'ನಾನಲ್ಲ, ಸೋನು ಸೂದ್ ಸೂಪರ್ ಹೀರೋ' ಎಂದ ಸಚಿವರಿಗೆ ನಟ ಹೇಳಿದ್ದೇನು?

ಕೊರೊನಾ ಸಂಕಷ್ಟ ಕಾಲದಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಿ ಅಗತ್ಯ ನೆರವು ಕೊಡುತ್ತಿರುವ ನಟ ಸೋನು ಸೂದ್ ದೇಶದ ಜನರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಕೇವಲ ಒಂದು ರಾಜ್ಯ ಮಾತ್ರವಲ್ಲ ದೇಶದ ಉದ್ದಗಲಕ್ಕೂ ಎಲ್ಲ ವರ್ಗದ ಜನರಿಗೂ ಸೋನು ಸೂದ್ ಸಹಾಯ ಮಾಡ್ತಿದ್ದಾರೆ.

ಕೇವಲ ಜನರು ಮಾತ್ರವಲ್ಲ ಸೆಲೆಬ್ರಿಟಿಗಳು, ರಾಜಕಾರಣಿಗಳು ಸಹ ಸೋನು ಸೂದ್ ರಿಯಲ್ ಹೀರೋ ಎನ್ನುತ್ತಿದ್ದಾರೆ. ಇದೀಗ, ತೆಲಂಗಾಣ ಮಂತ್ರಿಯೊಬ್ಬರು ಸಹ ಸೋನು ಸೂದ್ 'ಸೂಪರ್ ಹೀರೋ' ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವರ ಮಾತಿಗೆ ವಿನಯವಾಗಿ ಪ್ರತಿಕ್ರಿಯಿಸಿರುವ ಸೋನು ಸೂದ್ ''ನೀವು ಹೀರೋ'' ಎಂದಿದ್ದಾರೆ. ಮುಂದೆ ಓದಿ....

ತೆಲಂಗಾಣ ಸಚಿವ ಕೆಟಿಆರ್

ತೆಲಂಗಾಣ ಸಚಿವ ಕೆಟಿಆರ್

ತೆಲಂಗಾಣ ಸಚಿವ ಕೆಟಿ ರಾಮರಾವ್ ಸಹ ಈ ಕೊರೊನಾ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸಹಾಯ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನೆರವು ಕೇಳುತ್ತಿರುವ ತೆಲಂಗಾಣ ಜನರಿಗೆ ಕೆಟಿಆರ್ ಸ್ಪಂದಿಸುತ್ತಿದ್ದಾರೆ. ಕೆಟಿಆರ್ ಅವರಿಂದ ನೆರವು ಪಡೆದ ವ್ಯಕ್ತಿಯೊಬ್ಬರು ''ನೀವು ಸೂಪರ್ ಹೀರೋ ಸರ್'' ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕೆಟಿಆರ್ ''ಸೋನು ಸೂದ್ ಸೂಪರ್ ಹೀರೋ, ನಾನಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

ನಾನೊಬ್ಬ ಪ್ರಜಾಸೇವಕ

ನಾನೊಬ್ಬ ಪ್ರಜಾಸೇವಕ

ನೀವು ಸೂಪರ್ ಹೀರೋ ಎಂದು ವ್ಯಕ್ತಿಗೆ ಉತ್ತರಿಸಿದ ಕೆಟಿಆರ್ ''ನಾನು ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ಅಷ್ಟೇ. ನೀವು ಸೋನು ಸೂದ್ ಅವರನ್ನು ಸೂಪರ್ ಹೀರೋ ಎಂದು ಕರೆಯಬಹುದು. ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿ'' ಎಂದು ವಿನಂತಿಸಿದ್ದಾರೆ.

ಸೋನು ಸೂದ್ ಏನಂದ್ರು?

ಸೋನು ಸೂದ್ ಏನಂದ್ರು?

ಕೆಟಿಆರ್ ಟ್ವೀಟ್‌ಗೆ ನಟ ಸೋನು ಸೂದ್ ಪ್ರತಿಕ್ರಿಯಿಸಿದರು. ''ನಿಮ್ಮ ಒಳ್ಳೆಯ ಮಾತುಗಳಿಗೆ ನಾನು ಆಭಾರಿಯಾಗಿದ್ದೇನೆ ಸರ್. ಆದರೆ, ನಿಮ್ಮ ನಾಯಕತ್ವದಲ್ಲಿ ತೆಲಂಗಾಣ ರಾಜ್ಯ ಬಹಳ ಅಭಿವೃದ್ದಿ ಹೊಂದಿದೆ. ನೀವು ನಿಜವಾದ ಹೀರೋ. ತೆಲಂಗಾಣ ನನ್ನ ಎರಡನೇ ಮನೆ. ಅಲ್ಲಿನ ಜನ ನನಗೆ ಕೆಲಸದ ಜೊತೆ ಸಾಕಷ್ಟು ಪ್ರೀತಿ ನೀಡಿದ್ದಾರೆ'' ಎಂದು ಧನ್ಯವಾದ ಅರ್ಪಿಸಿದರು.

Recommended Video

Yash ಮಾಡಿದ ಒಳ್ಳೆ ಕೆಲಸಕ್ಕೆ Upendra ಫಿದಾ | Filmibeat Kannada
ಹೈದರಾಬಾದ್‌ ಬಿರಿಯಾನಿ ತಿನ್ನೋಣ

ಹೈದರಾಬಾದ್‌ ಬಿರಿಯಾನಿ ತಿನ್ನೋಣ

ಸೋನು ಸೂದ್ ಮತ್ತು ತೆಲಂಗಾಣ ಮಂತ್ರಿ ಕೆಟಿಆರ್ ಸಂಭಾಷಣೆ ಇಲ್ಲಿಗೆ ಮುಗಿದಿಲ್ಲ. ಸೋನು ಸೂದ್ ಟ್ವೀಟ್‌ಗೆ ಮತ್ತೆ ಪ್ರತಿಕ್ರಿಯಿಸಿದ ಕೆಟಿಆರ್ ''ತೆಲಂಗಾಣಕ್ಕೆ ಬಂದಾಗ ಭೇಟಿಯಾಗೋಣ, ಒಟ್ಟಿಗೆ ಹೈದರಾಬಾದ್ ಬಿರಿಯಾನಿ ತಿನ್ನೋಣ'' ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೋನು ''ನಾನು ಎದುರು ನೋಡುತ್ತಿದ್ದೇನೆ ಸರ್, ಖಂಡಿತಾ ಸಿಗೋಣ'' ಎಂದಿದ್ದಾರೆ.

More from Filmibeat

English summary
Telangana Minister KT Ramarao called actor Sonu sood is Super Hero. after that Sonu sood reacted to KTR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X