ನಟ ಅಖಿಲ್ ಅಕ್ಕಿನೇನಿ ಹಾಗೂ ಜೈನಾಬ್ ರಾವ್ಡ್ಜಿ ಮದುವೆ ದಿನಾಂಕ ಫಿಕ್ಸ್

ಅಕ್ಕಿನೇನಿ ಫ್ಯಾಮಿಲಿ ನಟ ಅಖಿಲ್ ಹಾಗೂ ಜೈನಾಬ್ ರಾವ್ಡ್ಜಿ ಮದುವೆಗೆ ಸಿದ್ಧತೆ ನಡೀತಿದೆ. ಕಳೆದ ವರ್ಷವಷ್ಟೆ ಹಿರಿಯ ಪುತ್ರನಿಗೆ ಮದುವೆ ಮಾಡಿದ್ದ ನಟ ನಾಗಾರ್ಜುನ ಈಗ ಕಿರಿಯ ಪುತ್ರನ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಕೂಡ ನಾಗ್ ಮದುವೆಗೆ ಆಹ್ವಾನಿಸಿದ್ದಾರೆ.

ತಂದೆ ಹಾದಿಯಲ್ಲೇ ಅಖಿಲ್ ಚಿತ್ರರಂಗಕ್ಕೆ ಬಂದಿದ್ದರು. ಆದರೆ ದೊಡ್ಡ ಯಶಸ್ಸು ಸಿಗಲಿಲ್ಲ. ಪ್ರಯತ್ನ ಬಿಡದೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 9 ವರ್ಷಗಳ ಹಿಂದೆ ಶ್ರೇಯಾ ಭೂಪಾಲ್ ಎಂಬ ಉದ್ಯಮಿ ಮಗಳ ಜೊತೆ ಅಖಿಲ್ ಮದುವೆ ನಿಶ್ಚಿಯವಾಗಿತ್ತು. ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಸಹ ನಡೆದಿತ್ತು. 3 ವರ್ಷಗಳ ಬಳಿಕ ಅದು ಮುರಿದು ಬಿದ್ದಿತ್ತು.

Telugu Actor Akhil Akkineni and Zainab Ravdjee wedding date fixed

ಎರಡು ವರ್ಷಗಳ ಕಾಲ ಶ್ರೇಯಾ ಜೊತೆ ಅಕಿಲ್ ಡೇಟಿಂಗ್ ಮಾಡಿದ್ದರು. ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಎರಡೂ ಮನೆಯವರು ಒಪ್ಪಿ ಮದುವೆಗೆ ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ಅದು ಮುರಿದು ಬಿದ್ದು ಅಖಿಲ್ ಒಂಟಿಯಾಗಿದ್ದರು. ಇನ್ನು ಜೈನಾಬ್ ರಾವ್ಡ್ಜಿ ಎಂಬಾಕೆ ಜೊತೆ ಈಗ ಅಖಿಲ್ ಮದುವೆ ಆಗುತ್ತಿದ್ದಾರೆ. ಕಲಾ ವಿಭಾಗದಲ್ಲಿ ಜೈನಾಬ್ ಗುರ್ತಿಸಿಕೊಂಡಿದ್ದಾರೆ. ಪೇಂಟಿಂಗ್ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ.

ಕೈಗಾರಿಕೋದ್ಯಮಿ ಜುಲ್ಫಿ ರಾವ್ಜಿ ಅವರ ಪುತ್ರಿ ಜೈನಾಬ್ ರಾವ್ಡ್ಜಿ. ನಾಗಾರ್ಜುನಾ ದಂಪತಿ ಜೊತೆಗೆ ಜೈನಾಬ್ ಪೋಷಕರು ಕೂಡ ತೆಲಂಗಾಣ ಸಿಎಂ ಮನೆಗೆ ಭೇಟಿ ನೀಡಿ ಮದುವೆ ಆಮಂತ್ರಣ ಕೊಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. ಜೂನ್ 6ರಂದು ಅದ್ಧೂರಿಯಾಗಿ ಮದುವೆ ನಡೆಯಲಿದೆ. ತಮ್ಮದೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಪುತ್ರನ ಮದುವೆ ಮಾಡಲು ನಾಗಾರ್ಜುನ ತೀರ್ಮಾನಿಸಿದ್ದಾರೆ. ಬಳಿಕ ರಾಜಸ್ಥಾನದಲ್ಲಿ ರಿಸೆಪ್ಷನ್ ಪಾರ್ಟಿ ನಡೆಯುತ್ತದೆ ಎಂದು ವರದಿಯಾಗಿದೆ.

ಕಳೆದ ವರ್ಷ ನಾಗಚೈತನ್ಯಾ 2ನೇ ಮದುವೆ ಕೂಡ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದಿತ್ತು. ನಟಿ ಸಮಂತಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದ ಚೈತು ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದಿದ್ದರು. ಬಳಿಕ ನಟಿ ಶೋಭಿತಾ ದುಲಿಪಾಲ ಜೊತೆ ಡೇಟಿಂಗ್ ನಡೆಸಿದ್ದರು. ಬಳಿಕ ಇಬ್ಬರ ಮದುವೆಗೆ ಪೋಷಕರ ಸಮ್ಮತಿ ಕೂಡ ಸಿಕ್ಕಿತ್ತು.

ಈ ಹಿಂದೆ ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಹಾಲ್ ಹೈಡ್ರಾ ( ಹೈದ್ರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್) ಅಧಿಕಾರಿಗಳು ನೆಲಸಮ ಮಾಡಿದ್ದರು. ಅಕ್ರಮವಾಗಿ ಕಟ್ಟಡ ಕಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನಟ ನಾಗಾರ್ಜುನ ಬೇಸರ ಹೊರ ಹಾಕಿದ್ದರು. ಆಗ ಕೆಲವರು ಸಿಎಂ ರೇವಂತ್ ರೆಡ್ಡಿ ಕಡೆ ಬೊಟ್ಟು ಮಾಡಿ ತೋರಿಸಿದ್ದರು. ಹೀಗಾಗಿ ನಾಗ್ ಹಾಗೂ ರೇವಂತ್ ರೆಡ್ಡಿ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದೇ ಭಾವಿಸಿದ್ದರು. ಆದರೆ ಈಗ ಪುತ್ರನ ಮದುವೆಗೆ ಖುದ್ದು ನಾಗಾರ್ಜುನ ಹೋಗಿ ಆಮಂತ್ರಣ ಕೊಟ್ಟಿದ್ದಾರೆ.

ಪುಟ್ಟ ಮಗುವಾಗಿದ್ದಾಗಲೇ 'ಸಿಸಿಂದ್ರಿ' ಚಿತ್ರದಲ್ಲಿ ತಂದೆ ಜೊತೆ ಅಖಿಲ್ ನಟಿಸಿದ್ದರು. ಬಳಿಕ 'ಮನಂ' ಚಿತ್ರದ ಅತಿಥಿ ನಟಿಸಿದ್ದು ಗೊತ್ತೇಯಿದೆ. 'ಅಖಿಲ್' ಎಂಬ ಚಿತ್ರದಲ್ಲೇ ಹೀರೊ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಬಳಿಕ 'ಹಲೋ', 'ಮಜ್ನು', 'ಮೋಸ್ಟ್ ಎಲಿಜಬಲ್ ಬ್ಯಾಚುಲರ್', 'ಏಜೆಂಟ್' ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆದರೆ ಯಾವುದೇ ಸಿನಿಮಾ ಗೆಲ್ಲಲಿಲ್ಲ.

'ಲೆನಿನ್' ಎಂಬ ಚಿತ್ರದಲ್ಲಿ ಸದ್ಯ ಅಖಿಲ್ ಅಕ್ಕಿನೇನಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಕೆಲಸಗಳು ಆರಂಭವಾಗಿದೆ. ಇಂತಹ ಸಮಯದಲ್ಲೇ ಮದುವೆಗೆ ಅಖಿಲ್ ಸಜ್ಜಾಗುತ್ತಿದ್ದಾರೆ. ಚಿತ್ರರಂಗದ ತಾರಾಯರು, ರಾಜಕೀಯ ಮುಖಂಡರು, ಖ್ಯಾತ ಉದ್ಯಮಿಗಳು ಸೇರಿದಂತೆ ಎರಡೂ ಕುಟುಂಬಗಳ ಆಪ್ತರು ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಲಿದ್ದಾರೆ.

More from Filmibeat

English summary
Nagarjuna personally invites Telangana CM Revanth Reddy to son Akhil Akkineni's wedding with Zainab Ravdjee
Read more about: akhil tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X