ಮಂಚದ ಕೆಳಗೆ ಇಬ್ಬರು.. ಮಂಚದ ಮೇಲೆ ನಿರ್ಮಾಪಕನ ಜೊತೆ ನಟಿಯ ಸರಸ ಸಲ್ಲಾಪ; ಕಾಸ್ಟಿಂಗ್ ಕೌಚ್ ಕಹಿಸತ್ಯ
ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಎನ್ನುವ ಹೀನ ಸಂಸ್ಕೃತಿಯಿದೆ ಎಂದು ಆಗಾಗ್ಗೆ ನಟಿಯರು ಹೇಳುವುದನ್ನು ಕೇಳಿದ್ದೇವೆ. ಕೆಲವರು ಬಹಿರಂಗವಾಗಿ ಆರೋಪ ಮಾಡಿ ವಿವಾದ ಭುಗಿಲೆದ್ದಿರುವುದು ಇದೆ. ಮೀಟು ಅಭಿಯಾನದ ಅಡಿ ಸಾಕಷ್ಟು ನಟಿಯರು ಚಿತ್ರರಂಗದಲ್ಲಿ ತಮಗಾಗಿದ್ದ ಕಹಿ ಅನುಭವ ಬಿಚ್ಚಿಟ್ಟಿದ್ದರು. ಕೆಲ ನಟರು ಕೂಡ ತಮಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿರುವರನ್ನು ಬಹಿರಂಗ ಪಡಿಸಿದ್ದಾರೆ.
ಕಾಸ್ಟಿಂಗ್ ಕೌಚ್ ಎನ್ನುವ ಅನಿಷ್ಠ ಪದ್ಧತಿಯ ಕಪಿಮುಷ್ಠಿಯಲ್ಲಿ ಕೆಲ ನಟಿಯರು ಸಿಕ್ಕಿ ನೋವು ಅನುಭವಿಸಿದ್ದಾರೆ. ಕೆಲ ನಟಿಯರು ಇದನೆಲ್ಲಾ ಮೆಟ್ಟಿ ನಿಂತಿರುವುದು ಇದೆ. ಆದರೆ ಕೆಲವರಿಗೆ ಇಂತಹ ಕಹಿ ಅನುಭವ ಆಗಿರುವ ಬಗ್ಗೆ ಮಾತನಾಡಿದ್ದಾರೆ. ತೆಲುಗು ನಟ, ನಿರ್ದೇಶಕ ಜೆ. ಡಿ ಚಕ್ರವರ್ತಿ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ವಯಸ್ಸಾದ ಹಿರಿಯ ನಿರ್ಮಾಪಕನೊಬ್ಬ ನಟಿಯ ಜೊತೆ ವರ್ತಿಸಿದ್ದ ರೀತಿಯನ್ನು ಕಣ್ಣಾರೆ ಕಂಡಿದ್ದಾಗಿ ಅವರು ಹೇಳಿದ್ದಾರೆ.

ನಾನು ನಟಿಯ ಕೋಣೆಯಲ್ಲಿ, ಆಕೆಯ ಮಂಚದ ಕೆಳಗೆ ಇದ್ದಾಗ ಒಬ್ಬ ಮುದುಕ ನಿರ್ಮಾಪಕ ಬಂದು ಆ ನಟಿಯ ಜೊತೆ ನಡೆದುಕೊಂಡಿದ್ದ ರೀತಿ ಕಂಡು ಅಸಹ್ಯ ಹುಟ್ಟಿದ್ದಾಗಿ ಜೆ. ಡಿ ಚಕ್ರವರ್ತಿ ತಿಳಿಸಿದ್ದಾರೆ. Hit TV Specials ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಒಂದ್ಕಾಲದಲ್ಲಿ ನಾನು ವಿಲನ್ ಪಾತ್ರಗಳನ್ನು ಮಾಡ್ತಿದ್ದೆ. ಆಗ ಒಬ್ಬ ನಟಿ ನನಗೆ ಆತ್ಮೀಯ ಸ್ನೇಹಿತೆಯಾಗಿದ್ರು. ಆಕೆ ತನ್ನ ಗೆಸ್ಟ್ ಹೌಸ್‌ಗೆ ನನ್ನ ಹಾಗೂ ನಟ ಸುರೇಶ್ ಇಬ್ಬರನ್ನು ಸಂಜೆ ಊಟಕ್ಕೆ ಕರೆದಿದ್ರು. ಆ ಏನಾಯ್ತು ಅಂದ್ರೆ? ಎಂದು ಆ ಘಟನೆಯನ್ನು ಚಕ್ರವರ್ತಿ ನೆನಪಿಸಿಕೊಂಡಿದ್ದಾರೆ. "ನಾವು ಮೂವರು ಕೋಣೆಯಲ್ಲಿ ಇದ್ದಾಗ ಯಾರೋ ಬಂದು ಬಾಗಿಲು ಬಡಿದ್ರು. ಕಿಟಕಿಯಲ್ಲಿ ಯಾರು ಎಂದು ನೋಡಿ ಆ ನಟಿ ನಮ್ಮಿಬ್ಬರನ್ನು ಮಂಚದ ಕೆಳಗೆ ಬಚ್ಚಿಟ್ಟುಕೊಳ್ಳುವಂತೆ ಹೇಳಿದ್ಲು. ನಮಗೆ ಗಾಬರಿ ಆಯ್ತು.. ಯಾಕಪ್ಪಾ ಅಂತ.. ಸರಿ ಎಂದು ಮಂಚದ ಕೆಳಗೆ ಅಡಗಿ ಕೂತೆವು. ಆಗ ಒಬ್ಬ ನಿರ್ಮಾಪಕ ಕೋಣೆ ಒಳಗೆ ಬಂದ" ಎಂದು ಆ ಘಟನೆ ಬಗ್ಗೆ ಹೇಳಿದ್ದಾರೆ.
ಆ ನಟಿಗೆ ನಿರ್ಮಾಪಕ ನೋಡಲು ತಾತನ ವಯಸ್ಸು.. ಆತ ಮಾತನಾಡುತ್ತಿದ್ದ ರೀತಿ ಅಹಸ್ಯ ಹುಟ್ಟಿಸಿತ್ತು ಎಂದಿದ್ದಾರೆ. "ಆರಂಭದಲ್ಲಿ ಮಂಚದ ಕೆಳಗಿದ್ದ ನನಗೂ, ಸುರೇಶ್‌ಗೂ ಇದು ಮಜಾ ಅನ್ನಿಸಿತ್ತು. ನಾವಿಬ್ಬರು ಕೆಳಗಿದ್ದೀನಿ, ಈ ಮುದುಕ ಏನೆಲ್ಲಾ ಮಾತಾಡ್ತಾನೆ ನೋಡೊಣ ಅಂದುಕೊಂಡಿದ್ವಿ.. ಆದ್ರೆ, ಆ ನಿರ್ಮಾಪಕ ಹೋದ ಬಳಿಕ ನಾವಿಬ್ಬರು ಹೊರಗಡೆ ಬಂದಾಗ ನಟಿ ನಕ್ಕಿದ್ದು ನೋಡಿ ನಮ್ಮಿಬ್ಬರ ಕಣ್ಣಲ್ಲಿ ನೀರು ಬಂತು" ಎಂದು ಚಕ್ರವರ್ತಿ ವಿವರಿಸಿದ್ದಾರೆ.
ಆಕೆ ನಗುತ್ತಾ ಹೇಳಿದ್ದು ಏನು ಗೊತ್ತಾ? "ಮುದುಕ ಕಣೋ ಅವ್ನು.. ಅವನತ್ರ ವಾಸನೆ ಬರುತ್ತೆ.. ಪ್ರತಿರಾತ್ರಿ ಹೀಗೆ ಬಂದುಬಿಡ್ತಾನೆ.. ಆದ್ರೆ ಏನು ಮಾಡೋದು, ದೊಡ್ಡ ನಿರ್ಮಾಪಕ.. ಇದೆಲ್ಲಾ ತಪ್ಪಲ್ಲ, ಅಲ್ವಾ?? ಅಂದ್ಲು.." ಎಂದು ಜೆಡಿ ಚಕ್ರವರ್ತಿ ಆ ನಟಿ, ನಿರ್ಮಾಪಕನ ಹೆಸರು ಹೇಳದೇ ವಿವರಿಸಿದ್ದರು.
ನಾಗಾರ್ಜುನ ನಟಿಸಿದ 'ಶಿವ' ಚಿತ್ರದ ಸಣ್ಣ ಪಾತ್ರದಲ್ಲಿ ಮೊದಲಿಗೆ ಜೆ. ಡಿ ಚಕ್ರವರ್ತಿ ಬಣ್ಣ ಹಚ್ಚಿದ್ದರು. ರಾಮ್‌ಗೋಪಾಲ್ ವರ್ಮಾ ಗರಡಿಯಲ್ಲಿ ಪಳಗಿದ ಅವರು ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ, ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ಚಿತ್ರರಂಗದಲ್ಲಿ ಅಷ್ಟೇನು ಆಕ್ಟೀವ್ ಆಗಿ ಇಲ್ಲ. 3 ವರ್ಷಗಳ ಹಿಂದೆ 'ದಯಾ' ಎಂಬ ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು.


Click it and Unblock the Notifications