For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಆಂತಕದ ನಡುವೆಯೂ ಟೊರಾಂಟೊ ಸಿನಿಮೋತ್ಸವಕ್ಕೆ ಹೊರಟ ನಾನಿ ಮತ್ತು ಶ್ರದ್ಧಾ

  |

  ಕೊರೊನಾ ಆತಂಕದ ನಡುವೆಯೂ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಫೆಸ್ಟಿಪಲ್ ಟೊರಾಂಟೊಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ವಿಶೇಷ ಅಂದರೆ ಟಾಲಿವುಡ್ ನಲ್ಲಿ ಕಳೆದ ವರ್ಷ ಸದ್ದು ಮಾಡಿದ್ದ ಜೆರ್ಸಿ ಸಿನಿಮಾ ಟೊರಾಂಟೊ ಫಿಲ್ಮ್ ಫೆಸ್ಟ್ ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ವಿಚಾರ ಸಿನಿಮಾತಂಡಕ್ಕೆ ತುಂಬಾ ಖುಷಿ ತಂದಿದೆ.

  ಟೊರಾಂಟೊ ಫಿಲ್ಮ್ ಫೆಸ್ಟಿವಲ್ ಇದೆ ತಿಂಗಳು ಆಗಸ್ಟ್ 9 ರಿಂದ 15ರವರೆಗೆ ನಡೆಯಲಿದೆ. ಈ ಫೆಸ್ಟಿವಲ್ ನಲ್ಲಿ ಒಟ್ಟು 6 ಭಾರತೀಯ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಈ 6 ಸಿನಿಮಾಗಳ ಪೈಕಿ ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಜೆರ್ಸಿ ಸಿನಿಮಾ ಕೂಡ ಒಂದು. ಕ್ರೀಡಾ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ನಾನಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ನಟಿ ಶ್ರದ್ಧಾ ನಾನಿ ಪತ್ನಿಯ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ಗೌತಮ್ ಆಕ್ಷನ್ ಕಟ್ ಹೇಳಿದ್ದಾರೆ.

  ಸಂಕಷ್ಟದಲ್ಲಿರುವ ಕನ್ನಡ ಸಹಾಯಕ ನಿರ್ದೇಶಕರ ನೆರವಿಗೆ ನಿಂತ ನಟಿ ಶ್ರದ್ಧಾ ಶ್ರೀನಾಥ್ಸಂಕಷ್ಟದಲ್ಲಿರುವ ಕನ್ನಡ ಸಹಾಯಕ ನಿರ್ದೇಶಕರ ನೆರವಿಗೆ ನಿಂತ ನಟಿ ಶ್ರದ್ಧಾ ಶ್ರೀನಾಥ್

  ದಕ್ಷಿಣ ಭಾರತೀಯ ಸಿನಿಮಾ ಪ್ರಿಯರ ಹೃದಯ ಗೆದ್ದಿರುವ ಜೆರ್ಸಿ ಸಿನಿಮಾ ಟೊರಾಂಟೊ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಳ್ಳುತ್ತಿವ ಬಗ್ಗೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಅಂದ್ಹಾಗೆ ಸಿನಿಮಾ ಆಗಸ್ಟ್ 11 ಸಂಜೆ 7.30ಕ್ಕೆ ಪ್ರದರ್ಶನವಾಗುತ್ತಿದೆ.

  ಜೆರ್ಸಿ ಸಿನಿಮಾ ಜೊತೆಗೆ ನಟ ಕಾರ್ತಿ ಅಭಿನಯದ ತಮಿಳಿನ ಕೈದಿ, ಮಲಯಾಳಂನ ಟ್ರಾನ್ಸ್ ಸಿನಿಮಾ ಕೂಡ ಪ್ರದರ್ಶನವಾಗುತ್ತಿದೆ. ಇನ್ನೂ ತೆಲುಗು ಸಿನಿಮಾರಂಗದಲ್ಲಿ ಸದ್ದು ಮಾಡಿದ್ದ ಜರ್ಸಿ ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಬಾಲಿವುಡ್ ನಲ್ಲಿ ಶಾಹಿದ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Telugu Actor Nani and Shraddha Srinath starrer Jersey movie to be screening in toronto film festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X