For Quick Alerts
  ALLOW NOTIFICATIONS  
  For Daily Alerts

  Chiranjeevi Birthday: ಮೆಗಾಸ್ಟಾರ್ ಬಿರುದು ಕೊಟ್ಟಿದ್ಯಾರು? ಚಿರು ಒಟ್ಟು ಆಸ್ತಿ ಮೌಲ್ಯ ಎಷ್ಟು?

  |

  ಮೆಗಾಸ್ಟಾರ್ ಅಂದರೆ ತೆಲುಗು ಚಿತ್ರರಂಗದಲ್ಲಿ ಒಂದು ಬ್ರ್ಯಾಂಡ್. 70ರ ದಶಕದ ಅಂತ್ಯದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿರಂಜೀವಿ ಇವತ್ತಿಗೂ ಟಾಲಿವುಡ್‌ನಲ್ಲಿ ನಂಬರ್ ಒನ್ ಹೀರೊ ಆಗಿ ಮಿಂಚುತ್ತಿದ್ದಾರೆ. 'ಸ್ವಯಂ ಕೃಷಿ'ಯಿಂದ ಒಂದೊಂದೇ ಮೆಟ್ಟಿಲು ಏರಿ ಮುಂದೆ ಸೂಪರ್ ಸ್ಟಾರ್ ಆಗಿ ಬೆಳೆದರು. ತಮ್ಮದೇ ವಿಭಿನ್ನ ಅಭಿನಯ ಹಾಗೂ ಡ್ಯಾನ್ಸ್ ಮೂಲಕ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಗಳಿಸಿದ್ದಾರೆ.

  ಚಿರಂಜೀವಿ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದಾರೆ. ಚಿರು ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್ ಹಿಟ್ 'ಘರಾನಾ ಮೊಗುಡು' ಚಿತ್ರವನ್ನು ರೀ ರಿಲೀಸ್ ಮಾಡಿದ್ದು, ಅಭಿಮಾನಿಗಳು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. 1988ರವರೆಗೂ ಚಿರಂಜೀವಿ ಹೆಸರಿನ ಜೊತೆ ಸುಪ್ರೀಂ ಹೀರೊ ಅನ್ನುವ ಬಿರುದು ಸೇರಿಕೊಂಡಿತ್ತು. ಆ ನಂತರ ಮೆಗಾಸ್ಟಾರ್ ಅನ್ನುವ ಬಿರುದು ಸಿಕ್ಕಿತ್ತು. ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಟಾಲಿವುಡ್‌ನಲ್ಲಿ ಎನ್‌ಟಿಆರ್‌ ನಂತರ ಬಹಳ ದೊಡ್ಡ ಸ್ಟಾರ್ ಆಗಿ ಚಿರು ಬೆಳೆದು ಬಂದರು. ಅದೆಷ್ಟೋ ಕಲಾವಿದರಿಗೆ ಚಿರಂಜೀವಿ ರೋಲ್ ಮಾಡೆಲ್ ಆಗಿದ್ದಾರೆ. 90ರ ದಶಕದಲ್ಲೇ ಸಂಭಾವನೆ ಲೆಕ್ಕಾಚಾರದಲ್ಲಿ ಬಿಗ್ ಬಿ ಅಮಿತಾಬ್‌ ಬಚ್ಚನ್‌ನ ಚಿರು ಮೀರಿಸಿದ್ದರು.

  ಚಿರಂಜೀವಿಗೆ ಫಸ್ಟ್ ಲವ್ ಆಗಿದ್ದು 7ನೇ ತರಗತಿಯಲ್ಲಿ: ಮೆಗಾಸ್ಟಾರ್ ರಿವೀಲ್ ಮಾಡಿದ್ದೇನು?ಚಿರಂಜೀವಿಗೆ ಫಸ್ಟ್ ಲವ್ ಆಗಿದ್ದು 7ನೇ ತರಗತಿಯಲ್ಲಿ: ಮೆಗಾಸ್ಟಾರ್ ರಿವೀಲ್ ಮಾಡಿದ್ದೇನು?

  'ಸ್ಟಾಲಿನ್' ಸಿನಿಮಾ ನಂತರ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ರಾಜಕೀಯರಂಗ ಪ್ರವೇಶಿಸಿದ್ದರು. ಆದರೆ ಹೊಸ ಪಕ್ಷ ಕಟ್ಟಿ ಚುನಾವಣೆ ಎದುರಿಸಿ ಸೋಲುಂಡರು. ಪಾಲಿಟಿಕ್ಸ್‌ನಲ್ಲಿ ಮೆಗಾಸ್ಟಾರ್ ಅಟ್ಟರ್‌ ಫ್ಲಾಪ್ ಅಂತಲೇ ಹೇಳಬೇಕು. ರಾಜಕೀಯದ ಸಹವಾಸವೇ ಸಾಕು ಎಂದು ಚಿರಂಜೀವಿ 10 ವರ್ಷಗಳ ನಂತರ ಮತ್ತೆ ಬಣ್ಣದಲೋಕಕ್ಕೆ ವಾಪಸ್ ಆದರು. 'ಖೈದಿ ನಂಬರ್ 150' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ ಮೆಗಾಸ್ಟಾರ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಯಸ್ಸು 60 ದಾಟಿದರೂ ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಯುವ ನಟರಿಗೆ ಟಫ್ ಕಾಂಪಿಟೇಷನ್ ಕೊಡುತ್ತಲೇ ಇದ್ದಾರೆ.

   ಚಿರುಗೆ ಮೆಗಾಸ್ಟಾರ್ ಬಿರುದು ಕೊಟ್ಟಿದ್ಯಾರು?

  ಚಿರುಗೆ ಮೆಗಾಸ್ಟಾರ್ ಬಿರುದು ಕೊಟ್ಟಿದ್ಯಾರು?

  ಮೆಗಾಸ್ಟಾರ್ ಬಿರುದು ಸಿಗುವುದಕ್ಕಿಂತ ಮೊದಲು ಚಿರುಗೆ 'ಸುಪ್ರೀಂ ಹೀರೊ' ಅನ್ನುವ ಬಿರುದು ಸಿಕ್ಕಿತ್ತು. ಟಾಲಿವುಡ್‌ನಲ್ಲಿ ಎನ್‌ಟಿಆರ್‌, ಕೃಷ್ಣ ಸೂಪರ್ ಸ್ಟಾರ್‌ಗಳಾಗಿದ್ದ ಸಮಯದಲ್ಲಿ ನಿರ್ಮಾಪಕ ಕೆ. ಎಸ್ ರಾಮಾರಾವ್ ಜೊತೆ ಚಿರಂಜೀವಿ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೊದಲು ಬಂದ ಚಿತ್ರ 'ಅಭಿಲಾಷ'. ಆ ನಂತರ ಇದೇ ಜೋಡಿ 'ಚಾಲೆಂಜ್' ಹಾಗೂ 'ರಾಕ್ಷಸುಡು' ಸಿನಿಮಾಗಳನ್ನು ಮಾಡಿದರು. ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಇವರಿಬ್ಬರು ಸೇರಿ ಮಾಡಿದ ನಾಲ್ಕನೇ ಸಿನಿಮಾ 'ಮರಣ ಮೃದಗಂ'. ಈ ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ನಿರ್ಮಾಪಕರು ಮೊದಲ ಬಾರಿಗೆ ಮೆಗಾಸ್ಟಾರ್ ಚಿರಂಜೀವಿ ಎಂದು ಹಾಕಿಸಿದ್ದರು. ಟೈಟಲ್ ಕಾರ್ಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಎಂದು ನೋಡಿದ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಅಲ್ಲಿಂದ ಮುಂದೆ ಈ ಬಿರುದು ಕಂಟಿನ್ಯೂ ಆಯಿತು. ಅದಕ್ಕೆ ತಕ್ಕಂತೆ ಚಿರು ಮೆಗಾಸ್ಟಾರ್ ಆಗಿಯೇ ಮಿಂಚುತ್ತಾ ಬಂದರು.

  'ಆಚಾರ್ಯ' ಹೀನಾಯ ಸೋಲು: ಕೊನೆಗೂ ಮೌನ ಮುರಿದ ಚಿರಂಜೀವಿ'ಆಚಾರ್ಯ' ಹೀನಾಯ ಸೋಲು: ಕೊನೆಗೂ ಮೌನ ಮುರಿದ ಚಿರಂಜೀವಿ

   90ರ ದಶಕದಲ್ಲೇ ಕೋಟಿ ಸಂಭಾವನೆ

  90ರ ದಶಕದಲ್ಲೇ ಕೋಟಿ ಸಂಭಾವನೆ

  ಒಂದ್ಕಾಲದಲ್ಲಿ ಚಿರಂಜೀವಿ ಕ್ರೇಜ್ ಹೇಗಿತ್ತು ಅಂದರೆ ನಿರ್ಮಾಪಕರು ಕೇಳಿದಷ್ಟು ಸಂಭಾವನೆ ಕೊಡುತ್ತಿದ್ದಾರೆ. ತಮ್ಮ ಡ್ಯಾನ್ಸ್, ವಿಭಿನ್ನ ಮ್ಯಾನರಿಸಂ, ಆಕ್ಷನ್, ಡೈಲಾಗ್ ಡೆಲಿವರಿಯಿಂದ ಚಿರು ಬಾಕ್ಸಾಫೀಸ್ ಶೇಕ್ ಮಾಡುತ್ತಿದ್ದರು. 1992ರಲ್ಲಿ ಕೆ. ವಿಶ್ವನಾಥ್ ನಿರ್ದೇಶನದ 'ಆಪತ್ಬಾಂದವುಡು' ಚಿತ್ರಕ್ಕೆ ಚಿರು 1.25 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು. ಅವತ್ತಿನ ಕಾಲಕ್ಕೆ ಅದೇ ಅತಿ ದೊಡ್ಡ ಸಂಭಾವನೆ. ಆ ಸಮಯಕ್ಕೆ ಅಮಿತಾಬ್ ಬಚ್ಚನ್ 1 ಕೋಟಿ ರೂ. ಸಂಭಾವನೆ ಅಷ್ಟೇ ಪಡೆಯುತ್ತಿದ್ದರು.

   ಮೆಗಾಸ್ಟಾರ್ ಆಸ್ತಿ ಮೌಲ್ಯ 1800 ಕೋಟಿ ರೂ.

  ಮೆಗಾಸ್ಟಾರ್ ಆಸ್ತಿ ಮೌಲ್ಯ 1800 ಕೋಟಿ ರೂ.

  ಅಭಿಮಾನಿಗಳ ನೆಚ್ಚಿನ ಅನ್ನಯ್ಯ ಚಿರಂಜೀವಿ ಬಳಿ 1800 ಕೋಟಿ ರೂ.ಗೂ ಹೆಚ್ಚು ಆಸ್ತಿ ಇರುವ ಅಂದಾಜಿದೆ. 1000 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದರೆ, ಐಷಾರಾಮಿ ಕಾರುಗಳು, ಉಳಿದ ಆಕ್ಸಸರೀಸ್ ಎಲ್ಲಾ ಸೇರಿದರೆ 200- 300 ಕೋಟಿ ಚಿರಾಸ್ತಿ ಇದೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚೆಗೆ ಚಿರಂಜೀವಿ ಹೈದರಾಬಾದ್‌ ಫಿಲ್ಮ್‌ನಗರ್‌ ಮುಖ್ಯರಸ್ತೆಯಲ್ಲಿ ತಮ್ಮ 3 ಸಾವಿರ ಚದರ ಗಜಗಳ ಜಮೀನನ್ನು ಮಾರಾಟ ಮಾಡಿದ್ದಾಗಿ ಸುದ್ದಿ ಹರಿದಾಡ್ತಿತ್ತು.

   ಚಿರಂಜೀವಿ ಸಂಭಾವನೆ 30 ಕೋಟಿ ರೂ.

  ಚಿರಂಜೀವಿ ಸಂಭಾವನೆ 30 ಕೋಟಿ ರೂ.

  ಪಾಲಿಟಿಕ್ಸ್‌ನಿಂದ ವಾಪಸ್ ಬಂದಮೇಲೆ ಕೂಡ ಸೂಪರ್ ಹಿಟ್ ಸಿನಿಮಾಗಳ ಮೂಲಕ ಚಿರಂಜೀವಿ ದರ್ಬಾರ್ ನಡೆಸುತ್ತಿದ್ದಾರೆ. ಚಿರು ಕಾಲ್‌ಶೀಟ್‌ಗಾಗಿ ನಿರ್ಮಾಪಕರು, ನಿರ್ದೇಶಕರು ಕ್ಯೂ ನಿಂತಿದ್ದಾರೆ. ಡಿಮ್ಯಾಂಡ್‌ಗೆ ತಕ್ಕಂತೆ ಚಿರಂಜೀವಿ 25 ರಿಂದ 30 ಕೋಟಿ ರೂ. ಸಂಭಾವನೆ ಪಡಿತ್ತಾರೆ ಅನ್ನಲಾಗುತ್ತಿದೆ. ಚಿರು ನಟನೆಯ 'ಗಾಡ್ ಫಾದರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ಭೋಳಾಶಂಕರ್' ಸೇರಿದಂತೆ ಮತ್ತೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ಸಾಮಾಜಿಕ ಕಾರ್ಯಗಳಲ್ಲೂ ಚಿರು ಮುಂದು

  ಸಾಮಾಜಿಕ ಕಾರ್ಯಗಳಲ್ಲೂ ಚಿರು ಮುಂದು

  ದಶಕಗಳ ಹಿಂದೆಯೇ ಚಿರಂಜೀವಿ ಬ್ಲಡ್ ಬ್ಯಾಂಕ್ ಸ್ಥಾಪಿಸಿದ ಮೆಗಾಸ್ಟಾರ್ ಆ ಮೂಲಕ ರಕ್ತದಾನವನ್ನು ಪ್ರೇರೇಪಿಸುತ್ತಾ ಬರುತ್ತಿದ್ದಾರೆ. ಪ್ರತಿವರ್ಷ ಸಾವಿರಾರು ಜನ ರಕ್ತದಾನ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಬಡ ರೋಗಿಗಳಿಗೆ ಸಹಾಯ ಮಾಡುತ್ತಿರುವುದಲ್ಲೇ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಬಡ ಸಿನಿಕಾರ್ಮಿಕರಿಗೆ ಇನ್ನೊಂದು ವರ್ಷದಲ್ಲಿ 10 ಬೆಡ್‌ಗಳ ಆಸ್ಪತ್ರೆ ಕಟ್ಟಿಸುವುದಾಗಿ ಮೊನ್ನೆ ಭರವಸೆ ನೀಡಿದ್ದಾರೆ. ತಮ್ಮ ತಂದೆ ಕೋನಿದೇಲ ವೆಂಕಟರಾವ್ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದ್ದಾರೆ.

  English summary
  Telugu Actor Chiranjeevi Net Worth And Megastar Title Secret. Know More
  Tuesday, August 23, 2022, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X