For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಶೂಟಿಂಗ್ ವೇಳೆ ತೆಲುಗು ನಟ ಗೋಪಿಚಂದ್‌ಗೆ ಗಾಯ

  |

  ತೆಲುಗು ನಟ ಗೋಪಿಚಂದ್ ಹೊಸ ಸಿನಿಮಾದ ಶೂಟಿಂಗ್ ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿತ್ತು. ಎಂದಿನಿಂತೆ ನಿನ್ನೆ (ಏಪ್ರಿಲ್ 29) ತಮ್ಮ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಸಿನಿಮಾದ ಚಿತ್ರೀಕರಣದ ವೇಳೆ ಗೋಪಿಚಂದ್ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಗೋಪಿಚಂದ್ ಹೊಸ ಸಿನಿಮಾ ಚಿತ್ರೀಕರಣದ ವೇಳೆ ನಿಯಂತ್ರಣ ತಪ್ಪಿ ಕಾಲು ಜಾರಿ ಬಿದ್ದಿದ್ದಾರೆ. ಹೀಗಾಗಿ ಅವರಿಗೆ ಅಲ್ಪ ಪ್ರಮಾಣದ ಗಾಯವಾಗಿದ್ದು, ಚಿತ್ರತಂಡ ತೆಲುಗು ನಟನಿಗೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ನಾಯಕ ನಟನಿಗೆ ಅಪಘಾತವಾಗಿದ್ದರಿಂದ ನಿನ್ನೆ (ಏಪ್ರಿಲ್ 29) ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು.

  ತೆಲುಗು ನಟ ಗೋಪಿಚಂದ್ ಸೇಫ್

  ಗೋಪಿಚಂದ್ ಇನ್ನೂ ಹೆಸರಿಡದ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಆದರೆ, ದೇವರ ದಯೆಯಿಂದ ಯಾವುದೇ ರೀತಿ ದೊಡ್ಡ ಮಟ್ಟದಲ್ಲಿ ಪೆಟ್ಟಾಗಿಲ್ಲ. ಹೀಗಾಗಿ ಅಭಿಮಾನಿಗಳು ಆತಂಕ ಪಡುವುದು ಬೇಡ. ನಟ ಗೋಪಿಚಂದ್ ಚೆನ್ನಾಗಿದ್ದಾರೆ. ಘಟನೆಯ ಬಗ್ಗೆ ಚಿಂತಿಸಬೇಡಿ ಎಂದು ಸಿನಿಮಾ ನಿರ್ದೇಶಕ ಶ್ರೀವಾಸ್ ಒಲೆಟ್ಟಿ ಅವರ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ವಿನಂತಿ ಮಾಡಿಕೊಂಡಿದ್ದಾರೆ.

  ಗೋವಿಚಂದ್ ಮಾಸ್ ಹಾಗೂ ಆಕ್ಷನ್ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ಮೊದಲು ಖಳನಾಯಕನಾಗಿ ಕಾಣಿಸಿಕೊಂಡಿದ್ದ ಗೋಪಿಚಂದ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ, ಸತತ ಸೋಲುಗಳಿಂದ ಕೆಲವು ದಿನಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು. ಬಳಿಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

  ಸಿನಿಮಾಗಳಲ್ಲಿ ಗೋಪಿಚಂದ್ ಫುಲ್ ಬ್ಯುಸಿ

  ಗೋಪಿಚಂದ್ ಮತ್ತೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಗೋಪಿಚಂದ್ ಅಭಿನಯದ 'ಪಕ್ಕಾ ಕಮರ್ಷಿಯಲ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮೂಲಗಳ ಪ್ರಕಾರ, ಇದೇ ಜೂನ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗದಲಿದೆ.

  Telugu Actor Gopichand Met with an Accident while shooting in Mysore

  ಈ ಮಧ್ಯೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ. ಮಾಸ್ ಸಿನಿಮಾಗಳನ್ನೇ ನಿರ್ದೇಶಿಸಿರೋ ನಿರ್ದೇಶಕ ಶ್ರೀವಾಸ್ ಒಲೆಟ್ಟಿ ಗೋಪಿಚಂದ್ ಜೊತೆ ಪಕ್ಕಾ ಮಾಸ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವನ್ನು ತೆಗೆಯುತ್ತಿದ್ದಾರೆ. ಅಂದಹಾಗೆ, ಈ ಚಿತ್ರ ಶ್ರೀವಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ನಾಯಕಿಯಾಗಿ ಹಯಾತಿ ಮತ್ತು ಜಗಪತಿಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Telugu Actor Gopichand Met with an Accident while shooting in Mysore, Know More. c
  Saturday, April 30, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X