For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಜಯಪ್ರಕಾಶ್ ರೆಡ್ಡಿ ನಿಧನ

  |

  ತೆಲುಗು ಸಿನಿಮಾರಂಗದ ಖ್ಯಾತ ಹಾಸ್ಯ ನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 74 ವರ್ಷದ ಜಯಪ್ರಕಾಶ್ ಇಂದು (ಸೆಪ್ಟಂಬರ್ 8) ಬೆಳಗ್ಗೆ ಆಂಧ್ರ ಪ್ರದೇಶದ ಗುಂಟೂರಿನ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಬಾತ್ ರೂಮಿನಲ್ಲಿ ಕುಸಿದು ಬಿದ್ದ ಜಯಪ್ರಕಾಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಕೊನೆಯುಸಿರೆಳೆದಿದ್ದಾರೆ.

  Siddharaj kalyankar , ಹಿರಿಯ ಧಾರವಾಹಿ ಹಾಗು ಚಲನಚಿತ್ರ ನಟ ಇನ್ನಿಲ್ಲ | Filmibeat Kannada

  ಜಯಪ್ರಕಾಶ್ ನಿಧನದ ಸುದ್ದಿ ಇಡೀ ಟಾಲಿವುಡ್ ಗೆ ಶಾಕ್ ನೀಡಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 1988ರಲ್ಲಿ 'ಬ್ರಹ್ಮ ಪುತ್ರಡು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಯಪ್ರಕಾಶ್ 100ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಲು ಹೋಗಿ ಮೂವರು ಅಭಿಮಾನಿಗಳ ಸಾವು

  ಜಯಂ ಮನಡೆ ರಾ, ವಿಜಯ ರಾಮ ರಾಜು, ಚೆನ್ನಕೇಶವ ರೆಡ್ಡಿ, ನರಸಿಂಹ ನಾಯ್ಡು, ಬಿಂದಾಸ್, ಗಬ್ಬರ್ ಸಿಂಗ್, ಪಟಾಸ್, ಟೆಂಪರ್ ಸೇರಿದ್ದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಜಯಪ್ರಕಾಶ್ ನಟಿಸಿದ್ದಾರೆ.

  ಹಾಸ್ಯ ನಟನಾಗಿ ಮತ್ತು ಖಳ ನಟನಾಗಿ ತೆಲುಗು ಸಿನಿಪ್ರಿಯರನ್ನು ರಂಜಿಸಿದ್ದ ಜಯಪ್ರಕಾಶ್, ಕೊನೆಯದಾಗಿ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

  English summary
  Telugu Famous Actor Jayaprakash Reddy dies at heart attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X