ಅಸಭ್ಯವಾಗಿ ನಿಮ್ಮಿಷ್ಟದ ಬಟ್ಟೆ ಹಾಕುವ ಹಕ್ಕು ನಿಮಗಿದ್ರೆ, ಕಾಮೆಂಟ್ ಮಾಡೋ ಹಕ್ಕು ಬೇರೆಯವ್ರಿಗೆ ಇರುತ್ತೆ- ಇಂದ್ರಜಾ

ಇತ್ತೀಚೆಗೆ ಸೆಲೆಬ್ರೆಟಿಗಳ ವೇಷಭೂಷಣದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ನೆಗೆಟಿವ್ ಟ್ರೆಂಡ್ ಜೋರಾಗಿದೆ. ನಮ್ಮಿಷ್ಟದ ಬಟ್ಟೆ ತೊಡುವುದು ತಪ್ಪಾ? ಎಂದು ನಟಿಯರು ತಿರುಗೇಟು ಕೊಡುವುದು ಇದೆ. ಇತ್ತೀಚೆಗೆ ಕನ್ನಡದ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಡೀಪ್‌ ನೆಕ್ ಗೌನ್ ಧರಿಸಿ ಸಿನಿಮಾ ಪ್ರೀಮಿಯರ್ ಶೋ ನೋಡಲು ಬಂದಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು.

ಆ ವೀಡಿಯೋಗಳು ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗಿತ್ತು. ಯೂಟ್ಯೂಬರ್ ಒಬ್ಬರ ವೀಡಿಯೋ ನೋಡಿ ನಟಿ ನಿಶ್ವಿಕಾ ನಾಯ್ಡು ಕೆಂಡ ಕಾರಿದ್ದರು. ಹೆಣ್ಣು ಮತ್ತು ಆಕೆ ಧರಿಸುವ ಬಟ್ಟೆಯ ಬಗ್ಗೆ ಠೀಕೆ ಮಾಡುವ ನಿಮಗೆ ನಾಚಿಕೆಯಾಗಬೇಕು ಎಂದಿದ್ದರು. ಹೆಣ್ಣು ಬೆ*ತ್ತಲೆ ಇದ್ದರೂ ನೀನು ಕಣ್ಣೆತ್ತಿ ನೋಡಬಾರದು ಎಂದು ಆಕ್ರೋಶ ಹೊರ ಹಾಕಿದ್ದರು.

Telufgu actress Indraja on Celeb Clothing Row Public Dressing Comes With Public Opinions

ಹೆಣ್ಣು ಮಕ್ಕಳು ತೊಡುವ ಬಟ್ಟೆ ಅದರಲ್ಲೂ ಇತ್ತೀಚೆಗೆ ಸಾರ್ವಜನಿಕ ಜೀವನದಲ್ಲಿ ಇರುವವರು, ಪಬ್ಲಿಕ್‌ನಲ್ಲಿ ಹೀಗೆ ಅಂಗಾಂಗ ಪ್ರದರ್ಶನ ಮಾಡುವವರ ಬಗ್ಗೆ ಬಹುಭಾಷಾ ನಟಿ ಇಂದ್ರಜಾ ಪ್ರತಿಕ್ರಿಯಿಸಿದ್ದಾರೆ. ನಿಮ್ಮಿಷ್ಟ ಬಂದಂತೆ ಬಟ್ಟೆ ಹಾಕಿಕೊಂಡು ಸಾರ್ವಜನಿಕ ಸ್ಥಳಗಳಿಗೆ ಬಂದ್ರೆ, ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಎಲ್ಲಿ ಹೇಗೆ ಬಟ್ಟೆ ಧರಿಸಬೇಕು ಎನ್ನುವ ಪರಿಜ್ಞಾನ ಇರವೇಕು ಎಂದು ನಟಿ ಇಂದ್ರಜಾ ಹೇಳಿದ್ದಾರೆ.

ಚೆನ್ನೈ ಮೂಲದ ನಟಿ ಇಂದ್ರಜಾ ಕನ್ನಡದ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಗ್‌ಟಿವಿ ಪ್ಲಸ್ ತೆಲುಗು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯುವ ಜನತೆಯಲ್ಲಿ ಕೆಲವರು ತೊಡುವ ಬಟ್ಟೆ ಬಗ್ಗೆ ಕೇಳಿದ ಪ್ರಶ್ನೆಗೆ "ಅಂತ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು, ಸೋಶಿಯಲ್ ಮೀಡಿಯಾದಲ್ಲಿ ಫೋಟೊ, ವೀಡಿಯೋ ಹಾಕಲು ನಿಮಗೆಷ್ಟು ಹಕ್ಕು ಇದ್ಯೋ, ಅದು ಸರಿ ಇಲ್ಲದಿದ್ದರೆ ಅಸಭ್ಯವಾಗಿದ್ದರೆ ಅದರ ಬಗ್ಗೆ ಕಾಮೆಂಟ್ ಮಾಡುವ ಹಕ್ಕು ಬೇರೆಯವರಿಗೂ ಇರುತ್ತದೆ" ಎಂದು ಇಂದ್ರಜಾ ಹೇಳಿದ್ದಾರೆ.

Telufgu actress Indraja on Celeb Clothing Row Public Dressing Comes With Public Opinions

ನಾನು ಎಲ್ಲಿ ಇದ್ದೀವಿ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ವರ್ತಿಸಬೇಕು ಎಂದು ಇಂದ್ರಜಾ ಹೇಳಿದ್ದಾರೆ. "ಮೊದಲು ನೀವು ಎಲ್ಲಿ ಬಂದಿದ್ದಾರೆ ಎನ್ನುವುದು ಗಮನದಲ್ಲಿ ಇರಬೇಕು. ಸಾರ್ವಜನಿಕ ಜಾಗದಲ್ಲಿ ಹೇಗಿರಬೇಕೋ ಆ ರೀತಿ ಇರಬೇಕು. ನಾವು ಮನೆಯಲ್ಲಿ ಮಾತನಾಡಿದ್ದಂತೆ ಸ್ನೇಹಿತರ ಜೊತೆ ಮಾತನಾಡಿದಂತೆ ಪಬ್ಲಿಕ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ. ಮಾತನಾಡಬಾರದು ಕೂಡ. ಅದೇ ರೀತಿ ಧರಿಸುವ ಕಾಸ್ಟ್ಯೂಮ್ ವಿಚಾರದಲ್ಲಿ ಸಹ ರೀತಿ ನೀತಿ ಇದೆ. ಆದರೆ ಇದು ನನ್ನಿಷ್ಟ, ನಾನು ಹಾಕಿಕೊಳ್ಳುತ್ತೇನೆ ಎನ್ನುವುದು ಪರವಾಗಿಲ್ಲ. ಆದರೆ ನೀನು ಕೇಳೋಕೆ ಯಾರು ಎನ್ನುವುದಕ್ಕೆ ಅವಕಾಶ ಇಲ್ಲ" ಎಂದು ಇಂದ್ರಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾತು ಮುಂದುವರೆಸಿರುವ ನಟಿ ಇಂದ್ರಜಾ "ನಿಮ್ಮ ಮನೆಯಲ್ಲೇ ವಿಭಿನ್ನ ಅಭಿಪ್ರಾಯಗಳಿರುತ್ತವೆ. ಒಬ್ಬೊಬ್ಬರ ಒಂದೊಂದು ರೀತಿ ಮಾತನಾಡುತ್ತಾರೆ. ಕೆಲವೊಮ್ಮೆ ನಿಮ್ಮ ಬಟ್ಟೆ ಬಗ್ಗೆ ಕೂಡ ಏಯ್, ಏನೇ ಇಂತ ಬಟ್ಟೆ ಹಾಕಿಕೊಂಡಿದ್ದೀಯಾ ಎನ್ನುತ್ತಾರೆ. ಅದೇ ರೀತಿಯ ಭಿನ್ನ ಅಭಿಪ್ರಾಯ ಇರುವವರು ಹೊರಗಡೆ ಸಹ ಇರ್ತಾರೆ. ಅಷ್ಟು ಅಸಭ್ಯವಾಗಿ ಮತ್ತೊಬ್ಬರು ನೋಡಿ ಛೀ ಎನ್ನುವಂತೆ ಬಟ್ಟೆ ಹಾಕಿಕೊಳ್ಳಬೇಡಿ. ಬೇಕಿದ್ದರೆ ನಿಮ್ಮ ಮನೆಯಲ್ಲಿ ಹಾಕ್ಕೊಳ್ಳಿ. ಅದು ನಿಮ್ಮಿಷ್ಟ. ಆದರೆ ಪಬ್ಲಿಕ್‌ನಲ್ಲಿ ಕೆಟ್ಟದಾಗಿ ಬಟ್ಟೆ ಧರಿಸಿದ್ರೆ, ಕಾಮೆಂಟ್ ಮಾಡ್ತಾರೆ. ಅದನ್ನು ಸ್ವೀಕರಿಸಲು ಸಿದ್ಧರಿದ್ದರೆ ಮಾತ್ರ ಧರಿಸಿ" ಎಂದಿದ್ದಾರೆ.

1998ರಲ್ಲಿ 'ಗಡಿಬಿಡಿ ಕೃಷ್ಣ' ಚಿತ್ರದ ಮೂಲಕ ಇಂದ್ರಜಾ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ಕೂಲಿ ರಾಜ', 'ದಿ ಕಿಲ್ಲರ್', 'ಪ್ರತ್ಯರ್ಥ', 'ಅವಳೇ ನನ್ನ ಹುಡುಗಿ', 'ಸುಂದರ ಪುರುಷ', 'ಖಡ್ಗ' ಹೀಗೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

More from Filmibeat

Read more about: tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X