'ಮತ್ತೆ ಮದುವೆ'ಗೆ ಬ್ರೇಕ್: ಆತ್ಮ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಲೈಸೆನ್ಸ್ ಕೇಳಿ ನರೇಶ್ ಅರ್ಜಿ
ಆತ್ಮ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಲೈಸೆನ್ಸ್ ಕೇಳಿ ತೆಲುಗು ನಟ ನರೇಶ್ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿಗೆ ನಟಿ ಪವಿತ್ರಾ ಲೋಕೇಶ್ ಜೊತೆಗಿನ ಲಿವ್ ಇನ್‌ರಿಲೇಷನ್‌ಶಿಪ್ ವಿಚಾರಕ್ಕಾಗಿ ನರೇಶ್ ಸುದ್ದಿ ಆಗಿದ್ದರು. ಪುಟ್ಟಪರ್ತಿ ಎಸ್‌ಪಿ ಮಾಧವರೆಡ್ಡಿ ಅವರನ್ನು ಭೇಟಿ ಮಾಡಿ ಅವರು ಈ ಬಗ್ಗೆ ಚರ್ಚಿಸಿದ್ದಾರೆ. ನರೇಶ್ ತಮ್ಮ 3ನೇ ಪತ್ನಿಗೆ ಡಿವೋರ್ಸ್ ನೀಡುವ ವಿಚಾರದಲ್ಲಿ ಬಾರಿ ವಿವಾದ ಸೃಷ್ಟಿಯಾಗಿತ್ತು.
ನಟ ನರೇಶ್ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಅವರಿಂದ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ರಮ್ಯಾ ಮಗನ ಭವಿಷ್ಯದ ದೃಷ್ಟಿಯಿಂದ ನಾನು ಡಿವೋರ್ಸ್ ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರದಲ್ಲಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡಿದ್ದರು. ನರೇಶ್ ಹೆಣ್ಣು ಪೀಡಕ, ನೀಲಿ ಚಿತ್ರ ನೋಡ್ತಾನೆ ಅಂತೆಲ್ಲಾ ರಮ್ಯಾ ಆರೋಪಿಸಿದ್ದರು. ಇದಕ್ಕೆ ನಟ ನರೇಶ್ ತಿರುಗೇಟು ನೀಡಿದ್ದರು. ನನ್ನ ಫೋನ್ ಟ್ಯಾಪ್ ಮಾಡಿದ್ದಾಳೆ, ಬ್ಲ್ಯಾಕ್ ಮೇಲ್ ಮೆಟೀರಿಯಲ್ ಸಿದ್ಧಪಡಿಸಿದ್ದಾಳೆ, ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಎಂದು ಪ್ರತ್ಯಾರೋಪ ಮಾಡಿದ್ದರು.

ಇನ್ನು ನರೇಶ್ ತಮ್ಮದೇ ಜೀವನದ ಘಟನೆಗಳನ್ನು ಸೇರಿಸಿ 'ಮಳ್ಳಿ ಪೆಳ್ಳಿ' ಸಿನಿಮಾ ಮಾಡಿದ್ದರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದಿತ್ತು. ಆದರೆ ಈ ಸಿನಿಮಾ ವಿರುದ್ಧ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದರು. ಹಾಗಾಗಿ ಸದ್ಯ ಓಟಿಟಿಯಲ್ಲಿ 'ಮಳ್ಳಿ ಪೆಳ್ಳಿ' ಸಿನಿಮಾ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ.
ಆತ್ಮರಕ್ಷಣೆಗಾಗಿ ಗನ್ ಪರವಾನಗಿ
ತನಗೆ ಜೀವ ಬೆದರಿಕೆ ಇದೆ. ಹಾಗಾಗಿ ಗನ್ ಪರವಾಗಿ ನೀಡುವಂತೆ ನಟ ನರೇಶ್ ಕೋರಿದ್ದಾರೆ. ಗುರುವಾರ ಶ್ರೀಸತ್ಯಸಾಯಿ ಜಿಲ್ಲಾ ಎಸ್ಪಿ ಮಾಧರೆಡ್ಡಿಗೆ ಅರ್ಜಿ ಸಲ್ಲಿಸಿದ್ದಾರೆ. ಪುಟ್ಟಪರ್ತಿಯಲ್ಲಿನ ಜಿಲ್ಲಾ ಪೊಲೀಸ್ ಕಚೇರಿಗೆ ಗುರುವಾರ ಬಂದು ಎಸ್ಪಿ ಭೇಟಿ ಮಾಡಿದ್ದಾರೆ. ನಕ್ಸಲ್ಸ್ ಹಿಟ್ ಲಿಸ್ಟ್‌ನಲ್ಲಿ ಇರುವುದರಿಂದ ತನಗೆ 2008ರಲ್ಲಿ ಗನ್ ಲೈಸೆನ್ಸು ನೀಡಲಾಗಿತ್ತು. ಪ್ರಸ್ತುತ ಈಗ ಕೂಡ ಜೀವಹಾನಿ ಇರುವುರಿಂದ ಲೈಸೆನ್ಸ್ ರೆನ್ಯುವಲ್ ಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿದ ಎಸ್ಪಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿ ಕಳುಹಿಸಿದ್ದಾರೆ.
'ಮಳ್ಳಿ ಪೆಳ್ಳಿ' ಚಿತ್ರಕ್ಕೆ ರಮ್ಯಾ ಬ್ರೇಕ್
ಇನ್ನು ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ 'ಮಳ್ಳಿ ಪೆಳ್ಳಿ' ಸಿನಿಮಾ ಇತ್ತೀಚೆಗೆ ಓಟಿಟಿಗೆ ಬಂದಿತ್ತು. ಆದರೆ ಇದರ ವಿರುದ್ಧ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು ಟಾರ್ಗೆಟ್ ಮಾಡಿ ಸಿನಿಮಾ ಮಾಡಿದ್ದಾರೆ. ತಮ್ಮನ್ನು ಸಿನಿಮಾದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ. ಹಾಗಾಗಿ ಚಿತ್ರದ ಸ್ಟ್ರೀಮಿಂಗ್ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಅಹಾ ಹಾಗೂ ಅಮೇಜಾನ್ ಪ್ರೈಂ ವಿಡಿಯೋ ಫ್ಲಾಟ್‌ಪಾರ್ಮ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಅಮೇಜಾನ್ ಸಿನಿಮಾ ಸ್ಟ್ರೀಮಿಂಗ್ ನಿಲ್ಲಿಸಿದೆ.
ಪವಿತ್ರಾ ಜೊತೆ ಲಿವ್ ಇನ್‌ರಿಲೇಷನ್‌ಶಿಪ್
ತಮ್ಮ ದಾಂಪತ್ಯದಲ್ಲಿ ಪವಿತ್ರಾ ಲೋಕೇಶ್ ಹುಳಿ ಹಿಂಡಿದ್ದಾರೆ ಎಂದು ಕಳೆದ ವರ್ಷ ನರೇಶ್ 3ನೇ ಪತ್ನಿ ಆರೋಪಿಸಿದ್ದರು. ಈ ಸಂಬಂಧ ಮೂರು ಜನ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ಮೊದಲಿಗೆ ನಾವಿಬ್ಬರು ಸ್ನೇಹಿತರು, ಅವರ ದಾಂಪತ್ಯಕ್ಕೂ ನನಗೂ ಸಂಬಂಧ ಇಲ್ಲ ಎಂದು ಪವಿತ್ರಾ ಹೇಳಿದ್ದರು. ಆದರೆ ಇತ್ತೀಚೆಗೆ 'ಮಳ್ಳಿ ಪೆಳ್ಳಿ' ಸಿನಿಮಾ ಪ್ರಮೋಷನ್ ವೇಳೆ ಇಬ್ಬರು ಲಿವ್ ಇನ್‌ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ನರೇಶ್- ಪವಿತ್ರಾ ಒಪ್ಪಿಕೊಂಡಿದ್ದರು.
3 ವರ್ಷಗಳ ಲವ್ ಸ್ಟೋರಿ
ಇತ್ತೀಚೆಗೆ ಸಂದರ್ಶನಗಳಲ್ಲಿ ನರೇಶ್ ಹಾಗೂ ಪವಿತ್ರಾ ತಮ್ಮ ಲವ್‌ಸ್ಟೋರಿ ಬಗ್ಗೆ ಮಾತನಾಡಿದ್ದರು. ಹಲವು ವರ್ಷಗಳಿಂದ ಇಬ್ಬರು ತೆಲುಗು ಸಿನಿಮಾಗಳಲ್ಲಿ ಪೋಷಕ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. 'ಸಮ್ಮೋಹನಂ' ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಒಡನಾಟ ಹೆಚ್ಚಾಗಿತ್ತು. ಅದೇ ಸಮಯದಲ್ಲಿ ನಾನು ಸಾಂಸಾರಿಕ ಜೀವನದಲ್ಲಿ ಬೇಸತ್ತಿದ್ದೆ. ಆಕೆ ಕೂಡ ಸುಚೇಂದ್ರ ಪ್ರಸಾದ್‌ರಿಂದ ದೂರಾಗಿ ಇದೇ ಸ್ಥಿತಿಯಲ್ಲಿ ಇದ್ದರು. ಇದೇ ಸಮಯದಲ್ಲಿ ನಾನು ಆಕೆಗೆ ಪ್ರಪೋಸ್ ಮಾಡಿದೆ. ಬಹಳ ದಿನಗಳ ನಂತರ ಆಕೆ ಅದನ್ನು ಒಪ್ಪಿಕೊಂಡಿದ್ದಳು ಎಂದು ನರೇಶ್ ತಮ್ಮ ಲವ್ ಸ್ಟೋರಿ ಬಿಚ್ಚಿದ್ದರು.


Click it and Unblock the Notifications











