ಶೋಭಿತಾ ಹಾಗೂ ಸಮಂತಾ ಜೊತೆ ನಾಗಚೈತನ್ಯ ಫೋಟೊ ವೈರಲ್

ತೆಲುಗು ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದು ಗೊತ್ತೇಯಿದೆ. ಅಚ್ಚರಿ ಎಂದರೆ ಇಬ್ಬರೂ ಈಗ 2ನೇ ಮದುವೆ ಆಗಿದ್ದಾರೆ. ಕಳೆದ ವರ್ಷ ನಟಿ ಶೋಭಿತಾ ಜೊತೆ ಚೈತು ಹಸೆಮಣೆ ಏರಿದ್ದರು, ಇತ್ತೀಚೆಗೆ ನಿರ್ದೇಶಕ ರಾಜ್ ನಿಡುಮೊಡು ಜೊತೆ ಸ್ಯಾಮ್ ಹೊಸ ಬಾಳಿಗೆ ಕಾಲಿಟ್ಟರು.

ಇತ್ತೀಚಿನ ವರ್ಷಗಳಲ್ಲಿ ಡಿವೋರ್ಸ್, ಮದುವೆ ಸರ್ವೇ ಸಾಮಾನ್ಯ ಎನ್ನುವಂತಾಗ್ತಿದೆ. ಅದರಲ್ಲೂ ತಾರೆಯರ ಜೀವನದ ಇಂತಹ ವಿಚಾರಗಳು ಭಾರೀ ಸದ್ದು ಮಾಡುತ್ತಿದೆ. ಚೈತು-ಸ್ಯಾಮ್ ಡಿವೋರ್ಸ್‌ಗೆ ಕಾರಣ ಏನು ಎನ್ನುವುದನ್ನು ಹೇಳಲಿಲ್ಲ. ಕೆಲ ಸಂದರ್ಶನಗಳಲ್ಲಿ ಪರೋಕ್ಷವಾಗಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿದ್ದರು. ಇನ್ನುಳಿದಂತೆ ನೇರವಾಗಿ ಏನನ್ನೂ ಹೇಳುವ ಗೋಜಿಗೆ ಹೋಗಲಿಲ್ಲ. ಆದರೂ ಇಷ್ಟು ಬೇಗ ಇಬ್ಬರೂ ಮತ್ತೊಮ್ಮೆ ಪ್ರೀತಿಲಿ ಬಿದ್ದು ಮದುವೆ ಆಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಅಂದಹಾಗೆ ಸ್ಯಾಮ್ ಕೈ ಹಿಡಿದಿರುವ ನಿರ್ದೇಶಕ ರಾಜ್‌ ನಿಡುಮೊರುಗೂ ಇದು 2ನೇ ಮದುವೆ.

Telugu actor Naga Chaitanya Shobhita Dhulipala and her sister Samantha photo viral

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶೋಭಿತಾ ಹಾಗೂ ಸಮಂತಾ ಜೊತೆ ನಾಗಚೈತನ್ಯ ಒಟ್ಟಿಗೆ ಇರುವ ಫೋಟೊ ವೈರಲ್ ಆಗ್ತಿದೆ. ಕನ್‌ಫ್ಯೂಸ್ ಆಗಬೇಡಿ. ಈ ಸಮಂತಾ ಬೇರೆ. ಶೋಭಿತಾ ಸಹೋದರಿ ಹೆಸರು ಕೂಡ ಸಮಂತಾ. ಹಾಗಾಗಿ ಕೆಲವರು ನಾಗಚೈತನ್ಯ, ಶೋಭಿತಾ ಹಾಗೂ ಸಮಂತಾ ಫೋಟೊ ವೈರಲ್ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಏನೇ ಆದರೂ ಸಮಂತಾ ಎನ್ನುವ ಹೆಸರು ಚೈತುನ ಬಿಟ್ಟು ಹೋಗ್ತಿಲ್ಲ, ಮಾಜಿ ಹೆಂಡ್ತಿ, ನಾದಿನಿ ಇಬ್ಬರ ಹೆಸರು ಒಂದೇ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಸೆಲೆಬ್ರೆಟಿಗಳ ಪ್ರತಿ ನಡೆ, ನುಡಿಯನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ಸೋಶಿಯಲ್ ಮೀಡಿಯಾ ಅದಕ್ಕೆ ದೊಡ್ಡ ವೇದಿಕೆ ಆಗಿಬಿಟ್ಟಿದೆ. ಕೆಲವೇ ಕ್ಷಣಗಳು ಯಾವುದೇ ಫೋಟೊ, ವೀಡಿಯೋ ವೈರಲ್ ಆಗಿ ಸದ್ದು ಮಾಡುತ್ತದೆ. ಅದೇ ರೀತಿ ಈಗ ಇವರ ಫೋಟೊ ಗಮನ ಸೆಳೆಯುತ್ತಿದೆ. ಚೈತು-ಸ್ಯಾಮ್ ಡಿವೋರ್ಸ್ ತಗೋತ್ತಾರೆ, ಇಷ್ಟು ಬೇಗ ಮತ್ತೆ ಮದುವೆ ಆಗುತ್ತಾರೆ ಎಂದು ಊಹಿಸಿರಲಿಲ್ಲ. ಥೇಟ್ ಸಿನಿಮಾ ಸ್ಟೈಲ್‌ನಲ್ಲಿ ಎಲ್ಲವೂ ನಡೆದು ಹೋಗಿದೆ. ಸದ್ಯ ಚೈ-ಸ್ಯಾಮ್ ತಮ್ಮ ತಮ್ಮ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ನಾಗಚೈತನ್ಯ 'ವೃಷಕರ್ಮ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಸಮಂತಾ ನಿರ್ಮಾಪಕಿ ಆಗಿ ಗುರ್ತಿಸಿಕೊಂಡಿದ್ದಾರೆ. 'ಶುಭಂ' ಎಂಬ ಸಿನಿಮಾ ನಿರ್ಮಿಸಿ ಅತಿಥಿ ಪಾತ್ರದಲ್ಲಿ ಕೂಡ ನಟಿಸಿದ್ದರು. ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಸಮಂತಾ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದಾರೆ. ರವಿತೇಜಾ ಜೋಡಿಯಾಗಿ ಹೊಸ ಚಿತ್ರಕ್ಕೆ ಸ್ಯಾಮ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು.

ಮಯೋಸೈಟಿಸ್ ಸಮಸ್ಯೆಯಿಂದ ನಟಿ ಸಮಂತಾ ಬಹುತೇಕ ಚೇತರಿಸಿಕೊಂಡಂತೆ ಕಾಣುತ್ತಿದೆ. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸೋಕೆ ಮನಸ್ಸು ಮಾಡಿದ್ದಾರೆ. ಮುಂದೆ ಪತಿ ರಾಜ್ ನಿಡುಮೊರು ನಿರ್ದೇಶನದ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಆಕೆ ನಟಿಸಿದರೂ ಅಚ್ಚರಿ ಪಡಬೇಕಿಲ್ಲ. 'ಏ ಮಾಯಾ ಚೆಸಾವೆ' ಚಿತ್ರದಲ್ಲಿ ಚೈತು-ಸ್ಯಾಮ್ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಶುರುವಾದ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿ ಬದಲಾಗಿತ್ತು.

ಗೋವಾದಲ್ಲಿ ಅದ್ಧೂರಿಯಾಗಿ ಸಮಂತಾ, ಚೈತನ್ಯಾ ಮದುವೆ ನಡೆದಿತ್ತು. ಟಾಲಿವುಡ್ ಹಾಟ್ ಕಪಲ್ ಎಂದೇ ಗುರ್ತಿಸಿಕೊಂಡಿದ್ದ ಜೋಡಿ ದೂರಾಗಲು ಮನಸ್ಸು ಮಾಡಿದ್ದಾರೆ ಎಂದಾಗ ಯಾರು ನಂಬಲಿಲ್ಲ. ಆರಂಭದಲ್ಲಿ ಇದು ವದಂತಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಬಳಿಕ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಡಿವೋರ್ಸ್ ಸಂಗತಿ ಖಚಿತಪಡಿಸಿದ್ದರು.

More from Filmibeat

Read more about: naga chaitanya samantha tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X