ಹಾಗೂ ಕಾರು ಪಾರ್ಕಿಂಗ್ ಮಾಡಲು 50 ರೂ. ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರಕ್ಕಿಂತ ಕೆಲವೊಮ್ಮ ಪಾರ್ಕಿಂಗ್ ಶುಲ್ಕ ಹೆಚ್ಚು ಪಾವತಿಸುವಂತಾಗುತ್ತದೆ. ಗಂಟೆ ಲೆಕ್ಕದಲ್ಲಿ ಅಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುತ್ತಾರೆ. ಕೆಲವೊಮ್ಮೆ ಕಾರ್ ಪಾರ್ಕಿಂಗ್‌ಗಾಗಿ 100 ರೂ. 150 ರೂ. ಪಾರ್ಕಿಂಗ್ ಶುಲ್ಕ ತೆರಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಸಿನಿಮಾ ನೋಡಲು ಮಾಲ್‌ಗೆ ಬಂದಿದ್ದೀವಿ. ಕೊನೆ ಪಕ್ಷ ಏಕರೂಪದ ಪಾರ್ಕಿಂಗ್ ಶುಲ್ಕ ವಿಧಿಸಿ, ಗಂಟೆ ಲೆಕ್ಕದಲ್ಲಿ ಯಾಕೆ ಎಂದು ಕೆಲ ಪ್ರೇಕ್ಷಕರು ಪ್ರಶ್ನಿಸುವುದನ್ನು ನೋಡಿದ್ದೇವೆ. 2ರಿಂದ 3 ಗಂಟೆ ಸಿನಿಮಾ ಕಾಲಾವಧಿ ಇರುತ್ತದೆ. ಅದಕ್ಕೆ ತಕ್ಕಂತೆ ನಾವು ವಾಹನ ಪಾರ್ಕಿಂಗ್ ಮಾಡಬೇಕಾಗುತ್ತದೆ. ಅದಕ್ಕಾಗಿ ಭಾರೀ ಶುಲ್ಕ ಯಾವ ನ್ಯಾಯ ಎಂದು ವಾದಿಸುತ್ತಾರೆ. ಆದರೆ ಅದಕ್ಕೆಲ್ಲಾ ಮಾಲ್ ಸಿಬ್ಬಂದಿ ಸೊಪ್ಪು ಹಾಕುವುದಿಲ್ಲ.

ತೆಲಂಗಾಣ ಹೈಕೋರ್ಟ್ ಸಿನಿಮಾ ಪ್ರೇಕ್ಷಕರಿಗೆ ಸಿಹಿಸುದ್ದಿ ನೀಡಿದೆ. ಆದರೆ ಕೋರ್ಟ್ ಆದೇಶ ಜಾರಿಗೆ ಬರಬೇಕಿದೆ. ಚಿತ್ರಮಂದಿರದ ಮಾಲೀಕರು ಈ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರಮಂದಿರಗಳಲ್ಲಿ ಪಾರ್ಕಿಂಗ್ ಶುಲ್ಕ ಒಳ್ಳೆ ಆದಾಯದ ಮೂಲವಾಗಿದೆ. ಹಾಗಾಗಿ ಅಷ್ಟು ಸುಲಭವಾಗಿ ಇದನ್ನು ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

More from Filmibeat

Read more about: theater tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X