ಚಿರಂಜೀವಿ ಅಭಿಮಾನಿ ಸಾವು: ಕುಟುಂಬದ ಸಹಾಯಕ್ಕೆ ನಿಂತ ರಾಮ್ ಚರಣ್

ಮೆಗಾಸ್ಟಾರ್ ಚಿರಂಜೀವಿ ಸಂಘದ ಅಧ್ಯಕ್ಷರಾಗಿದ್ದ ನೂರ್ ಮೊಹಮ್ಮದ್ ಹೃದಯಾಘಾತದಿಂದ (ಡಿಸೆಂಬರ್ 8) ಕೊನೆಯುಸಿರೆಳೆದಿದ್ದರು. ಹಲವು ವರ್ಷಗಳಿಂದ ಚಿರು ಕುಟುಂಬಕ್ಕೆ ಆಪ್ತರಾಗಿದ್ದ ನೂರ್ (54 ವರ್ಷ) ಮೆಗಾಸ್ಟಾರ್ ಕುಟುಂಬದಲ್ಲಿ ಒಬ್ಬರಾಗಿದ್ದರು.

ಹೈದರಾಬಾದ್ ವಲಯದ ಅಧ್ಯಕ್ಷರಾಗಿದ್ದ ನೂರ್ ಭಾಯ್ ಸಾವಿನ ಸುದ್ದಿ ಕೇಳಿ ಆತಂಕಕ್ಕೆ ಒಳಗಾದ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಅವರು ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ನೂರ್ ಅವರ ಸ್ವಗೃಹಕ್ಕೆ ಭೇಟಿದ ಚಿರಂಜೀವಿ, ಅಲ್ಲು ಅರ್ಜುನ್ ಅಂತ್ಯಕ್ರಿಯೆಯಲ್ಲಿ ಕೂಡ ಭಾಗಿಯಾಗಿದ್ದರು.

ಇನ್ನು ನೂರ್ ಮೊಹಮ್ಮದ್ ಅವರ ಕುಟುಂಬಕ್ಕೆ ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಧನಸಹಾಯ ಮಾಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ರಾಮ್ ಚರಣ್ 10 ಲಕ್ಷ ರೂಪಾಯಿ ನೀಡಿದ್ದಾರೆ ಎನ್ನಲಾಗಿದೆ.

Telugu Actor Chiranjeevi Fan Died

ಇದಕ್ಕೂ ಮುಂಚೆ ನೂರ್ ಮೊಹಮ್ಮದ್ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ, ರಾಮ್ ಚರಣ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಅಲ್ಲು ಅರ್ಜುನ್ ಅವರು ಕೂಡ ನೂರ್ ಭಾಯ್ ಅವರ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

More from Filmibeat

English summary
Telugu Megastar Chiranjeevi fans association president noor muhammad was died.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X