ಅಲ್ಲು ಅರ್ಜುನ್ ಸಹೋದರನ ಹೊಸ ಲುಕ್: ಅಲ್ಲು ಸಿರೀಶ್ ಸಿಕ್ಸ್ ಪ್ಯಾಕ್‌ಗೆ ಫ್ಯಾನ್ಸ್ ಫಿದಾ

ಟಾಲಿವುಡ್ ನ ಖ್ಯಾತ ನಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಬಣ್ಣದ ಲೋಕದಲ್ಲಿ ಸೂಪರ್ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ. ಅಣ್ಣನಿಗೆ ಸಿಕ್ಕ ಖ್ಯಾತಿ ಅಲ್ಲು ಸಿರೀಶ್ ಗೆ ಸಿಕ್ಕಿಲ್ಲ. ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಲ್ಲು ಸಿರೀಶ್, 2013ರಲ್ಲಿ ನಾಯಕನಾಗಿ ಚಿತ್ರಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಈಗಾಗಲೇ ಐದಾರು ಸಿನಿಮಾಗಳಲ್ಲಿ ನಟಿಸಿರುವ ಅಲ್ಲು ಸಿರೀಶ್ ಸದ್ಯ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಚಿತ್ರಕ್ಕಾಗಿ ದೇಹ ಹುರಿಗೊಳಿಸಿರುವ ಸಿರೀಶ್ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅನೇಕ ತಿಂಗಳಿಂದ ಜಿಮ್ ನಲ್ಲಿ ಬೆವರಿಳಿಸುತ್ತಿದ್ದ ಸಿರೀಶ್ ಈಗ ಕಟ್ಟುಮಸ್ತಾದ ದೇಹದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಜಿಮ್ ನಲ್ಲಿ ಬೇರ್ ಬಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಸಿರೀಶ್ ಫೋಟೋಗಳು ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ. ಸಿಕ್ಸ್ ಪ್ಯಾಕ್ ಮಾಡಿರುವ ಅಲ್ಲು ಸಿರೀಶ್ ಬದಲಾವಣೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Telugu Actor Allu sirish six pack photo goes viral on social media

ಅಂದಹಾಗೆ ಸಿರೀಶ್ ದಿಢೀರ್ ಬದಲಾವಣೆಗೆ ಕಾರಣ ಮುಂದಿನ ಸಿನಿಮಾ. ಮುಂದಿನ ಸಿನಿಮಾದಲ್ಲಿ ಅಲ್ಲು ಬೇರ್ ಬಾಡಿ ಪ್ರದರ್ಶನ ಮಾಡಲಿದ್ದಾರಂತೆ. ಹಾಗಾಗಿ ಚಿತ್ರಕ್ಕೆ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹ ದಂಡಿಸಿದ್ದಾರೆ.

ಅಲ್ಲು ಸಿರೀಶ್ ನಟಿಸಿರುವ ಮೊದಲ ಹಿಂದಿ ಆಲ್ಬಂ ವಿಲಾಯತಿ ಶರಾಬ್ ಸೂಪರ್ ಹಿಟ್ ಆಗಿದ್ದು, 100 ಮಿಲಿಯನ್ ಅಧಿಕ ವೀಕ್ಷಣೆ ಕಂಡಿದೆ. ಸದ್ಯ ಮುಂದಿನ ಸಿನಿಮಾಗಳ ತಯಾರಿಯಲ್ಲಿರುವ ಸಿರೀಶ್ ಮೇ 30ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವತ್ತೇ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

Telugu Actor Allu sirish six pack photo goes viral on social media

ಅಲ್ಲು ಸಿರೀಶ್ ಕೊನೆಯದಾಗಿ ಎಬಿಸಿಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 2019ರಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಇದು ಮಲಯಾಳಂ ಸಿನಿಮಾದ ರಿಮೇಕ್ ಆಗಿದೆ. ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಿರೀಶ್ ಮಲಯಾಳಂ ಚಿತ್ರದಲ್ಲೂ ನಟಿಸಿದ್ದಾರೆ. ಸದ್ಯ ತೆಲುಗಿನಲ್ಲಿ ದೊಡ್ಡ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ.

More from Filmibeat

English summary
Telugu Actor Allu sirish six pack photo goes viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X