ತಲೆ ಬೋಳಿಸಿಕೊಂಡು ಸನ್ಯಾಸಿಯಾದ್ರಾ ಮೆಗಾಸ್ಟಾರ್ ಚಿರಂಜೀವಿ?
ಟಾಲಿವುಡ್ ಸ್ಟಾರ್ ನಟ ಚಿರಂಜೀವಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಲಾಕ್ ಡೌನ್ ನಲ್ಲಿ ಸಾಕಷ್ಟು ಮಂದಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕರು ಉದ್ದ ಗಡ್ಡ, ಕೂದಲು ಬಿಟ್ಟಿರುವ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಆದರೆ ನಟ ಚಿರಂಜೀವಿ ಸಂಪೂರ್ಣ ಬೋಳು ತಲೆ ಅವತಾರದಲ್ಲಿ ದರ್ಶನ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಬೋಳುತಲೆ ಚಿರಂಜೀವಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 65 ವರ್ಷದ ನಟ ಚಿರಂಜೀವಿ ದಿಢೀರ್ ಲುಕ್ ಬದಲಾಯಿಸಿಕೊಂಡಿದ್ದೇಕೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಹೊಸ ಸಿನಿಮಾಗಾಗಿ ಗೆಟಪ್ ಬದಲಾಯಿಸಿಕೊಂಡ್ರಾ ಅಥವಾ ಬೇರೆ ಇನ್ನೇನಾದರೂ ಇದೆಯಾ ಎನ್ನುವುದನ್ನು ಚಿರಂಜೀವಿ ಬಹಿರಂಗಪಡಿಸಿಲ್ಲ. ಮುಂದೆ ಓದಿ...

'ನಾನು ಸನ್ಯಾಸಿ ರೀತಿ ಯೋಚಿಸಬಲ್ಲೆನೇ..'
ಕಪ್ಪು ಬಣ್ಣದ ಗಾಗಲ್ ಧರಿಸಿರುವ, ಬೋಳುತಲೆಯ ಹೊಸ ಲುಕ್ ನ ಫೋಟೋವನ್ನು ನಟ ಚಿರಂಜೀವಿ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ 'ಅರ್ಬನ್ ಮಾಂಕ್' ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಲ್ಲದೆ 'ನಾನು ಸನ್ಯಾಸಿ ರೀತಿ ಯೋಚಿಸಬಲ್ಲೆನೇ' ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಅಪ್ಪನ ಅವತಾರಕ್ಕೆ ಪುತ್ರನ ಪ್ರತಿಕ್ರಿಯೆ
ನಟ ಚಿರಂಜೀವಿ ಹೊಸ ಲುಕ್ ಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ತೆಲುಗು ಸೆಲೆಬ್ರಿಟಿಗಳು ಅಚ್ಚರಿ ಪಡುತ್ತಿದ್ದಾರೆ. ಮೆಗಾಸ್ಟಾರ್ ಫೋಟೋಗೆ ಮಗ ರಾಮ್ ಚರಣ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪಾ..ನಾನು ಏನು ನೋಡಿದೆ? ಎಂದು ಅಚ್ಚರಿಯ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕಲ್ಯಾಣ್ ದೇವ್, ನಾಗಬಾಬು ಸೇರಿದಂತೆ ಅನೇಕರು ಚಿರು ಹೊಸ ಸ್ಟೈಲ್ ಗೆ ಫಿದಾ ಆಗಿದ್ದಾರೆ.

'ಬಾಸ್ ಈಸ್ ಬ್ಯಾಕ್'
ಅಭಿಮಾನಿಗಳು 'ಬಾಸ್ ಈಸ್ ಬ್ಯಾಕ್' ಎಂದು ಹೇಳುತ್ತಿದ್ದಾರೆ. ಚಿರು ನಿಜಕ್ಕು ತಲೆ ಬೋಳಿಸಿಕೊಂಡಿದ್ದಾರಾ ಅಥವಾ ಪ್ರಾಸ್ತೆಟಿಕ್ ಮೇಕಪ್ ಸಹಾಯದಿಂದ ಈ ಗೆಟಪ್ ಮಾಡಿದ್ದಾರಾ? ಇದ್ಯಾವ ಪ್ರಶ್ನೆಗಳಿಗೂ ಚಿರು ಉತ್ತರ ನೀಡಿಲ್ಲ. ಕೆಲವರು ಮುಂದಿನ ಸಿನಿಮಾದ ಲುಕ್ ಎಂದು ಹೇಳುತ್ತಿದ್ದಾರೆ. ಆದರೆ ಎಲ್ಲಾ ಪ್ರಶ್ನೆ, ಕುತೂಹಲಗಳಿಗೆ ಚಿರಂಜೀವಿಯೇ ಉತ್ತರಿಸಬೇಕು.
Recommended Video

ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಬ್ಯುಸಿ
ಚಿರಂಜೀವಿ ಸದ್ಯ 'ಆಚಾರ್ಯ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಗೂ ಮೊದಲೇ ಚಿತ್ರೀಕರಣ ಪ್ರಾರಂಭಿಸಿದ್ದ ಸಿನಿಮಾತಂಡ ಲಾಕ್ ಡೌನ್ ಬಳಿಕ ಮತ್ತೆ ಶೂಟಿಂಗ್ ಗೆ ತೆರಳಲಿಲ್ಲ. ಆಚಾರ್ಯ ಸಿನಿಮಾ ಪುತ್ರ ರಾಮ್ ಚರಣ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಇದಾದ ಬಳಿಕ ಮಲಯಾಳಂ ಸೂಪರ್ ಹಿಟ್ 'ಲೂಸಿಫರ್' ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮಿಳಿನ 'ವೇದಲಂ' ಸಿನಿಮಾದ ರಿಮೇಕ್ ಸಹ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ 'ಆಚಾರ್ಯ' ಬಳಿಕ ಮುಂದಿನ ಸಿನಿಮಾದ ಬಗ್ಗೆ ಚಿರಂಜೀವಿ ಅಧಿಕೃತವಾಗಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ.


Click it and Unblock the Notifications











