ನಟ ನಾಗಾರ್ಜುನ ಹೋಲುವ ಈ ಪಾಕಿಸ್ತಾನದ ವ್ಯಕ್ತಿ ಲಕ್ಷ ಲಕ್ಷ ಸಂಪಾದಿಸುತ್ತಿರುವುದು ಹೇಗೆ?

ತೆಲುಗು ನಟ ನಾಗಾರ್ಜುನಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಒಂದ್ಕಾದಲ್ಲಿ ತಮ್ಮ ಅದ್ಭುತ ಸಿನಿಮಾಗಳಿಂದ ನಾಗ್ ಪ್ರೇಕ್ಷಕರ ಮನಗೆದ್ದಿದ್ದರು. ಆದರೆ ಇತ್ತೀಚೆಗೆ ತೆರೆಮೇಲೆ ನಾಗ್ ಸಿನಿಮಾಗಳು ಮ್ಯಾಜಿಕ್ ಮಾಡುತ್ತಿಲ್ಲ. ಆದರೂ ಇವತ್ತಿಗೂ ಮಿನಿಮಮ್ ಗ್ಯಾರೆಂಟಿ ನಟ ಎನಿಸಿಕೊಂಡಿದ್ದಾರೆ.

ತಮ್ಮ ಲುಕ್ ಹಾಗೂ ಫಿಟ್‌ನೆಟ್‌ ಕಾರಣಕ್ಕೆ ಟಾಲಿವುಡ್ ಮನ್ಮಥ ಅಂತ್ಲೇ ನಾಗಾರ್ಜುನ ಜನಪ್ರಿಯರಾಗಿದ್ದಾರೆ. 'ಮನ್ಮಥುಡು' ಎನ್ನುವ ಚಿತ್ರದಲ್ಲೂ ನಾಗ್ ನಟಿಸಿದ್ದರು. ವಯಸ್ಸು 60 ದಾಟಿದರೂ ನಾಗಾರ್ಜುನಾ ಚಾರ್ಮ್ ಕಮ್ಮಿ ಆಗಿಲ್ಲ. ಇವತ್ತಿಗೂ ಸಖತ್ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಯುವ ನಟರಿಗೂ ಪೈಪೋಟಿ ನೀಡುತ್ತಿದ್ದಾರೆ.

Telugu actor Nagarjuna s doppelganger Pakistan vlogger takes Internet by storm

ಒಬ್ಬ ವ್ಯಕ್ತಿಯನ್ನು ಹೋಲುವವರು ಪ್ರಪಂಚದಲ್ಲಿ 7 ಜನ ಇರುತ್ತಾರೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದು ಗೊತ್ತಿಲ್ಲ. ಆದರೆ ಸಿನಿಮಾ ನಟ-ನಟಿಯರನ್ನು ಹೋಲುವವರು ಸಹಜವಾಗಿಯೇ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಜಮಾನದಲ್ಲಿ ನಟ-ನಟಿಯರನ್ನು ಹೋಲುವವರ ವೀಡಿಯೋ, ಫೋಟೊಗಳು ವೈರಲ್ ಆಗಿ ಬಹಳ ಬೇಗ ಸುದ್ದಿಯಾಗುತ್ತದೆ.

ಸದ್ಯ ಪಾಕಿಸ್ತಾನದಲ್ಲಿ ಒಬ್ಬ ವ್ಯಕ್ತಿ ದಿಢೀರ್ ವೈರಲ್ ಆಗಿದ್ದಾನೆ. ಕಾರಣ ಆತ ತೆಲುಗು ನಟ ನಾಗಾರ್ಜುನ ಅವರನ್ನು ಹೋಲುತ್ತಿರುವುದು. ಟಾಲಿವುಡ್ ನಟನ ಹೋಲಿಕೆ ಇರುವುದೇ ಆತನಿಗೆ ಪ್ಲಸ್ ಆಗಿದೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಫುಡ್ ವಾಗ್ಲರ್ ಆಗಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ.

ಅಂದಹಾಗೆ ಆತನ ಹೆಸರು ಜೈನ್ ಅಕ್ಮಲ್ ಖಾನ್ ಅಲಿಯಾಸ್ ಷಿಕಾರಿ ಮಾಸ್. ಒಮ್ಮೆ ಯಾರೋ ನೀವು ಭಾರತದ ಸಿನಿಮಾ ನಟ ನಾಗಾರ್ಜುನ ರೀತಿ ಕಾಣುತ್ತೀಯಾ ಎಂದು ಹೇಳಿದರಂತೆ. ಬಳಿಕ ಗೂಗಲ್ ಮಾಡಿ ನಾಗಾರ್ಜುನ ಬಗ್ಗೆ ತಿಳಿದುಕೊಂಡಿದ್ದಾನೆ. ನಾಗ್ ರೀತಿಯಲ್ಲೇ ಮೇಕಪ್ ಮಾಡಿಕೊಂಡು ವೀಡಿಯೋಗಳನ್ನು ಮಾಡಲು ಆರಂಭಿಸಿದ್ದಾನೆ.

5 ವರ್ಷಗಳಿಂದ ಟಿಕ್‌ಟಾಕ್, ರೀಲ್ಸ್ ಮಾಡುತ್ತಿದ್ದ ಜೈನ್ ಅಕ್ಮಲ್ ಖಾನ್ ಬಳಿಕ ಫುಡ್ ವಾಗ್ಲರ್ ಆಗಿ ಪಾಕಿಸ್ತಾನದಲ್ಲಿ ಜನಪ್ರಿಯನಾಗಿದ್ದಾನೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಕ್ಮಲ್ ಖಾನ್ ಮಾತನಾಡಿದ್ದು ತನ್ನ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾನೆ. ನಾನು ಭಾರತದ ನಟನ ರೀತಿ ಕಾಣುವುದು ನನಗೆ ಪ್ಲಸ್ ಆಗಿದೆ. ಫುಡ್ ವಿಡಿಯೋಗಳನ್ನು ಮಾಡುತ್ತಾ ತಿಂಗಳಿಗೆ 4ರಿಂದ 5 ಲಕ್ಷ ಸಂಪಾದಿಸುತ್ತಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಸದ್ಯ ಇದೇ ವಿಚಾರ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಪಾಕಿಸ್ತಾನದಲ್ಲಿ ನಾಗ್ ಕ್ರೇಜ್‌ ನೋಡಿ ಅಭಿಮಾನಿಗಳು ಕಾಲರ್ ಎಗರಿಸುತ್ತಿದ್ದಾರೆ.

ಇನ್ನು ನಾಗಾರ್ಜುನ ಕೊನೆಯದಾಗಿ 'ನಾ ಸಾಮಿ ರಂಗ' ಚಿತ್ರದಲ್ಲಿ ನಟಿಸಿದ್ದರು. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಕಂಡ ಈ ಚಿತ್ರದಲ್ಲಿ ಕನ್ನಡ ನಟಿ ಆಶಿಕಾ ರಂಗನಾಥ್ ನಾಯಕಿಯಾಗಿ ಮಿಂಚಿದ್ದರು. ತಂದೆ ಅಕ್ಕಿನೇನಿ ನಾಗೇಶ್ವರರಾವ್ ಹಾದಿಯಲ್ಲೇ ನಾಗ್ ಚಿತ್ರರಂಗ ಪ್ರವೇಶಿಸಿದರು. 80ರ ದಶಕದ ಕೊನೆಗೆ ತೆಲುಗು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.

ಗೀತಾಂಜಲಿ, ಶಿವ, ನಿನ್ನೆ ಪೆಳ್ಳಾಡತಾ, ಅನ್ನಮಯ್ಯ, ಮಾಸ್, ಸೂಪರ್, ಡಾನ್, ಮನ್ಮಥುಡು ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಗಾರ್ಜುನ ಮಕ್ಕಳಾದ ನಾಗಚೈತನ್ಯಾ ಹಾಗೂ ಅಖಿಲ್ ಅಕ್ಕಿನೇನಿ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ಇನ್ನು ತಮ್ಮದೇ ಸ್ವಂತ ಸಿನಿಮಾ ನಿರ್ಮಾಣ ಸ್ಟುಡಿಯೋ ಹಾಗೂ ಬ್ಯಾನರ್ ಹೊಂದಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿ ಕೂಡ ನಾಗಾರ್ಜುನ ನಟಿಸಿದ್ದಾರೆ.

More from Filmibeat

English summary
Meet tollywood actor Nagarjuna's doppelganger Pakistan vlogger;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X