For Quick Alerts
  ALLOW NOTIFICATIONS  
  For Daily Alerts

  'KGF' ನಿರ್ದೇಶಕ ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ತೆಲುಗು ಸ್ಟಾರ್ Jr. NTR ವಿಶ್ ಮಾಡಿದ್ದು ಹೀಗೆ

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಕೆಜಿಎಫ್ ಚಿತ್ರದ ಸರದಾರ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಡೀ ಭಾರತೀಯ ಸಿನಿಮಾರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್.

  ಉಗ್ರಂ ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್ ಇಂದು ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನಿಂದ ತೆಲುಗು ಸಿನಿಮಾರಂಗಕ್ಕೆ ಹಾರಿರುವ ಪ್ರಶಾಂತ್ ನೀಲ್ ಪ್ರಭಾಸ್ ನಟನೆಯ ಸಲಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ತೆಲುಗು ಸ್ಟಾರ್ ನಟ ಜೂ.ಎನ್ ಟಿ ಆರ್, ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಪ್ರೀತಿಯ ವಿಶ್ ತಿಳಿಸಿದ್ದಾರೆ. ಅಂದಹಾಗೆ ಸಲಾರ್ ಬಳಿಕ ಪ್ರಶಾಂತ್ ನೀಲ್ ಜೂ.ಎನ್ ಟಿ ಆರ್ ಜೊತೆ ಸಿನಿಮಾ ಮಾಡುವುದು ಪಕ್ಕ ಆಗಿದೆ. ಜೂ ಎನ್ ಟಿ ಆರ್ ಹುಟ್ಟುಹಬ್ಬಕ್ಕೂ ಪ್ರಶಾಂತ್ ನೀಲ್ ವಿಶ್ ಮಾಡಿ ಮುಂದಿನ ಪ್ರಾಜೆಕ್ಟ್ ಶುರು ಮಾಡುವ ಬಗ್ಗೆ ಸುಳಿವು ನೀಡಿದ್ದರು. ಇದೀಗ ಜೂ ಎನ್ ಟಿ ಆರ್ ವಿಶ್ ಮಾಡಿ, ನಿಮ್ಮ ತಂಡ ಸೇರಿಕೊಳ್ಳಲು ಕಾಯುತ್ತಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ...

  ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಜೂ ಎನ್ ಟಿ ಆರ್ ವಿಶ್

  ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಜೂ ಎನ್ ಟಿ ಆರ್ ವಿಶ್

  ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪ್ರಶಾಂತ್ ನೀಲ್ ಅವರಿಗೆ ತೆಲುಗು ಸ್ಟಾರ್ ನಟ ಜೂ ಎನ್ ಟಿ ಆರ್ ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಸಹೋದರ ಪ್ರಶಾಂತ್ ನೀಲ್. ಯಾವಾಗಲೂ ಅದ್ಭುತವಾಗಿರಿ. ನಿಮ್ಮ ಫೋರ್ಸ್ ಸೇರಲು ನಾನು ಕಾಯುತ್ತಿದ್ದೀನಿ. ದೇವರು ಒಳ್ಳೆದು ಮಾಡಲಿ' ಎಂದು ಟ್ವೀಟ್ ಮಾಡಿದ್ದಾರೆ.

  ಇಬ್ಬರ ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ

  ಇಬ್ಬರ ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ

  ಜೂ ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾಗೆ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಎನ್‌ಟಿಆರ್ ಜೊತೆ 'ಜನತಾ ಗ್ಯಾರೇಜ್' ಸಿನಿಮಾ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಎನ್‌ಟಿಆರ್ 31ನೇ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಪ್ರಸ್ತುತ, ಟಾಲಿವುಡ್ ಇಂಡಸ್ಟ್ರಿಯ ದೊಡ್ಡ ನಿರ್ಮಾಣ ಸಂಸ್ಥೆ ಇದಾಗಿದೆ. ಶ್ರೀಮಂತಡು, ರಂಗಸ್ಥಲಂ, ಡಿಯರ್ ಕಾಮ್ರೇಡ್, ಉಪ್ಪೇನಾ ಹಾಗೂ ಪುಷ್ಪ, ಸರ್ಕಾರು ವಾರಿ ಪಾಟ ಚಿತ್ರಗಳನ್ನು ಇದೇ ಸಂಸ್ಥೆ ನಿರ್ಮಿಸುತ್ತಿದೆ.

  'RRR' ಸಿನಿಮಾದಲ್ಲಿ ಜೂ ಎನ್ ಟಿ ಆರ್ ಬ್ಯುಸಿ

  'RRR' ಸಿನಿಮಾದಲ್ಲಿ ಜೂ ಎನ್ ಟಿ ಆರ್ ಬ್ಯುಸಿ

  ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದಲ್ಲಿ ಎನ್‌ಟಿಆರ್ ನಟಿಸಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದೆ. ಈ ಚಿತ್ರದ ಬಳಿಕ ಕೊರಟಲಾ ಶಿವ ಜೊತೆ ಹೊಸ ಸಿನಿಮಾ ಆರಂಭಿಸಲಿದ್ದಾರೆ. ಈ ಚಿತ್ರ ಈಗಾಗಲೇ ಘೋಷಣೆಯಾಗಿದೆ. ಈ ಪ್ರಾಜೆಕ್ಟ್ ಮುಗಿದ ಬಳಿಕವೇ ಪ್ರಶಾಂತ್ ನೀಲ್ ಸಿನಿಮಾ ಶೂಟಿಂಗ್ ಶುರು ಮಾಡಲಿದೆ.

  Rockline ವಿರುದ್ದ ವಿಷ್ಣು ಅಭಿಮಾನಿಯ ಆಕ್ರೋಶ | Filmibeat Kannada
  ಪ್ರಭಾಸ್ ಜೊತೆ 'ಸಲಾರ್' ಚಿತ್ರದಲ್ಲಿ ಪ್ರಶಾಂತ್ ನೀಲ್

  ಪ್ರಭಾಸ್ ಜೊತೆ 'ಸಲಾರ್' ಚಿತ್ರದಲ್ಲಿ ಪ್ರಶಾಂತ್ ನೀಲ್

  ಪ್ರಶಾಂತ್ ನೀಲ್ ಸದ್ಯ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದೆ. ಜೊತೆಗೆ ಈಗಾಗಲೇ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಆರಂಭಿಸಿದ್ದಾರೆ. ಶೂಟಿಂಗ್ ಪ್ರಗತಿಯಲ್ಲಿದೆ. ಈ ಚಿತ್ರದ ನಂತರ ಎನ್‌ಟಿಆರ್ ಜೊತೆ 31ನೇ ಸಿನಿಮಾ ಆರಂಭಿಸಲಿದ್ದಾರೆ.

  English summary
  Telugu Actor jr NTR wishes Prashanth Neel on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X