ಮತ್ತೆ ರಾಜಕೀಯರಂಗಕ್ಕೆ ಚಿರು? ಸಹೋದರನನ್ನು ಬಿಟ್ಟು ಆ ಪಕ್ಷ ಸೇರ್ತಾರಾ ಮೆಗಾಸ್ಟಾರ್?
ಟಾಲಿವುಡ್ ನಟ ಮೆಗಾ ಸ್ಟಾರ್ ಚಿರಂಜೀವಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿತ್ತು. ಗಣರಾಜ್ಯೋತ್ಸವ ಸಂಭ್ರಮದಲ್ಲಿ ದೇಶದ 2ನೇ ಅತ್ಯುನ್ನತ ಪ್ರಶಸ್ತಿ ಗೌರವ ಪುರಸ್ಕಾರಕ್ಕೆ ಚಿರು ಭಾಜನರಾಗಿದ್ದರು.
ಇತ್ತೀಚಿನ ದಿನಗಳಲ್ಲಿ ನಟ ಚಿರಂಜೀವಿಗೆ ಬಿಜೆಪಿ ನಾಯಕರು ಬಹಳ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಎಪಿಯಲ್ಲಿ ಅಲ್ಲೂರಿ ಸೀತಾರಾಮರಾಜ್ ಪ್ರತಿಮೆ ಸ್ಥಾಪನೆ ಸಭೆಯಲ್ಲಿ ಚಿರುಗೆ ಪ್ರಧಾನಿ ಮೋದಿ ಆದ್ಯತೆ ನೀಡಿದ್ದರು. ಇಂಡಿಯನ್ ಫಿಲ್ಮ್ ಪರ್ಸನಾಲಿಲಿಟಿ ಆಫ್ ದ ಇಯರ್ 2022 ಎಂದು ಘೋಷಣೆ ಮಾಡಲಾಗಿತ್ತು. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಇದೆಲ್ಲದರ ಬೆನ್ನಲ್ಲೇ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಚಿರಂಜೀವಿಗೆ ಪ್ರಧಾಣಿ ಮೋದಿ ಅವರು ಪ್ಲ್ಯಾನ್ ಪ್ಲಾನ್ ಪ್ರಕಾರ ಆದ್ಯತೆ ನೀಡುತ್ತಿದ್ದಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಚಿರಂಜೀವಿ 2012-2018ರ ಅವಧಿಯಲ್ಲಿ ಆಂಧ್ರಪ್ರದೇಶದಿಂದ ರಾಜ್ಯಸಭಾ ಸಂಸದರಾಗಿದ್ದರು. 2012-2014ರ ನಡುವೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಉತ್ತರ ಪ್ರದೇಶದಿಂದ ಚಿರುಗೆ ರಾಜ್ಯಸಭಾ ಸದಸ್ಯ ಟಿಕೆಟ್ ನೀಡಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ.
ಬಿಜೆಪಿ ಆಂಧ್ರಪ್ರದೇಶದಲ್ಲಿ ರಾಜಕೀಯವಾಗಿ ಬಲಗೊಳ್ಳಲು ಮುಂದಾಗಿದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನ ನಡೀತಿದ್ದು ಇದರ ಭಾಗವಾಗಿಯೇ ಕಾಪು ಸಮುದಾಯಕ್ಕೆ ಸೇರಿದ ಚಿರಂಜೀವಿಯವರನ್ನು ಸೆಳೆದು ಆ ಸಮುದಾಯದ ಮೆಚ್ಚುಗೆ ಪಡೆಯಲು ಮುಂದಾಗಿದೆ. ಅದೇರ ರೀತಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಟಿಡಿಪಿ ಮೈತ್ರಿ ಬಿಟ್ಟು ತಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ತಂತ್ರಗಳನ್ನು ರೂಪಿಸಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೂ ಮುನ್ನ ರಾಷ್ಟ್ರಪತಿ ಕೋಟಾದಲ್ಲೇ ಚಿರಂಜೀವಿ ಅವರನ್ನು ಸಂಸತ್ತಿಗೆ ನಾಮಿನೇಟ್ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ರಾಜ್ಯ ಸಭೆಗೆ ನಾಮಿನೇಟ್ ಮಾಡಿತ್ತು ಎನ್ನುವ ಚರ್ಚೆ ನಡೀತಿದೆ. ಉತ್ತರ ಪ್ರದೇಶದಲ್ಲಿ ಖಾಲಿ ಇರುವ 10 ಸ್ಥಾನಗಳನ್ನು ಗೆಲ್ಲುವ ಶಕ್ತಿ ಬಿಜೆಪಿಗಿದೆ. ಅದೇ ಕಾರಣಕ್ಕೆ ಚಿರಂಜೀವಿನ ನಾಮಿನೇಟ್ ಮಾಡುವ ಲೆಕ್ಕಾಚಾರ ನಡೀತಿದೆ ಎನ್ನುವ ವಾದವೂ ಇದೆ.

ಶೀಘ್ರದಲ್ಲೇ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಕೇಂದ್ರ ಸಂಪುಟದಲ್ಲಿ ಚಿರಂಜೀವಿ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೀತಿದೆಯಂತೆ. ರಾಜಕೀಯರಂಗ ಪ್ರವೇಶಿಸಿದ್ದ ಚಿರು 10 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇದ್ದರು. 'ಖೈದಿ ನಂಬರ್ 150' ಸಿನಿಮಾ ಮಾಡಿ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದರು.
ಪಾಲಿಟಿಕ್ಸ್ ಸಾಕು, ಸಿನಿಮಾ ಮಾತ್ರ ಮಾಡ್ತೀನಿ ಎಂದಿದ್ದ ಚಿರು ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದರು. ಪಾಲಿಟಿಕ್ಸ್ ಕಡೆ ಮುಖ ಮಾಡಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಕೂಡ ನೀಡಿಲ್ಲ. ಹಾಗಿದ್ದರೆ ಚಿರು ಈಗ ಕಾಂಗ್ರೆಸ್‌ಗೆ ಪಕ್ಷಕೆ ರಾಜಿನಾಮೆ ನೀಡಿ ಬಿಜೆಪಿ ಸೇರುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಚಿರು ಸೋಲು ಗೆಲುವಿನ ಆಟ ಮುಂದುವರೆದಿದೆ. ಕಳೆದ ವರ್ಷ 'ವಾಲ್ತೇರು ವೀರಯ್ಯ' ಹಿಟ್ ಆಗಿತ್ತು. ಬಳಿಕ ಬಂದ 'ಭೋಳಾ ಶಂಕರ್' ಸಿನಿಮಾ ದಯನೀಯವಾಗಿ ಮುಗ್ಗರಿಸಿತ್ತು. ಸದ್ಯ 'ವಿಶ್ವಂಭರ' ಎನ್ನುವ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಮೆಗಾಸ್ಟಾರ್ ಜೊತೆ ಸಿನಿಮಾ ಸಿನಿಮಾ ಮಾಡಲು ಕಾಯತ್ತಿದ್ದಾರೆ. ಆದರೆ ಚಿರು ಮಾತ್ರ ಅಳೆದು ತೂಗಿ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ಭೋಳಾ ಶಂಕರ್' ಸೋಲಿನ ಬಳಿಕ ಎಚ್ಚೆತ್ತುಕೊಂಡಿದ್ದಾರೆ.


Click it and Unblock the Notifications










