'ಜೈಲರ್'-2 ಚಿತ್ರಕ್ಕೆ 50 ಕೋಟಿ ರೂ. ಕೇಳಿದ ಬಾಲಯ್ಯ; ನಿರ್ಮಾಪಕರು ಏನಂದ್ರು?

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್'-2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದೆ. ಎರಡು ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ಇನ್ನಿಲ್ಲದ ಕುತೂಹಲ ಮೂಡಿದೆ.

'ಜೈಲರ್' ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇವರಿಬ್ಬರ ಪವರ್‌ಫುಲ್ ಪರ್ಫಾರ್ಮನ್ಸ್ ಚಿತ್ರಕ್ಕೆ ದೊಡ್ಡ ಬಲ ತಂದುಕೊಟ್ಟಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ನರಸಿಂಹ ಆಗಿ ಶಿವಣ್ಣನ ಆರ್ಭಟ ಸಿನಿರಸಿಕರು ಮರೆಯೋಕೆ ಸಾಧ್ಯವಿಲ್ಲ. ಸೀಕ್ವೆಲ್‌ನಲ್ಲಿ ಕೂಡ ಇವರಿಬ್ಬರು ನಟಿಸೋದು ಪಕ್ಕಾ ಆಗಿದೆ. ಜೊತೆಗೆ ತೆಲುಗು ನಟ ಬಾಲಕೃಷ್ಣ ಕೂಡ ಬಣ್ಣ ಹಚ್ಚುವ ಬಗ್ಗೆ ಚರ್ಚೆ ನಡೀತಿದೆ.

Telugu Actor Balakrishna is set to receive Rs 50 crore for Rajinikanth s Jailer-2 cameo role

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನೆಲ್ಸನ್ 'ಜೈಲರ್' ಚಿತ್ರ ಕಟ್ಟಿಕೊಟ್ಟಿದ್ದು. ಅದ್ಭುತ ಕಥೆ ಇಲ್ಲದೇ ಇದ್ದರೂ ಎಲಿವೇಷನ್ಸ್ ಸೀನ್ಸ್ ಸೇರಿಸಿ ತಲೈವಾ ಅಭಿಮಾನಿಗಳನ್ನು ರಂಜಿಸಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ನೆಲ್ಸನ್ ಈ ಚಿತ್ರದಲ್ಲಿ ಬಾಲಕೃಷ್ಣ ಅವರಿಗಾಗಿ ಒಂದು ಪಾತ್ರ ಡಿಸೈನ್ ಮಾಡಿದ್ದೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಅವರು ನಟಿಸಬೇಕಿತ್ತು. ಬಳಿಕ ಆ ಪಾತ್ರಕ್ಕೆ ಒಂದು ಅಂತ್ಯ ಬರೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆ ಆಲೋಚನೆ ಕೈಬಿಟ್ಟಿದ್ದೆ ಎಂದಿದ್ದರು.

ಸೀಕ್ವೆಲ್ ಬರುತ್ತದೆ ಎಂದಾಗಲೇ ಬಾಲಯ್ಯ ಕೂಡ ಚಿತ್ರದಲ್ಲಿ ನಟಿಸುತ್ತಾರಾ? ಎನ್ನುವ ಚರ್ಚೆ ಶುರುವಾಗಿತ್ತು. ಇದೀಗ ಆ ವಿಚಾರ ಮತ್ತಷ್ಟು ವೈರಲ್ ಆಗುತ್ತಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇನ್ನು ಚಿತ್ರದಲ್ಲಿ ನಟಿಸೋಕೆ ಬಾಲಕೃಷ್ಣ 50 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎಂದು India Glitz ವೆಬ್‌ಸೈಟ್ ವರದಿ ಮಾಡಿದೆ. ನಿರ್ಮಾಪಕರು ಕೂಡ ಮರು ಮಾತನಾಡದೇ ಒಪ್ಪಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಕೇವಲ 20 ದಿನ ಕಾಲ್‌ಶೀಟ್ ಕೊಡಲು ಮುಂದಾಗಿದ್ದಾರೆ ಎನ್ನಲಾಗ್ತದೆ.

Telugu Actor Balakrishna is set to receive Rs 50 crore for Rajinikanth s Jailer-2 cameo role

'ಜೈಲರ್' ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ಸೀಕ್ವೆಲ್ ಆಗಿರುವ ಕಾರಣ ದೊಡ್ಡದಾಗಿ ಸದ್ದು ಮಾಡುವುದು ಗ್ಯಾರಂಟಿ ಎಂದು ಚಿತ್ರತಂಡ ಭಾವಿಸಿದೆ. ಅದೇ ಕಾರಣಕ್ಕೆ ರಜನಿಕಾಂತ್, ನೆಲ್ಸನ್ ಹೀಗೆ ಎಲ್ಲರಿಗೂ ಭಾರೀ ಸಂಭಾವನೆ ಕೊಟ್ಟು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಬಾಲಕೃಷ್ಣ ಖಡಕ್ ಅಭಿನಯದಿಂದ ಗಮನ ಸೆಳೆದವರು. 'ಜೈಲರ್'-2 ಚಿತ್ರದಲ್ಲಿ ಬಾಲಯ್ಯ ಇದ್ದರೆ ಹೇಗಿರುತ್ತದೆ ಎಂದು ಊಹಿಸಿಕೊಂಡೇ ಸಿನಿರಸಿಕರು ಫಿದಾ ಆಗಿದ್ದಾರೆ.

'ಜೈಲರ್- 2' ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಹಾಗಾಗಿ ಬಾಲಯ್ಯನಿಗೆ 50 ಕೋಟಿ ಕೊಡಲು ನಿರ್ಮಾಪಕರು ಹಿಂದು ಮುಂದು ನೋಡುತ್ತಿಲ್ಲ ಎನ್ನುವ ಚರ್ಚೆ ನಡೀತಿದೆ. 'ಜೈಲರ್' ಸಕ್ಸಸ್‌ನಿಂದ ನಿರ್ಮಾಪಕರು ಖುಷಿಯಾಗಿದ್ದರು. ಬಂದ ಲಾಭದಲ್ಲಿ ರಜನಿಕಾಂತ್, ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್‌ಗೆ ಕಾರುಗಳನ್ನು ಉಡುಗೊರೆ ಕೊಟ್ಟಿದ್ದರು. ಜೊತೆಗೆ ಲಾಭದಲ್ಲಿ ಕೊಂಚ ಪಾಲು ಕೊಟ್ಟು ಸೀಕ್ವೆಲ್ ಮಾಡಲು ಮಾತುಕತೆ ನಡೆಸಿದ್ದರು.

ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ 'ಜೈಲರ್'-2 ಸಿನಿಮಾ ಘೋಷಣೆ ಆಗಿತ್ತು. ಜಬರ್ದಸ್ತ್ ಪ್ರೋಮೊ ರಿಲೀಸ್ ಮಾಡಿ ಥ್ರಿಲ್ ಕೊಟ್ಟಿತ್ತು ಚಿತ್ರತಂಡ. ಚಿತ್ರಮಂದಿರಗಳಲ್ಲಿ ಸಿನಿಮಾ ಅನೌನ್ಸ್‌ಮೆಂಟ್ ಟೀಸರ್ ಪ್ರದರ್ಶನವಾಗಿತ್ತು. ಇನ್ನು 'ಜೈಲರ್'-2 ಚಿತ್ರದಲ್ಲಿ ನಟಿಸೋ ಬಗ್ಗೆ ಶಿವಣ್ಣ ಕೂಡ ಮಾತನಾಡಿದ್ದಾರೆ.

ಕೇರಳದಲ್ಲಿ 'ಜೈಲರ್'-2 ಚಿತ್ರದ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ನಡೆದಿತ್ತು. ರಜನಿಕಾಂತ್ ಜೊತೆ ರಮ್ಯಾಕೃಷ್ಣ ಕೂಡ ಭಾಗಿ ಆಗಿದ್ದರು. ಚಿತ್ರದಲ್ಲಿ ಆಕೆ ಜೈಲರ್ ಮುತ್ತುವೇಲ್ ಪಾಂಡಿಯನ್ ಮಡದಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಗಸ್ಟ್ 15ಕ್ಕೆ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ಮತ್ತೆ ಜೈಲರ್ ಆರ್ಭಟ ನೋಡಬಹುದು.

More from Filmibeat

English summary
Buzz: Telugu Actor Balakrishna has asked for a remuneration of 50Crs for Jailer- 2 and sun pictures agreed for it;
Read more about: jailer balakrishna rajinikanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X