ನಾಮಪತ್ರ ಸಲ್ಲಿಸಿದ ನಟ ಬಾಲಕೃಷ್ಣ; ಒಟ್ಟು ಆಸ್ತಿ ಮೌಲ್ಯ, ಸಾಲದ ವಿವರ ಬಹಿರಂಗ

ತೆಲುಗು ನಟ ಬಾಲಕೃಷ್ಣ ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಕರ್ನಾಟಕದ ಗಡಿಯ ಹಿಂದೂಪುರ ವಿಧಾನಸಭೆ ಕ್ಷೇತ್ರದಿಂದ ಬಾಲಯ್ಯ 3ನೇ ಬಾರಿ ಕಣಕ್ಕಿಳಿಸಿದ್ದಾರೆ. ಟಿಡಿಪಿ ಅಭ್ಯರ್ಥಿಯಾಗಿ ಈ ಬಾರಿಯೂ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಸದ್ಯ ಲೋಕಸಭೆ ಚುನಾವಣೆಯ ಜೊತೆಗೆ 4 ರಾಜ್ಯಗಳ ವಿಧಾನಸಭೆ ಚುನಾವಣೆ ಕೂಡ ನಡೀತಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ. ಆಂಧ್ರದ ಹಿಂದೂಪುರ ಕ್ಷೇತ್ರದಿಂದ ಹಾಲಿ ಶಾಸಕ, ನಟ ನಂದಮೂರಿ ಬಾಲಕೃಷ್ಣ ಅಖಾಡಕ್ಕಿಳಿದಿದ್ದಾರೆ.

telugu Actor nandamuri Balakrishna filed nomination he declares his family assets

ನಟ ಬಾಲಕೃಷ್ಣ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆದಾಯ, ಆಸ್ತಿ, ಸಾಲದ ಮಾಹಿತಿ ನೀಡಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿಯ ಜತೆಗೆ ಸಾಲವೂ ಬಾಲಯ್ಯ ಅವರ ಮೇಲಿದೆ. ಅಷ್ಟೇ ಅಲ್ಲ ತಮಗಿಂತ ತಮ್ಮ ಪತ್ನಿ ಹೆಸರಲ್ಲಿ ಹೆಚ್ಚು ಆಸ್ತಿ ಇರುವ ಬಗ್ಗೆ ನಮೂದಿಸಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

ಬಾಲಕೃಷ್ಣ ಅವರು 81 ಕೋಟಿ ರೂ, ಮೌಲ್ಯದ ಆಸ್ತಿ ಹೊಂದಿದ್ದರೆ, 9 ಕೋಟಿ 9 ಲಕ್ಷ ರೂ. ಸಾಲವಿದೆ ಎಂದು ನಾಮಪತ್ರ ಸಲ್ಲಿಕೆ ವೇಳೆ ಬಾಲಯ್ಯ ವಿವರ ನೀಡಿದ್ದಾರೆ. ಅವರ ಪತ್ನಿ ವಸುಂಧರಾ ಅವರ ಆಸ್ತಿ ಮೌಲ್ಯ 140 ಕೋಟಿ 38 ಲಕ್ಷ 83 ಸಾವಿರ ರೂ. ಎನ್ನುವುದು ಗಮನಾರ್ಹ. ಹೆಚ್ಚು ಕಡಿಮೆ ಪತಿಗಿಂತ ಪತ್ನಿ ಆಸ್ತಿ ದುಪ್ಪಟ್ಟು ಎನ್ನುವಂತಾಗಿದೆ.

telugu Actor nandamuri Balakrishna filed nomination he declares his family assets

ಬಾಲಕೃಷ್ಣ ಪುತ್ರ ಮೋಕ್ಷಜ್ಞ ಹೆಸರಿನಲ್ಲಿ 58 ಕೋಟಿ 63 ಲಕ್ಷ 66 ಸಾವಿರ ರೂ. ಆಸ್ತಿ ಇರುವುದಾಗಿ ಮಾಹಿತಿ ಸಲ್ಲಿಸಿದ್ದಾರೆ.

ಒಟ್ಟಾರೆ ಬಾಲಕೃಷ್ಣ ಕುಟುಂಬದ ಹೆಸರಿನಲಿ 280.64 ಕೋಟಿ ರೂ. ಚರಾಸ್ತಿ ಸ್ಥಿರಾಸ್ತಿ ಇದೆ. ಅಲ್ಲದೇ 13.73 ಕೋಟಿ ರೂ. ಸಾಲ ಇರುವುದಾಗಿ ಅಧಿಕೃವಾಗಿ ಘೋಷಿಸಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಮೇ 13ರಂದು ಸಾರ್ವತ್ರಿಕ ಚುನಾವಣೆ ಮತದಾನ ನಡೆಯಲಿದೆ. ಸದ್ಯ ತಮ್ಮ 109ನೇ ಚಿತ್ರದಲ್ಲಿ ನಟ ಬಾಲಯ್ಯ ಬಣ್ಣ ಹಚ್ಚಿದ್ದಾರೆ. ಚುನಾವಣೆ ಕಾರಣ ಕೆಲ ದಿನಗಳ ಕಾಲ ಚಿತ್ರೀಕರಣದಿಂದ ವಿರಾಮ ಪಡೆದಿದ್ದಾರೆ. ಚುನಾವಣೆ ಬಳಿಕ ಬಾಲಕೃಷ್ಣ ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಂಧ್ರ ವಿಧಾನಸಭೆ ಚುನಾವಣೆ ಈ ಬಾರಿ ನಿರೀಕ್ಷ ಮೂಡಿಸಿದೆ. ಹಾಲಿ ಸಿಎಂ ಜಗನ್‌ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್ ವಿರುದ್ಧ ಟಿಡಿಪಿ, ಬಿಜೆಪಿ ಹಾಗೂ ಜನಸೇನಾ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಶತಾಯ ಗತಾಯ ಜಗನ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲು 3 ಪಕ್ಷಗಳು ಪ್ರಯತ್ನಿಸುತ್ತಿದೆ.

ಹಿಂದೂಪುರ ಟಿಡಿಪಿ ಭದ್ರಕೋಟೆ. ಹಾಗಾಗಿ ನಟ ಬಾಲಕೃಷ್ಣ ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಆಗುತ್ತಾರೆ ಎನ್ನುವ ನಿರೀಕ್ಷೆಯಿದೆ. 2014 ಹಾಗೂ 2019ರ ಆಂಧ್ರ ವಿಧಾನಸಭೆ ಚುನವಾಣೆಯಲ್ಲಿ ಸ್ಪರ್ಧಿಸಿ ಬಾಲಯ್ಯ 2 ಬಾರಿ ಗೆದ್ದಿದ್ದರು.

More from Filmibeat

English summary
Balakrishna filed nomination in hindupur; Here's actor and wife, son's assets, debts details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X