Navdeep: ಮಾದಾಪೂರ್ ಡ್ರಗ್ಸ್ ಕೇಸ್.. ಟಾಲಿವುಡ್ ನಟ ನವದೀಪ್‌ ಕೂಡ ಕಸ್ಟಮರ್?

ಟಾಲಿವುಡ್‌ನಲ್ಲಿ ಡ್ರಗ್ಸ್ ದಂಧೆ ಪ್ರಕರಣ ಮತ್ತೆ ಸಂಚಲನ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಬಂಧಿತರಾಗಿರುವ ತೆಲುಗು ಸಿನಿಮಾ ಫೈನಾನ್ಶಿಯರ್ ಕೆ.ವೆಂಕಟರತ್ನಂ ಹಾಗೂ ಮತ್ತೋರ್ವ ಆರೋಪಿ ಕಾಪ ಭಾಸ್ಕರ್ ಬಾಲಾಜಿ ಅವರನ್ನು ವಿಚಾರಣೆ ನಡೆಸಿದ ತೆಲಂಗಾಣ ಮಾದಕ ದ್ರವ್ಯ ನಿಗ್ರಹ ದಳದ (TSNB) ಅಧಿಕಾರಿಗಳು ಅವರಿಂದ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮೂವರು ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದ್ದಾರೆ. ಮಹಬೂಬ್‌ನಗರ ಮಾಜಿ ಸಂಸದ ವಿಠಲ್ ರಾವ್ ಅವರ ಪುತ್ರ ದೇವರಕೊಂಡ ಸುರೇಶ್ ರಾವ್, ಸಿನಿಮಾ ನಿರ್ದೇಶಕ ಅನುಗು ಸುಶಾಂತ್ ರೆಡ್ಡಿ, ಚಿತ್ರರಂಗದೊಂದಿಗೆ ಸಂಪರ್ಕ ಹೊಂದಿರುವ ರಾಮಚಂದ್ ಮತ್ತು ಇತರ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರಿಂದ 11 ಕೋಟಿ ರೂ. ಮೌಲ್ಯದ 8 ಗ್ರಾಂ ಕೊಕೇನ್, 50 ಗ್ರಾಂ ಎಂಡಿಎಂಎ, ಎಕ್ಸ್‌ಟಾಸಿ ಮಾತ್ರೆಗಳು, ಕಾರುಗಳು ಮತ್ತು ಸೆಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Telugu Actor Navdeep reacts on Madhapur drugs case, Im right here

ವೆಂಕಟರತ್ನಂ ಅವರ ಬ್ಯಾಂಕ್ ಖಾತೆ ರೂ. 5.5 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ. ಮಾದಕ ದ್ರವ್ಯ ಖರೀದಿಸಿದ 13 ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ನಾರ್ಕೊಟಿಕ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವದೀಪ್, 'ಶ್ಯಾಡೊ' ಸಿನಿಮಾ ನಿರ್ಮಾಪಕ ಉಪ್ಪಲಪತಿ ರವಿ, ಗಚ್ಚಿಬೌಲಿಯ ಸ್ನಾರ್ಟ್ ಪಬ್ ಮಾಲೀಕ ಸೂರ್ಯ, ಬಂಜಾರಾಹಿಲ್ಸ್‌ನ ಬಿಸ್ಟ್ರೋ ಮತ್ತು ಟೆರ್ರಾ ಕೆಫೆ ಮಾಲೀಕ ಅರ್ಜುನ್, ವಿಶಾಖಪಟ್ಟಣದ ಕಲಹರ್ ರೆಡ್ಡಿ ಮತ್ತಿತರರು ತಲೆಮರೆಸಿಕೊಂಡಿದ್ದಾರೆ ಎಂದು ಟಿಎಸ್‌ಎನ್‌ವೈಎಬಿ ನಿರ್ದೇಶಕ ಸಿವಿ ಆನಂದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ನವದೀಪ್ ಡ್ರಗ್ ವ್ಯವಹಾರದಲ್ಲಿ ಗ್ರಾಹಕನಾಗಿದ್ದ ಎಂದು ಸಿ.ವಿ.ಆನಂದ್ ತಿಳಿಸಿದ್ದು ಆತ ಡ್ರಗ್ಸ್ ಸೇವಿಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೆ ಮಾದಾಪೂರ್ ಡ್ರಗ್ಸ್ ಕೇಸ್‌ನಲ್ಲಿ ನವದೀಪ್ ಹೆಸರು ಕೇಳಿಬಂದಿರೋದು ಸಂಚಲನ ಸೃಷ್ಟಿಸಿದೆ. ಆದರೆ ಪೊಲೀಸರು ಹೇಳುತ್ತಿರುವ ನವದೀಪ್ ನಾನಲ್ಲ ಎಂದು ನಟ ನವದೀಪ್ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ನಟ ನವದೀಪ್ ತೆಲುಗು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಮಾದಾಪೂರ್ ಡ್ರಗ್ಸ್ ಕೇಸ್‌ಗೂ ನನನಗೂ ಯಾವುದೇ ಸಂಬಂಧ ಇಲ್ಲ. ನಾನು ತಲೆಮರೆಸಿಕೊಂಡಿದ್ದೇನೆ ಎನ್ನಲಾಗುತ್ತಿರುವ ಸುದ್ದಿಯನ್ನು ಖಂಡಿಸಿದ್ದಾರೆ. ನಾನು ಎಲ್ಲೂ ಓಡಿ ಹೋಗಿಲ್ಲ. ಸದ್ಯ ಹೈದರಾಬಾದ್‌ನಲ್ಲೇ ಇದ್ದೀನಿ ಎಂದಿದ್ದಾರೆ.

ಈ ಹಿಂದೆ ಕೂಡ ಡ್ರಗ್ಸ್ ಪ್ರಕರಣದಲ್ಲಿ ನಟ ನವದೀಪ್ ಹೆಸರು ಕೇಳಿಬಂದಿತ್ತು. ಇನ್ನು ಸಿವಿ ಆನಂದ್ ಸುದ್ದಿಗೋಷ್ಠಿಯಲ್ಲಿ ನವದೀಪ್ ಎಂದು ಮಾತ್ರ ಹೇಳಿದ್ದಾರೆ. ನಟ ನವದೀಪ್ ಎಂದು ಹೇಳಿಲ್ಲ. ಅವರು ಹೇಳಿರುವ ನವದೀಪ್ ಬೇರೆ ಇರಬಹುದು ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ನಟ ನವದೀಪ್ "ಅದು ನಾನಲ್ಲ ಜಂಟಲ್‌ಮ್ಯಾನ್, ನಾನು ಇಲ್ಲೇ ಇದ್ದೀನಿ. ಮೊದಲು ಸ್ಪಷ್ಟನೆ ತೆಗೆದುಕೊಳ್ಳಿ" ಎಂದಿದ್ದಾರೆ.

ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ನವದೀಪ್ ಕಿರುತೆರೆ ನಿರೂಪಕನಾಗಿಯೂ ಗುರ್ತಿಸಿಕೊಂಡಿದ್ದಾರೆ. ತೆಲುಗು ಬಿಗ್‌ಬಾಸ್ ಸೀಸನ್ ಒಂದರ ಸ್ಪರ್ಧಿಯಾಗಿ ಫೈನಲ್‌ವರೆಗೂ ಹೋಗಿದ್ದರು. 2004ರಲ್ಲಿ 'ಜೈ' ಸಿನಿಮಾ ಮೂಲಕ ನವದೀಪ್ ಟಾಲಿವುಡ್ ಪ್ರವೇಶಿಸಿದ್ದರು. ಬಳಿಕ 'ಗೌತಮ್‌ SSE', 'ಆರ್ಯ-2', 'ಧ್ರುವ', 'ನೆಕ್ಸ್ಟ್ ಏಂಟಿ', 'ರನ್' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಚಿತ್ರರಂಗದಲ್ಲಿ ಆರಕ್ಕೇರದ ಮೂರಕ್ಕಿಳಿಯದ ನಟ ನವದೀಪ್ ಇದೀಗ ಹೊಸ ಅವತಾರದಲ್ಲಿ 'ಲವ್ ಮೌಳಿ' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಸಾಂಗ್ ಟೀಸರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. 'ಈಗಲ್' ಎನ್ನುವ ಮತ್ತೊಂದು ಸಿನಿಮಾ ಕೂಡ ಆತನ ಕೈಯಲ್ಲಿದೆ.

More from Filmibeat

English summary
I Haven’t Escaped, tollywood Actor Navdeep reacts on Madhapur drugs case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X