ದೇವನಹಳ್ಳಿಯಲ್ಲಿರುವ ಚಿರಂಜೀವಿ ಫಾರ್ಮ್‌ಹೌಸ್ ವಿಶೇಷತೆಗಳೇನು? ಎಷ್ಟು ಎಕರೆ ಇದೆ? ಬೆಲೆ ಎಷ್ಟು?

ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಸಾವಿರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಕೆಲ ವರದಿಗಳ ಪ್ರಕಾರ ಚಿರು ಬಳಿ 1500 ಕೋಟಿ ರೂ.ಗೂ ಅಧಿಕ ಮೌಲ್ಯದ ಚರಾಸ್ಥಿ, ಸ್ಥಿರಾಸ್ತಿ ಇದೆ. ಹೈದರಾಬಾದ್‌ನಲ್ಲಿ ಐಷಾರಾಮಿ ಬಂಗಲೆ, ಹತ್ತಾರು ಎಕರೆ ಜಮೀನು ಮೆಗಾಸ್ಟಾರ್ ಹೊಂದಿದ್ದಾರೆ.

ಹೈದರಾಬಾದ್ ಮಾತ್ರವಲ್ಲದೇ ಚಿರಂಜೀವಿ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಕೂಡ ಭೂಮಿಯ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ಒಂದ್ಕಾಲದಲ್ಲಿ ಚಿರುಗೆ ಕಾರ್‌ಗಳ ಕ್ರೇಜ್‌ ಇತ್ತಂತೆ. ಯಾವುದೇ ಹೊಸ ಕಾರ್ ಬಂದರೂ ಖರೀದಿಸಬೇಕು ಎಂದುಕೊಳ್ಳುತ್ತಿದ್ದರಂತೆ. ಒಮ್ಮೆ ಖ್ಯಾತ ನಟ ಎನ್‌ಟಿಆರ್, ತಗಡಿನ ಕಾರಿನ ಮೇಲೆ ಹೂಡಿಕೆ ಮಾಡುವ ಬದಲು ಭೂಮಿ ಮೇಲೆ ಹಣ ತೊಡಗಿಸುವಂತೆ ಸಲಹೆ ನೀಡಿದ್ದರಂತೆ. ಅದನ್ನು ಮೆಗಾಸ್ಟಾರ್ ಪಾಲಿಸಿದರಂತೆ.

Telugu Actor Chiranjeevi s Bengaluru prakruthi farm house price will leave you stunned

ಎನ್‌ಟಿಆರ್ ಸಲಹೆ ಮೇರೆಗೆ ಸಾಕಷ್ಟು ಕಡೆಗಳಲ್ಲಿ ಜಮೀನು ಖರೀದಿಸಿದೆ. ಅದರ ಬೆಲೆ ಬಳಿಕ ಹಲವು ಪಟ್ಟುಗಳಾಯಿತು. ಎನ್‌ಟಿಆರ್ ಮಾತು ಕೇಳಿ ನಾನು ಒಳ್ಳೆಯ ಕೆಲಸ ಮಾಡಿದೆ ಎಂದು ಚಿರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇನ್ನು ಹಲವು ವರ್ಷಗಳ ಹಿಂದೆ ಬೆಂಗಳೂರಿನ ದೇವನ ಹಳ್ಳಿ ಬಳಿ ಚಿರು 12 ಎಕರೆ ಜಾಗ ಖರೀದಿಸಿದ್ದರು. ಅಲ್ಲಿ ಫಾರ್ಮ್‌ಹೌಸ್‌ ನಿರ್ಮಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇಂತಹ ಸಮಯದಲ್ಲಿ ನೀರು ಸಂರಕ್ಷಣೆಗೆ ಏನು ಮಾಡಬೇಕು, ಎಂದು ಚಿರು ಸಲಹೆ ನೀಡಿದ್ದಾರೆ. ತಮ್ಮ ಫಾರ್ಮ್‌ಹೌಸ್‌ನಲ್ಲಿ ಹೇಗೆ ನೀರನ್ನು ಸಂರಕ್ಷಣೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಂಡು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ಚಿರಂಜೀವಿ ಸಲಹೆಗಳ ಬಗ್ಗೆ ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಎಲ್ಲರೂ ಇದನ್ನು ಅನುಸರಿಸಬೇಕು. ನೀರನ್ನು ಸಂರಕ್ಷಿಸಿ ಬಳಸಬೇಕು ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ ತಾರೆಯರು ಕೂಡ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಸ್ಟಾರ್ ನಟರು ಹೇಳಿದರೆ ಜನರಲ್ಲಿ ಅರಿವು ಮೂಡುತ್ತದೆ ಎನ್ನುವ ವಾದವೂ ಇದೆ. ಇನ್ನು ಚಿರಂಜೀವಿ ಅವರ ಫಾರ್ಮ್‌ಹೌಸ್ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲವಿದೆ. ಆ ಫಾರ್ಮ್‌ಹೌಸ್‌ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ.

Telugu Actor Chiranjeevi s Bengaluru prakruthi farm house price will leave you stunned

ಸುಮಾರು 40 ಎಕರೆಯ ವಿಸ್ತೀರ್ಣದ ದೊಡ್ಡ ಜಾಗ ಇದ್ದು ಚಿರು ಸ್ನೇಹಿತರು ಕೂಡ ಅಲ್ಲಿ ಜಾಗ ಖರೀದಿಸಿದ್ದಾರೆ. ಅದರಲ್ಲಿ ಚಿರಂಜೀವಿ ಅವರದ್ದು 12 ಎಕರೆಯ ಫಾರ್ಮ್‌ಹೌಸ್ ಇದೆ. ಹಸಿರನ್ನೇ ಹೊದ್ದು ಮಲಗಿದಂತೆ ಕಾಣುತ್ತದೆ. ನಡುವೆ ಒಂದು ಹಳೇ ಶೈಲಿಯ ಮನೆಯೂ ಇದೆ. ವಾಕ್‌ ಪಾತ್, ಸಣ್ಣ ಸಣ್ಣ ನೀರಿನ ಕೊಳಗಳು ಇವೆ. ಎಲ್ಲಾ ಸವಲತ್ತುಗಳು ಅಲ್ಲಿದ್ದು ಒಂದು ಅದ್ಧೂರಿ ಮದುವೆ ಮಾಡಲು ಬೇಕಾಗುವಷ್ಟು ದೊಡ್ಡದಾಗಿದೆ. ಚಿರಂಜೀವಿ ಆಗಾಗ್ಗೆ ಈ ಫಾರ್ಮ್‌ಹೌಸ್‌ಗೆ ಬರುತ್ತಿರುತ್ತಾರೆ. ಕೆಲವೊಮ್ಮೆ ಮೆಗಾ ಫ್ಯಾಮಿಲಿ ಇಲ್ಲೇ ಹಬ್ಬಗಳನ್ನು ಆಚರಿಸುತ್ತದೆ.

ಚಿರು ತಮ್ಮ ಮಗಳು ಶ್ರೀಜ 2ನೇ ಮದುವೆಯನ್ನು ಇದೇ ಪ್ರಕೃತಿ ಫಾರ್ಮ್‌ಹೌಸ್‌ನಲ್ಲಿ ನೆರವೇರಿಸಿದ್ದರು. ಅದಕ್ಕೂ ಮುನ್ನ ರಾಜಸ್ಥಾನದಲ್ಲಿ ಮದುವೆಗೆ ತಯಾರಿ ನಡೆಸಿದ್ದರು. ಕೊನೆಗೆ ಫಾರ್ಮ್‌ಹೌಸ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಇನ್ನು ಇತ್ತೀಚೆಗೆ ಸಂಕ್ರಾಂತಿ ಹಬ್ಬವನ್ನು ಮೆಗಾ ಫ್ಯಾಮಿಲಿ ಇಲ್ಲೇ ಆಚರಿಸಿತ್ತು. ರಾಮ್‌ಚರಣ್, ಅಲ್ಲು ಅರ್ಜುನ್, ಅಲ್ಲು ಅರವಿಂದ್ ಸೇರಿದಂತೆ ಹಲವರು ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋವನ್ನು ಚಿರು ಹಂಚಿಕೊಂಡಿದ್ದರು.

ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣ ಸ್ಥಾಪನೆಯಾದ ಬಳಿಕ ಸುತ್ತಾಮುತ್ತಾ ಭೂಮಿಯ ಬೆಲೆ ಗಗನಕ್ಕೇರಿದೆ. ಚಿರಂಜೀವಿ ಒಡೆತನದ ಐಷಾರಾಮಿ ಫಾರ್ಮ್‌ಹೌಸ್‌ ಕೂಡ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಸದ್ಯ ಅಲ್ಲಿ ಎಕರೆ ಭೂಮಿ ದರ 3 ಕೋಟಿ ರೂ. ಎನ್ನಲಾಗುತ್ತಿದೆ. ಆ ಲೆಕ್ಕದಲ್ಲಿ ಚಿರಂಜೀವಿ ಫಾರ್ಮ್‌ಹೌಸ್‌ ಬೆಲೆ 35 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗುತ್ತಿದೆ.

More from Filmibeat

English summary
Chiranjeevi's Bengaluru prakruthi farm house inside pictures, price and highlights;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X