For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಖ್ಯಾತ ನಟ ನರ್ಸಿಂಗ್ ಯಾದವ್ ನಿಧನ

  |

  ತೆಲುಗು ಸಿನಿಮಾರಂಗದ ಖ್ಯಾತ ಕಲಾವಿದ ನರ್ರಿಂಗ್ ಯಾದವ್ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ನರ್ಸಿಂಗ್ ಯಾದವ್ ನಿನ್ನೆ ಸಂಜೆ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನರ್ಸಿಂಗ್ ಯಾದವ್ ಅವರಿಗೆ 52 ವರ್ಷವಾಗಿತ್ತು.

  ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ನರ್ಸಿಂಗ್ ಯಾದವ್ ಅವರನ್ನು ಹೈದರಾಬಾದ್ ನ ಸೋಮಾಜಿಗೊಡದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನರ್ಸಿಂಗ್ ಯಾದವ್ ಕೊನೆಯುಸಿರೆಳೆದಿದ್ದಾರೆ.

  'ಮಾಸ್ಟರ್', 'ಬಿಗಿಲ್' ಚಿತ್ರಗಳಲ್ಲಿ ನಟಿಸಿದ್ದ ಅರುಣ್ ಅಲೆಕ್ಸಾಂಡರ್ ನಿಧನ

  ನರ್ಸಿಂಗ್ ಯಾದವ್ ಅನೇಕ ಸಿನಿಮಾಗಳಲ್ಲಿ ಹಾಸ್ಯ ಮತ್ತು ಖಳನಟನಾಗಿ ಮಿಂಚಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಸುಮಾರು 30ಕ್ಕು ಹೆಚ್ಚು ಸಿನಿಮಾಗಳಲ್ಲಿ ಬಣ್ಣಹಚ್ಚುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. 1968ರಲ್ಲಿ ಜನಿಸಿದ ನರ್ಸಿಂಗ್ ಯಾದವ್, ಹೇಮಹೆಮಿಲು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಮೊಮೆಂಟ್ ಸಿನಿಮಾದಲ್ಲಿ ನಟಿಸಿದ್ದ ನರ್ಸಿಂಗ್ ಯಾದವ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು.

  ಸಂದರ್ಶನವೊಂದರಲ್ಲಿ ರಾಮ್ ಗೋಪಾಲ್ ವರ್ಮ ಬಗ್ಗೆ ಮಾತನಾಡಿದ್ದ ನರ್ಸಿಂಗ್ ಯಾದವ್, 'ನಾನು ನಟನೆ ಹೇಗೆ ಮಾಡಬೇಕು ಎಂಬುದನ್ನು ಅವರಿಂದ ಕಲಿತುಕೊಂಡೆ' ಎಂದು ಹೇಳಿದ್ದರು.

  ಯಾದವ್ ಮಾಯಲೋಡು, ಅಲ್ಲರಿ ಪ್ರೇಮಿಕುಡು, ಮುಠಾಮೇಸ್ತ್ರಿ, ಮಾಸ್ಟರ್ , ನವೋಸ್ತಾನಂತೆ ನೆನೋದ್ದಂಟಾನಾ, ಈಡಿಯಟ್, ಪೋಕಿರಿ, ಜಾನಿ ಸೇರಿದಂತೆ ಪ್ರಮುಖ ಸಿನಿಮಾಗಳಲ್ಲಿ ನಟಿಸಿದ್ದಾರೆ. ನರ್ಸಿಂಗ್ ಯಾದವ್ ಕೊನೆಯ ಬಾರಿಗೆ ನರ್ಸಿಂಗ್ ಯಾದವ್ ಚಿರಂಜೀವಿ ಅಭಿನಯದ 150ನೇ ಸಿನಿಮಾ ಖೈದಿ ನಂಬರ್ 150 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನರ್ಸಿಂಗ್ ಯಾದವ್ ಪತ್ನಿ ಚಿತ್ರ ರುತ್ವಿಕ್ ಮತ್ತು ಮಗನನ್ನು ಅಗಲಿದ್ದಾರೆ.

  English summary
  Telugu actor Narsing Yadav passes away at age of 52.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X