ರಮ್ಯಾ- ನರೇಶ್ ಫ್ಯಾಮಿಲಿ ಹೈಡ್ರಾಮಾದಲ್ಲಿ ಭಾರೀ ಟ್ವಿಸ್ಟ್: 10 ಕೋಟಿ ರೂ.ಗೆ ಸೆಟ್ಲ್‌ಮೆಂಟ್?
ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ವಿರುದ್ಧ ತೆಲುಗು ನಟ ನರೇಶ್ ಮತ್ತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾದ ಮರು ತಿಂಗಳಿನಿಂದಲೂ ರಮ್ಯಾ ನನಗೆ ಹಿಂಸೆ ಕೊಡುತ್ತಿದ್ದಾಳೆ ಎಂದಿದ್ದಾರೆ. ಇದೀಗ ರಮ್ಯಾಳಿಂದ ನನಗೆ ಜೀವ ಭಯ ಇದೆ ನಟ ನರೇಶ್ ಕೋರ್ಟ್ ಮೆಟ್ಟಿಲೇರಿದ್ದು, ಶೀಘ್ರ ಡಿವೋರ್ಸ್ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ನನ್ನನ್ನು ಕೊಲ್ಲಲು ಮನೆಯ ಬಳಿ ಸಂಚು ನಡೆದಿದೆ ಎಂದು ಪಿಟಿಷನ್ ಹಾಕಿದ್ದಾರೆ.
ತೆಲುಗು ನಟ ನರೇಶ್ ಹಾಗೂ ತ್ನಿ ರಮ್ಯಾ ರಘುಪತಿ ಆರೋಪ ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಟ ನರೇಶ್ ನಟಿ ಪವಿತ್ರಾ ಲೋಕೇಶ್‌ರನ್ನು ಮದುವೆ ಆಗಲು ಮುಂದಾಗಿದ್ದಾರೆ ಎನ್ನುವುದೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ. ಪವಿತ್ರಾ ಲೋಕೇಶ್ ಕಾರಣದಿಂದ ನನ್ನ ಹಾಗೂ ನರೇಶ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ರಮ್ಯಾ ಆರೋಪಿಸುತ್ತಾ ಬಂದಿದ್ದಾರೆ. ಇನ್ನು ಮೈಸೂರಿನ ಹೋಟೆಲ್ ಕೋಣೆಯೊಂದರಲ್ಲಿ ನರೇಶ್- ಪವಿತ್ರಾ ಒಟ್ಟಿಗೆ ರಮ್ಯಾ ಕೈಲಿ ಸಿಕ್ಕಿ ಹಾಕಿಕೊಂಡ ಮೇಲೆ ವಿವಾದ ಮತ್ತಷ್ಟು ಕಾವು ಪಡೆದುಕೊಂಡಿತ್ತು.
ಹೊಸ ವರ್ಷದ ಸಂಭ್ರಮದಲ್ಲಿ ನರೇಶ್- ಪವಿತ್ರಾ ಲಿಪ್‌ಲಾಕ್ ವಿಡಿಯೋ ಮಾಡಿ ಇಬ್ಬರು ಶೀಘ್ರದಲ್ಲೇ ಮದುವೆ ಆಗುತ್ತೀವಿ ಎನ್ನುವ ಅರ್ಥದಲ್ಲಿ ಸಂದೇಶ ರವಾನಿಸಿದ್ದರು. ಇದೀಗ ರಮ್ಯಾ- ನರೇಶ್ ಹೈಡ್ರಾಮಾ ಎಪಿಸೋಡ್‌ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ರಮ್ಯಾ ವಿರುದ್ಧ್ ನರೇಶ್ ಆರೋಪ
"ಮದುವೆ ಆದ ದಿನದಿಂದಲೂ ರಮ್ಯಾ ನನಗೆ ಹಿಂಸೆ ನೀಡುತ್ತಿದ್ದಾಳೆ. ಸರಿಯಾಗಿ ಊಟ ಕೂಡ ಹಾಕುತ್ತಿರಲಿಲ್ಲ. ನನಗಿಂತ ಆಕೆಗೆ ನನ್ನ ಬಳಿ ಇರುವ ಹಣ, ಆಸ್ತಿಯ ಮೇಲೆ ವ್ಯಾಮೋಹ ಹೆಚ್ಚಾಗಿತ್ತು. ಪ್ರತಿ ಫಂಕ್ಷನ್‌ನಲ್ಲೂ ಕುಡಿದು ಹೇಗೇಗೋ ಆಡುತ್ತಿದ್ದಳು. ಮಗನನ್ನು ಕೂಡ ಸುಮ್ಮನೆ ಹೊಡೆಯುತ್ತಿದ್ದಳು. ನಮ್ಮ ಮನೆಯಲ್ಲಿ ಸೇರಿಕೊಂಡು ಹಣಕ್ಕಾಗಿ ಪೀಡುಸುತ್ತಿದ್ದಾಳೆ, ಆಕೆ ಮನೆಯಿಂದ ಹೊರಗೆ ಹೋಗುವಂತೆ ಆದೇಶ ನೀಡಬೇಕು. ಬೇಗ ಆಕೆಯಿಂದ ಡಿವೋರ್ಸ್ ಕೊಡಿಸಿ" ಎಂದು ನರೇಶ್ ಕೋರ್ಟ್‌ನಲ್ಲಿ ಪಿಟಿಷನ್ ಹಾಕಿದ್ದಾರೆ.

ನನ್ನ ಫೋನ್ ಹ್ಯಾಕ್ ಮಾಡಿದ್ದಾರೆ
"2010 ಮಾರ್ಚ್ 3ರಂದು ನಮ್ಮ ಮದುವೆ ನಡೆಯಿತು. ನಾನು ನಾಯಾ ಪೈಸೆ ವರದಕ್ಷಿಣೆ ಪಡೆದಿಲ್ಲ. ಆದರೆ ನನಗೆ ಗೊತ್ತಿಲ್ಲದೇ ನನ್ನ ಹೆಸರು ಬಳಸಿ ರಮ್ಯಾ ಸಾಲು ಮಾಡಿದ್ದಾಳೆ. ಬ್ಯಾಂಕ್‌ನಿಂದಲೂ ಸಾಲ ಪಡೆದಿದ್ದಾಳೆ. ನನ್ನ ಆಸ್ತಿ ಎಲ್ಲಾ ಕಬಳಿಸುವ ಯತ್ನ ನಡೆಸಿದ್ದಾಳೆ. ಪೊಲೀಸ್ ಆಫಿಸರ್ ಸಹಾಯದಿಂದ ನನ್ನ ಫೋನ್ ಹ್ಯಾಕ್ ಮಾಡಿಸಿದ್ದಾಳೆ. ನನ್ನ ಪರ್ಸನಲ್ ಮೆಸೇಜ್‌ಗಳನ್ನು ನೋಡುತ್ತಿದ್ದಾಳೆ. ಈ ಕಾಟ ತಾಳಲು ಆಗುತ್ತಿಲ್ಲ. ರಮ್ಯಾಳಿಂದ ನಾನು ನರಕಯಾತನೆ ಅನುಭವಿಸುವಂತಾಗಿದೆ. ಜೀವ ಭಯ ಇದೆ. ಸುಪಾರಿ ಗ್ಯಾಂಗ್ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ. ಒಬ್ಬನೇ ಎಲ್ಲೂ ಹೋಗಲು ಆಗುತ್ತಿಲ್ಲ. ಬೇಗ ಡಿವೋರ್ಸ್ ಕೊಡಿಸಿ" ಎಂದಿದ್ದಾರೆ.

10 ಕೋಟಿ ಕೊಟ್ರೆ ಸೆಟ್ಲ್‌ಮೆಂಟ್?
ಇನ್ನು ರಮ್ಯಾ - ನರೇಶ್ ಪ್ರಕರಣದಲ್ಲಿ ಮಾಜಿ ಮಂತ್ರಿ ರಘುವೀರಾ ರೆಡ್ಡಿ ಹೆಸರು ಕೂಡ ಕೇಳಿಬಂದಿದೆ. ರಘುವೀರ ರೆಡ್ಡಿಯವರ ಮೂಲಕ 10 ಕೋಟಿಗೆ ಸೆಟ್ಲ್‌ಮೆಂಟ್ ಮಾಡಿಕೊಳ್ಳುವಂತೆ ವ್ಯವಹಾರ ಕುದುರಿಸಲು ರಮ್ಯಾ ಪ್ರಯತ್ನಿಸುತ್ತಿದ್ದಾರೆ ಎಂದು ನರೇಶ್ ಆರೋಪಿಸಿದ್ದಾರೆ. ರಮ್ಯಾಗೆ ರಘುವೀರ ರೆಡ್ಡಿ ಸಂಬಂಧಿಕರು. ಅವರ ಹೆಸರು ಹೇಳಿ ರಮ್ಯಾ ಬೆದರಿಸುತ್ತಿದ್ದಾಳೆ ಎಂದು ನರೇಶ್ ಆರೋಪಿಸಿದ್ದಾರೆ.

ರಮ್ಯಾ ರಘುಪತಿ ಏನು ಹೇಳುತ್ತಾರೆ?
ನರೇಶ್ ಆರೋಪಗಳಿಗೆಲ್ಲಾ ರಮ್ಯಾ ತಿರುಗೇಟು ನೀಡುತ್ತಾ ಬಂದಿದ್ದಾರೆ. ಮಗನಿಗಾಗಿ ನನಗೆ ನರೇಶ್ ಬೇಕು, ನನಗೆ ಡಿವೋರ್ಸ್ ಬೇಡ ಎಂದು ಹೇಳುತ್ತಾ ಬರುತ್ತಿದ್ದಾರೆ. ನಾನು ಡಿವೋರ್ಸ್‌ಗೆ ಒಪ್ಪಿಲ್ಲ, ಒಪ್ಪಲ್ಲ, ಯಾವುದೇ ಸೆಟ್ಲ್‌ಮೆಂಟ್ ಬೇಡ ಎನ್ನುತ್ತಿದ್ದಾರೆ. ನರೇಶ್- ಪವಿತ್ರಾ ಮದುವೆ ಆಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈಗ ನರೇಶ್ ಹೊಸ ಆರೋಪಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದುನೋಡ ಬೇಕು.


Click it and Unblock the Notifications











