For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಹುಟ್ಟುಹಬ್ಬದ ದಿನ ವಿಶ್ವ ದಾಖಲೆ ನಿರ್ಮಿಸಿದ ಅಭಿಮಾನಿಗಳು

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಮಹೇಶ್ ಬಾಬು ಇತ್ತೀಚಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರಿನ್ಸ್ ಹುಟ್ಟುಹಬ್ಬ ಸರಳವಾಗಿ ಆಚರಣೆ ಮಾಡಿದರೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಆಚರಣೆ ಮಾಡಿದ್ದಾರೆ. ಕೋಟ್ಯಾಂತರ ಅಭಿಮಾನಿ ಬಳಗಹೊಂದಿರುವ ಮಹೇಶ್ ಬಾಬುಗೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ.

  Rachita Ram ಇತ್ತೀಚಿನ ಫೋಟೋಶೂಟ್‌ನ ತೆರೆ ಹಿಂದಿನ ದೃಶ್ಯ | Filmibeat Kannada

  ತೆಲುಗು ಮಾತ್ರದಲ್ಲಿ ಬೇರೆ ಬೇರೆ ಭಾಷೇಯಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿರುವ ಮಹೇಶ್ ಬಾಬು, ಹುಟ್ಟುಹಬ್ಬದ ದಿನ ಅಭಿಮಾನಿಗಳು ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ಮೆಗಾಸ್ಟಾರ್ ಚಿರಂಜೀವಿಯಿಂದ ಹಿಡಿದು ಸಾಮಾನ್ಯರು ಸಹ ಟ್ಟಿಟ್ಟರ್ ಮೂಲಕ ಶುಭಹಾರೈಸಿದ್ದಾರೆ. ಟ್ವಿಟ್ಟರ್ ನಲ್ಲಿ ಪ್ರಿನ್ಸ್ ಗೆ ವಿಶ್ ಮಾಡಿರುವುದು ವಿಶ್ವ ದಾಖಲೆ ನಿರ್ಮಾಣವಾಗಿದೆ. ಮುಂದೆ ಓದಿ..

  ಅಭಿಮಾನಿಗಳ ಬಳಿ ಮಹೇಶ್ ಬಾಬು ಸವಿನಯ ಮನವಿಅಭಿಮಾನಿಗಳ ಬಳಿ ಮಹೇಶ್ ಬಾಬು ಸವಿನಯ ಮನವಿ

  ದಾಖಲೆ ನಿರ್ಮಿಸಿದ ಮಹೇಶ್ ಬಾಬು ಹುಟ್ಟುಹಬ್ಬದ ಟ್ವೀಟ್ಸ್

  ದಾಖಲೆ ನಿರ್ಮಿಸಿದ ಮಹೇಶ್ ಬಾಬು ಹುಟ್ಟುಹಬ್ಬದ ಟ್ವೀಟ್ಸ್

  ಮಹೇಶ್ ಬಾಬು ಹುಟ್ಟುಹಬ್ಬ ಟ್ವಿಟ್ಟರ್ ನಲ್ಲಿ ದಾಖಲೆ ನಿರ್ಮಿಸಿದೆ. 18 ಗಂಟೆಯಲ್ಲಿ 60.2 ಮಿಲಿಯನ್ ಗೂ ಅಧಿಕ ಹ್ಯಾಶ್ ಟ್ಯಾಗ್ ಕ್ರಿಯೇಟ್ ಆಗಿದ್ದು ಈ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ. #HBDMaheshBabu ಹೆಸರು 60 ಮಿಲಿಯನ್ ಗೂ ಅಧಿಕ ಬಾರಿ ಬಳಕೆಯಾಗಿದೆ. ವಿಶ್ವದಲ್ಲಿಯೇ ಮೊದಲ ನಟನ ಹೆಸರು 60 ಮಿಲಿಯನ್ ಗೂ ಅಧಿಕ ಬಾರಿ ಹ್ಯಾಶ್ ಬಳಸಲಾಗಿದೆ.

  45ನೇ ವರ್ಷದ ಹುಟ್ಟುಹಬ್ಬ

  45ನೇ ವರ್ಷದ ಹುಟ್ಟುಹಬ್ಬ

  ಮಹೇಶ್ ಬಾಬು 45ನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಕುಟುಂಬದ ಜೊತೆ ಸರಳವಾಗಿ ಆಚರಣೆ ಮಾಡಿದ್ದಾರೆ. ನಿನ್ನೆ ರಾತ್ರಿ (ಆಗಸ್ಟ್ 09)ಯಿಂದ #HBDMaheshBabu ಟ್ರೆಂಡಿಂಗ್ ನಲ್ಲಿದೆ. ಅಭಿಮಾನಿಗಳು ಇನ್ನೂ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಇನ್ನೂ ಮಹೇಶ್ ಬಾಬು ಗ್ರೀನ್ ಇಂಡಿಯಾ ಸವಾಲನ್ನು ಸ್ವೀಕರಿಸುವ ಮೂಲಕ ಈ ಬಾರಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಗ್ರೀನ್ ಇಂಡಿಯಾ ಸವಾಲನ್ನು ಜೂ.ಎನ್ ಟಿ ಆರ್, ಶ್ರುತಿ ಹಾಸನ್ ಮತ್ತು ತಮಿಳು ನಟ ವಿಜಯ್ ಹಾಕಿದ್ದಾರೆ.

  ಅಭಿಮಾನಿಗಳ ಬಳಿ ಮಹೇಶ್ ಬಾಬು ಸವಿನಯ ಮನವಿಅಭಿಮಾನಿಗಳ ಬಳಿ ಮಹೇಶ್ ಬಾಬು ಸವಿನಯ ಮನವಿ

  ಅಭಿಮಾನಿಗಳಲ್ಲಿ ಮನವಿ ಮಾಡಿದ ಮಹೇಶ್ ಬಾಬು

  ಅಭಿಮಾನಿಗಳಲ್ಲಿ ಮನವಿ ಮಾಡಿದ ಮಹೇಶ್ ಬಾಬು

  "ಇಡೀಯ ವಿಶ್ವವೇ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದೆ. ಇಂಥಹಾ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸೂಕ್ತವಲ್ಲ. ಹಾಗಾಗಿ ನನ್ನ ಅಭಿಮಾನಿಗಳು ನನ್ನ ಹುಟ್ಟುಹಬ್ಬದಂದು ಯಾವುದೇ ಕಾರ್ಯಕ್ರಮ ಆಯೋಜಿಸಬೇಡಿ, ಯಾವುದೇ ಸಂಭ್ರಮ ಆಚರಿಸಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗೃತರಾಗಿರಿ" ಎಂದು ಮನವಿ ಮಾಡಿದ್ದರು.

  ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿ

  ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿ

  ಮಹೇಶ್ ಬಾಬು ಕೊನೆಯದಾಗಿ ಸರಿಲೇರು ನೀಕೆವ್ವರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸರಿಲೇರು ನೀಕೆವ್ವರು ಸೂಪರ್ ಹಿಟ್ ಆದ ಬಳಿಕ ಮಹೇಶ್ ಬಾಬು ಸರ್ಕಾರು ವಾರಿ ಪಾಟ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೆ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರೀಕರಣ ಪ್ರಾರಂಭವಾಗಬೇಕಿದೆ.

  English summary
  Telugu Actor Mahesh Babu Birthday tweets creat a world record. Mahesh Babu fans tweet more than 60.2 million.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X