For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಆಸ್ತಿ ಮೌಲ್ಯ ಎಷ್ಟು? 'ಪ್ರಿನ್ಸ್' ಬಳಿಯಿರುವ ದುಬಾರಿ ಕಾರ್‌ಗಳು ಯಾವುದು?

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತೆಲುಗು ಸಿನಿಲೋಕದಲ್ಲಿ ಅತಿ ದೊಡ್ಡ ಅಭಿಮಾನಿಗಳ ಹೊಂದಿರುವ ನಟರ ಪೈಕಿ 'ರಾಜಕುಮಾರ' ಸಹ ಒಬ್ಬರು. ಪ್ರಿನ್ಸ್ ಬರ್ತಡೇ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಉತ್ಸವವೇ ನಡೆಯುತ್ತಿದೆ. ಕೋಟ್ಯಾಂತರ ಅಭಿಮಾನಿಗಳು ಪ್ರೀತಿಯ ನಟನಿಗೆ ಜನುಮದಿನದ ಶುಭಾಶಯ ಕೋರುತ್ತಿದ್ದಾರೆ.

  ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಮಗ ಮಹೇಶ್ ಬಾಬು 1979ರಲ್ಲಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ನೀಡಾ ಚಿತ್ರದೊಂದಿಗೆ ಅಭಿನಯ ಶುರು ಮಾಡಿದ ಮಹೇಶ್‌ ಸುಮಾರು 8 ಚಿತ್ರಗಳಲ್ಲಿ ಬಾಲನಟನಾಗಿ ಬಣ್ಣ ಹಚ್ಚಿದ್ದರು. ಅದಾದ ಮೇಲೆ 1999ರಲ್ಲಿ 'ರಾಜಕುಮಾರಡು' ಸಿನಿಮಾ ಮೂಲಕ ಚೊಚ್ಚಲ ಬಾರಿಗೆ ನಾಯಕನಟನಾಗಿ ಪ್ರಿನ್ಸ್ ಎಂಟ್ರಿಯಾದರು. ಬಾಲಿವುಡ್ ನಟಿ ಪ್ರೀತಿ ಜಿಂಟಾ ಈ ಚಿತ್ರಕ್ಕೆ ನಾಯಕಿ. ಸೂಪರ್ ಸ್ಟಾರ್ ಮಗ ಎನ್ನುವ ಕಾರಣಕ್ಕೆ ಈ ಚಿತ್ರ ಬಹಳ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿತ್ತು. ನಿರೀಕ್ಷೆಗೆ ತಕ್ಕಂತೆ ಮಹೇಶ್ ಬಾಬು ತಮ್ಮ ಅಭಿನಯದ ಮೂಲಕ ಗಮನ ಸೆಳೆದರು.

  ನನ್ನ ಹುಟ್ಟುಹಬ್ಬದ ದಿನ ಈ ಕೆಲಸ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಮಹೇಶ್ ಬಾಬುನನ್ನ ಹುಟ್ಟುಹಬ್ಬದ ದಿನ ಈ ಕೆಲಸ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಮಹೇಶ್ ಬಾಬು

  'ರಾಜಕುಮಾರಡು' ಚಿತ್ರದಿಂದ 'ಸರಿಲೇರು ನೀಕೆವ್ವರು' ಚಿತ್ರದವರೆಗೂ ಪ್ರಿನ್ಸ್ ನಡೆದು ಬಂದ ಹಾದಿ ಒಂದು ಸಕ್ಸಸ್‌ಫುಲ್ ಜರ್ನಿ. 46ನೇ ಹುಟ್ಟುಹಬ್ಬದ ಪ್ರಯುಕ್ತ ಮಹೇಶ್ ಬಾಬು ಅವರ ಆಸ್ತಿ ಮೌಲ್ಯ ಹಾಗೂ ಅವರ ಬಳಿಯಿರುವ ದುಬಾರಿ ಕಾರ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಮುಂದೆ ಓದಿ...

  ಮಹೇಶ್ ಬಾಬು ಆಸ್ತಿ ಮೌಲ್ಯ?

  ಮಹೇಶ್ ಬಾಬು ಆಸ್ತಿ ಮೌಲ್ಯ?

  'ಸರಿಲೇರು ನೀಕೆವ್ವರು' ಚಿತ್ರದ ನಾಯಕ ನಟ ಮಹೇಶ್ ಬಾಬು ಒಟ್ಟು ಆಸ್ತಿ 149 ಕೋಟಿ (2021ಕ್ಕೆ) ಎಂದು ಇಂಗ್ಲಿಷ್ ಫಿಲ್ಮಿಬೀಟ್ ವರದಿ ಮಾಡಿದೆ. ಒಂದು ಚಿತ್ರಕ್ಕೆ 22 ಕೋಟಿವರೆಗೂ ಚಾರ್ಜ್ ಮಾಡುವ ನಟನೆ ತಿಂಗಳ ಆದಾಯ 2 ಕೋಟಿ ಎನ್ನಲಾಗಿದೆ. ಸಿನಿಮಾ ಮತ್ತು ಜಾಹೀರಾತುಗಳಿಂದಲೇ ಮಹೇಶ್ ಬಾಬು ಹೆಚ್ಚಿನ ಆದಾಯ ಗಳಿಸುತ್ತಾರೆ. ಸದ್ಯಕ್ಕೆ ಜಾಹೀರಾತಿನಲ್ಲಿ ನಟಿಸಲು ಒಂದು ಕೋಟಿ ಸಂಭಾವನೆ ಪಡೆಯುತ್ತಾರಂತೆ. ತಮ್ಮ ಚಾರಿಟಬಲ್ ಸೊಸೈಟಿ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಗಮನಿಸಬಹುದು.

  ಮಹೇಶ್ ಬಾಬು ಕಾರ್ ಕಲೆಕ್ಷನ್

  ಮಹೇಶ್ ಬಾಬು ಕಾರ್ ಕಲೆಕ್ಷನ್

  ಮಹೇಶ್ ಬಾಬು ಬಳಿ ಹಲವು ದುಬಾರಿ ಕಾರ್‌ಗಳಿವೆ. 2 ಕೋಟಿ ಮೌಲ್ಯದ ರೇಂಜ್ ರೋವರ್ ವೋಗ್, 88 ಲಕ್ಷದ ಮರ್ಸಿಡಿಸ್ ಜಿಎಲ್‌ಎಸ್ 350 ಡಿ, 1.3 ಕೋಟಿ ಮೌಲ್ಯದ ಬಿಎಂಡಬ್ಲ್ಯು 730 ಎಲ್‌ಡಿ, 1.5 ಕೋಟಿ ಬೆಲೆಯ ಟೊಯೋಟಾ ಲ್ಯಾಂಡ್ ಕ್ರೂಸರ್ ವಿ8, 50 ಲಕ್ಷದ ಮರ್ಸಿಡಿಸ್ ಇ 280, 1.09 ಕೊಟಿಯ ಮರ್ಸಿಡಿಸ್ ಜಿಎಲ್‌ಎಸ್ 450 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್ ಸಹ ಇದೆ. ಇದು ಶಾರೂಖ್ ಖಾನ್ ಬಳಸುವ ವ್ಯಾನಿಟಿ ವ್ಯಾನ್‌ಗಿಂತ ದುಬಾರಿ ಎನ್ನುವುದು ವಿಶೇಷ.

  ಪ್ರಭಾಸ್ vs ಮಹೇಶ್ ಬಾಬು: ಸಂಕ್ರಾಂತಿ ಹಬ್ಬದಲ್ಲಿ 'ಬಿಗ್' ವಾರ್ಪ್ರಭಾಸ್ vs ಮಹೇಶ್ ಬಾಬು: ಸಂಕ್ರಾಂತಿ ಹಬ್ಬದಲ್ಲಿ 'ಬಿಗ್' ವಾರ್

  ನಂದಿ ಪ್ರಶಸ್ತಿ-ರಾಷ್ಟ್ರ ಪ್ರಶಸ್ತಿ

  ನಂದಿ ಪ್ರಶಸ್ತಿ-ರಾಷ್ಟ್ರ ಪ್ರಶಸ್ತಿ

  ಒಕ್ಕಡು, ಪೋಕಿರಿ, ದೂಕುಡು, ಸೀತಮ್ಮ ವಾಕಿಟ್ಲೊ ಸಿರೆಮಲ್ಲೆ ಚೆಟ್ಟು, ಶ್ರೀಮಂತಡು ಚಿತ್ರದ ನಟನೆಗಾಗಿ ಸೌತ್ ಫಿಲಂ ಫೇರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶ್ರೀಮಂತಡು ಚಿತ್ರಕ್ಕಾಗಿ ಐಫಾ ಪ್ರಶಸ್ತಿಯೂ ಲಭಿಸಿದೆ. ರಾಜಕುಮಾರಡು, ಮುರಾರಿ, ಟಕ್ಕರಿ ದೊಂಗ, ನಿಜಂ, ಅರ್ಜುನ್, ಆತಡು, ದೂಕುಡು, ಶ್ರೀಮಂತಡು ಚಿತ್ರಕ್ಕಾಗಿ ನಂದಿ ಪ್ರಶಸ್ತಿ ಸಿಕ್ಕಿದೆ. ಮಹರ್ಷಿ ಸಿನಿಮಾಗೆ 2019ನೇ ಸಾಲಿನಲ್ಲಿ ಅತ್ಯುತ್ತಮ ಮನರಂಜನೆ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ದೊರೆತಿದೆ.

  ಮಹೇಶ್ ಬಾಬು ಮುಂದಿನ ಚಿತ್ರಗಳು

  ಮಹೇಶ್ ಬಾಬು ಮುಂದಿನ ಚಿತ್ರಗಳು

  ಮಹೇಶ್ ಬಾಬು ಪ್ರಸ್ತುತ 'ಸರ್ಕಾರು ವಾರಿ ಪಾಟ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪರುಶುರಾಮ್ ಈ ಚಿತ್ರ ನಿರ್ದೇಶಿಸುತ್ತಿದ್ದು, 2022ರ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ. ಈ ಸಿನಿಮಾ ಮುಗಿಸಿ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಹೊಸ ಪ್ರಾಜೆಕ್ಟ್ ಆರಂಭಿಸಲಿದ್ದಾರೆ. ಆ ಚಿತ್ರದ ನಂತರ ಎಸ್ ಎಸ್ ರಾಜಮೌಳಿ ಜೊತೆ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.

  ಅಭಿಮಾನಿಗಳಲ್ಲಿ ಮನವಿ ಮಾಡಿದ್ದ ನಟ

  ಅಭಿಮಾನಿಗಳಲ್ಲಿ ಮನವಿ ಮಾಡಿದ್ದ ನಟ

  ಈ ಬಾರಿ ಹುಟ್ಟುಹಬ್ಬವನ್ನು ಗೋ ಗ್ರೀನ್ ವಿಷಯದಡಿ ಆಚರಿಸಲು ಅಭಿಮಾನಿಗಳಲ್ಲಿ ಮಹೇಶ್ ಬಾಬು ಮನವಿ ಮಾಡಿದ್ದರು. "ಈ ವರ್ಷ ನಾನು ನಿಮ್ಮಲ್ಲಿ ವಿಶೇಷವಾದ ಮನವಿ ಮಾಡುತ್ತಿದ್ದೇನೆ. ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಬೆಂಬಲಿಸಲು ನನ್ನ ಹುಟ್ಟುಹಬ್ಬದ ದಿನ ತಲಾ 3 ಸಸಿಗಳನ್ನು ನೆಡುವಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಿಮ್ಮ ಪೋಸ್ಟ್ ಗಳನ್ನು ನನಗೆ ಟ್ಯಾಗ್ ಮಾಡಿ. ನಾನು ನಿಮ್ಮನ್ನು ನೋಡುತ್ತೇನೆ" ಎಂದು ಮಹೇಶ್ ಬಾಬು ಪೋಸ್ಟ್ ಹಾಕಿದ್ದರು.

  English summary
  Mahesh Babu 46th Birthday: Telugu superstar Mahesh babu net worth, remuneration and Car collection details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X