"ನಮ್ಮ ಬೆಡ್‌ರೂಮ್ ಹಾಗೂ ಬಾತ್‌ರೂಮ್ ಬಗ್ಗೆ ಯಾಕಿಷ್ಟು ಕಾಳಜಿ"? ನಟ ನರೇಶ್ ಪ್ರಶ್ನೆ!
ಕಳೆದ ಕೆಲವು ತಿಂಗಳಿನಿಂದ ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಗ್ಗೆ ಚರ್ಚೆಯಾಗುತ್ತಲೇ ಇದೆ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ತಮ್ಮ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆಂದು ಆರೋಪ ಮಾಡಿದ್ದರು.
ಇಲ್ಲಿಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ ರಿಲೇಷನ್‌ಶಿಫ್ ಬೀದಿಗೆ ಬಂದು ನಿಂತಿದೆ. ಇತ್ತೀಚೆಗೆ ಇಬ್ಬರೂ ಒಂದು ವಿಡಿಯೋ ರಿಲೀಸ್ ಮಾಡಿದ್ದು, ಪರಸ್ಪರ ಚುಂಬಿಸಿಕೊಂಡಿದ್ದರು. ಈ ವಿಡಿಯೋ ಬಳಿಕವೂ ರಮ್ಯಾ ರಘುಪತಿ ಕಿಡಿಕಾರಿದ್ದರು.
ಈಗ ನರೇಶ್ ಸಂದರ್ಶನವೊಂದರಲ್ಲಿ ತಮ್ಮ ವಿರುದ್ಧ ಟ್ರೋಲ್ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. ಹಾಗೇ ವೈಯಕ್ತಿಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಬಗ್ಗೆನೂ ಆಕ್ರೋಶ ಹೊರ ಹಾಕಿದ್ದಾರೆ. ನರೇಶ್ ಪತ್ರಕರ್ತರಿಗೆ ಕೇಳಿರುವ ಪ್ರಶ್ನೆ ಬಗ್ಗೆನೂ ಚರ್ಚೆಯಾಗುತ್ತಿದೆ.

ಮಾಧ್ಯಮಗಳಿಗೆ ನರೇಶ್ ಪಾಠ
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಅಗೌರವ ತೋರುತ್ತಿರುವವರ ವಿರುದ್ಧ ಸಮರ ಸಾರಲು ನರೇಶ್ ತೀರ್ಮಾನಿಸಿದ್ದಾರೆ. ಇಷ್ಟೇ ಅಲ್ಲದೆ ಮೀಡಿಯಾವನ್ನು ಟಾರ್ಗೆಟ್ ಮಾಡಿದ್ದು, ಪತ್ರಿಕೋದ್ಯಮದ ಪಾಠ ಮಾಡಿದ್ದಾರೆಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳು ತಮ್ಮ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಗೌರವ ತೋರಿವೆ ಎಂದು ಆರೋಪ ಮಾಡಿದ್ದಾರೆ.

ನಮ್ಮ ಬೆಡ್‌ರೂಬ್ ಬಗ್ಗೆ ಯಾಕಿಷ್ಟು ಕಾಳಜಿ?
ಪತ್ರಕರ್ತರು ಹಕ್ಕನ್ನು ಮಂದಿಟ್ಟುಕೊಂಡು ಪ್ರಶ್ನೆಗಳನ್ನು ಮಾಡಬಹುದು. ಆದರೆ, ಕೆಲವು ಪತ್ರಕರ್ತರು ನಮ್ಮ ಬೆಡ್ ರೂಮ್ ಹಾಗೂ ಬಾತ್‌ರೂಮ್ ಬಗ್ಗೆ ಪ್ರಶ್ನೆಗಳನ್ನು ಮಾಡುವ ಮೂಲಕ ಅಗೌರವ ನೀಡುತ್ತಿದ್ದಾರೆ. "ಅವರಿಗೆ ನಮ್ಮ ಬೆಡ್ ರೂಮ್ ಹಾಗೂ ಬಾತ್ ರೂಮ್ ಬಗ್ಗೆ ಯಾಕಿಷ್ಟು ಕಾಳಜಿ" ಎಂದು ನರೇಶ್ ಪ್ರಶ್ನೆ ಮಾಡಿದ್ದಾರೆ. ನರೇಶ್ ಹಾಕಿರುವ ಈ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಯಾಗುತ್ತಿದೆ.

ಟ್ರೋಲಿಗರ ವಿರುದ್ಧ ಕಿಡಿ
ನರೇಶ್ ತಮ್ಮ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ಟ್ರೋಲ್ ಮಾಡುವವರ ವಿರುದ್ಧವೂ ಕಿಡಿಕಾರಿದ್ದಾರೆ. ತಮ್ಮ ವಿರುದ್ಧ ಮೀಮ್ಸ್ ಮಾಡುವವರು, ಸೋಶಿಯಲ್ ಮೀಡಿಯಾದಲ್ಲಿ ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ಟ್ರೋಲ್ ಪೇಜ್‌ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದಾಗಿ ನರೇಶ್ ಹೇಳಿದ್ದಾರೆ. ಹಾಗೇ ತಮ್ಮ ಮುಂದಿನ ಹೆಜ್ಜೆ ಏನು? ಅನ್ನೋದನ್ನು ಶೀಘ್ರದಲ್ಲೇ ಮಾಧ್ಯಮಗಳಿಗೆ ತಿಳಿಸುವುದಾಗಿಯೂ ನರೇಶ್ ಹೇಳಿದ್ದಾರೆ.

ನರೇಶ್, ಪವಿತ್ರಾ ಮ್ಯಾರೇಜ್ ಸ್ಟೋರಿಯೇನು?
ಟಾಲಿವುಡ್ ಹಿರಿಯ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆ ಬಗ್ಗೆನೂ ಸುದ್ದಿಯಾಗುತ್ತಿದೆ. ಕೆಲವು ಮಾಧ್ಯಮಗಳು ನರೇಶ್ ಹಾಗೂ ಪವಿತ್ರಾ ಲೋಕೇಶ್ ಶೀಘ್ರದಲ್ಲಿಯೇ ಮದುವೆ ಆಗುತ್ತಾರೆಂದು ವರದಿ ಮಾಡಿವೆ. ಇತ್ತ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೊಂದು ನರೇಶ್ ಹಾಗೂ ಮೂರನೇ ಪತ್ನಿ ರಮ್ಯಾ ಇಬ್ಬರೂ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣ ಮುಂದೆ ಯಾವ ಹಂತ ತಲುಪುತ್ತೆ ಕುತೂಹಲವಿದೆ.


Click it and Unblock the Notifications











