'ರಿಯಲ್ ಹೀರೋ' ಸೋನು ಸೂದ್ ಗೆ ದೇವಾಲಯ ಕಟ್ಟಿದ ತೆಲಂಗಾಣ ಜನತೆ

ಕೊರೊನಾ ಲಾಕ್ ಡೌನ್ ಬಳಿಕ ಕಷ್ಟದಲ್ಲಿದ್ದ ಲಕ್ಷಾಂತರ ಜನರಿಗೆ ಸಹಾಯ ಮಾಡಿ ರಿಯಲ್ ಹೀರೋ ಆಗಿರುವ ನಟ ಸೋನು ಸೂದ್, ಅನೇಕರ ಪಾಲಿನ ದೇವರಾಗಿದ್ದಾರೆ. ಸಂಕಷ್ಟದಲ್ಲಿದ್ದ ಜನರ ನೆರವಿಗೆ ನಿಂತಿದ್ದ ಸೋನು ಸೂದ್ ಅವರನ್ನು ಅನೇಕರು ದೇವರಂತೆ ಪೂಜಿಸುತ್ತಾರೆ.

ಇದೀಗ ಸೋನು ಸೂದ್ ಹೆಸರಿನಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಹೌದು, ತೆಲಂಗಾಣದ ಸಿದ್ದಿಪೇಟೆಯ, ದುಬ್ಬತಂಡ ಗ್ರಾಮದ ಜನರು ನಟ ಸೋನು ಸೂದ್ ಗಾಗಿ ದೇವಾಲಯವನ್ನು ನಿರ್ಮಿಸಿ, ಪೂಜಿಸಿದ್ದಾರೆ. ಸೋನು ಸೂದ್ ಮಾನವೀಯ ಕೆಲಸ ಮೆಚ್ಚಿ, ಅವರಿಗಾಗಿ ಗುಡಿ ಕಟ್ಟಿ ಪೂಜಿಸು ಪ್ರಾರಂಭಸಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್ ಬಾರಿ ಪ್ರಶಂಸೆ ಗಿಟ್ಟಿಸಿದ್ದರು. ಅವರ ಮಾನವೀಯ ಕೆಲಸ ಅಲ್ಲಿಗೆ ನಿಲ್ಲದೆ, ಇವತ್ತಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಬಡವರು, ವಿದ್ಯಾರ್ಥಿಗಳ ಶಿಕ್ಷಣ, ಆಸ್ಪತ್ರೆ ಖರ್ಚು ಸೇರಿದಂತೆ ಕಷ್ಟ ಎಂದ ಅನೇಕರಿಗೆ ನೆರವಾಗಿದ್ದಾರೆ.

Telangana people build a Temple for Actor Sonu Sood

ಇಡೀ ದೇಶ ಸೋನು ಸೂದ್ ಮಾನವೀಯ ಕೆಲಸ ಮೆಚ್ಚಿ ಶ್ಲಾಘಿಸುತ್ತಿದೆ. ಆದರೆ ತೆಲಂಗಾಣ ಜನತೆ ಒಂದು ಹೆಜ್ಜೆ ಮುಂದೆ ಹೋಗಿ ದೇವಾಲಯವನ್ನು ನಿರ್ಮಿಸಿ ಪೂಜಿಸಲು ಪ್ರಾರಂಭಿಸಿದ್ದಾರೆ. ಲಾಕ್ ಡೌನ್ ಬಳಿಕ ಸೋನು ಸೂದ್ ನಮಗೆ ಸಹಾಯ ಮಾಡಿದ್ದಾರೆ. ಮಾನವೀಯತೆಗೆ ಮತ್ತೊಂದು ಹೆಸರು ಸೋನು ಸೂದ್, ಯಾವುದೇ ಸಮಸ್ಯೆಯಾದರೂ ಬಗೆಹರಿಸಿದ್ದಾರೆ. ಭಾರತದಲ್ಲಿ ಇರುವ ಒಬ್ಬರೇ ದೇವರು ಸೋನು ಸೂದ್ ಎಂದು ಸ್ಥಳಿಯರು ಹಾಡಿಹೊಗಳುತ್ತಿದ್ದಾರೆ.

Recommended Video

ಬೆಂಗಳೂರು: Corona ಹಿನ್ನೆಲೆ VaikuntaEkadasiಗೆ ದೇವಸ್ಥಾನಕ್ಕೆ ಭಕ್ತರಿಗೆ ನೋ ಎಂಟ್ರಿ! | Oneindia Kannada

More from Filmibeat

English summary
Telangana people build a Temple for Actor Sonu Sood for his noble deeds amid panemic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X