twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಕೇಸ್‌ ಬಗ್ಗೆ ಪತ್ರಕರ್ತ ಹೇಳಿದ ಮಾತನ್ನು ಖಂಡಿಸಿದ ನಟ ನಿಖಿಲ್

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ಮಾಡುವಂತೆ ಬುಧವಾರ ಸುಪ್ರೀಂಕೋರ್ಟ್ ಆದೇಶಿಸಿದೆ. ಸಿಬಿಐಗೆ ಸುಪ್ರೀಂ ಸೂಚನೆ ನೀಡುತ್ತಿದ್ದ ನಟನ ಅಭಿಮಾನಿಗಳು, ಕುಟುಂಬಸ್ಥರು, ಸ್ನೇಹಿತರು ಎಲ್ಲವೂ ಸಂತಸ ವ್ಯಕ್ತಪಡಿಸಿದ್ದಾರೆ.

    Recommended Video

    Upendra ಬ್ರಹ್ಮ ಚಿತ್ರದಲ್ಲಿನ ಸಾಹಸ ದೃಶ್ಯ ತಯಾರಾದ ಕ್ಷಣಗಳು | Filmibeat Kannada

    ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು, ಕುಟುಂಬಸ್ಥರು ಹಾಗೂ ಅಭಿಮಾನಿಗಳು ಈ ಸಾವಿನ ಹಿಂದಿನ ಸತ್ಯ ಹೊರಬೀಳಬೇಕಿದೆ ಎಂದು ಪ್ರತಿಭಟಿಸಿದ್ದರು. ಈ ಕೇಸ್‌ನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿದ ನಂತರ ಪತ್ರಕರ್ತರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜರ್ನಲಿಸ್ಟ್ ಹೇಳಿದ ಆ ಮಾತನ್ನು ತೆಲುಗು ನಟ ನಿಖಿಲ್ ಸಿದ್ಧಾರ್ಥ್ ಪ್ರಶ್ನಿಸಿದ್ದಾರೆ. ಏನಿದು ವಿವಾದ? ಮುಂದೆ ಓದಿ...

    ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ ನಟ

    ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ ನಟ

    ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದಾರೆ. ಬಾಲಿವುಡ್ ಸ್ಟಾರ್‌ಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ತೆಲುಗು ನಟ ಸಿದ್ಧಾರ್ಥ್ ಸಹ ಟ್ವೀಟ್ ಮಾಡಿ ''ಸುಶಾಂತ್ ಸಾವಿಗೆ ನಿಖರವಾದ ಕಾರಣ ಏನು ಎಂದು ತಿಳಿಯಲಿದೆ'' ಎಂದು ಥಮ್ಸ್ ಅಪ್ ಎಮೋಜಿ ಹಾಕಿದ್ದಾರೆ.

    ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

    'ರಾಷ್ಟ್ರೀಯ ತಮಾಷೆ' ಎಂದ ಪತ್ರಕರ್ತ

    'ರಾಷ್ಟ್ರೀಯ ತಮಾಷೆ' ಎಂದ ಪತ್ರಕರ್ತ

    ಸುಶಾಂತ್ ಸಾವಿನ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದ ಕುರಿತು ಶ್ರೀನಿವಾಸನ್ ಜೈನ್ ಎಂಬ ಪತ್ರಕರ್ತರು ವ್ಯಂಗ್ಯ ಮಾಡಿದ್ದಾರೆ. 'ಸಿಬಿಐ ಮಾತ್ರವೇ? ಇಂಟರ್ಪೋಲ್ ಇಲ್ಲವೇ?' ಎಂದು ಪೋಸ್ಟ್ ಹಾಕಿದ್ದಾರೆ. ಇದಕ್ಕೆ ಪ್ರಣವ್ ಎಂಬ ವ್ಯಕ್ತಿ ಪ್ರತಿಕ್ರಿಯಿಸಿ ''ವ್ಯಕ್ತಿಯೊಬ್ಬರ ಸಾವಿ ಕುರಿತಾದ ಗಂಭೀರವಾದ ವಿಷಯ ಇದು. ನಮ್ಮ ವೈಯಕ್ತಿಕ ಪಕ್ಷಪಾತಗಳು ಇಲ್ಲಿ ಬರಬಾರದು' ಎಂದಿದ್ದಾರೆ. ಅದಕ್ಕೆ ಶ್ರೀನಿವಾಸನ್ ಜೈನ್ ಮತ್ತೆ ಪ್ರತಿಕ್ರಿಯಿಸಿ ''ಇದು ವೈಯಕ್ತಿಕ ಪಕ್ಷಪಾತವಾಗಿದ್ದು, (ರಾಜಕೀಯ ದುರುದ್ದೇಶ ಕಾರಣ) ದುರಂತ ಆತ್ಮಹತ್ಯೆಯನ್ನು ರಾಷ್ಟ್ರೀಯ ತಮಾಷೆಯನ್ನಾಗಿ ಪರಿವರ್ತಿಸಿದೆ'' ಎಂದು ಹೇಳಿದ್ದಾರೆ.

    ಪತ್ರಕರ್ತನ ಹೇಳಿಕೆ ಪ್ರಶ್ನಿಸಿದ ನಟ ನಿಖಿಲ್

    ಪತ್ರಕರ್ತನ ಹೇಳಿಕೆ ಪ್ರಶ್ನಿಸಿದ ನಟ ನಿಖಿಲ್

    ಸುಶಾಂತ್ ಸಿಂಗ್ ಕೇಸ್‌ ಕುರಿತು ನಡೆಯುತ್ತಿರುವ ಬೆಳವಣಿಗೆಯನ್ನು ರಾಷ್ಟ್ರೀಯ ತಮಾಷೆ ಎಂದು ಹೇಳಿದ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರ ಮಾತನ್ನು ನಟ ನಿಖಿಲ್ ಖಂಡಿಸಿದ್ದಾರೆ. ''ಸರ್ ಇದು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಹೇಗೆ ಬಂದಿದ್ದೀರಿ? ಸುಪ್ರೀಂ ಕೋರ್ಟ್ ಸಿಬಿಐ ವಿಚಾರಣೆಗೆ ಅನುಮತಿ ನೀಡಿದೆ ಅಂದ್ರೆ ಭಾರತವು ಸತ್ಯವನ್ನು ತಿಳಿಯಲು ಬಯಸಿದೆ. ಸತ್ಯವನ್ನು ತಿಳಿಯಲು ಬಯಸುವ ಹೋರಾಟವನ್ನು ನೀವು ತಮಾಷೆ ಎಂದು ಕರೆಯುತ್ತಿದ್ದೀರಾ!' ಎಂದು ಕೇಳಿದ್ದಾರೆ.

    ಸುಶಾಂತ್ ಸಹೋದರಿ ಕುಡಿದು ರಾತ್ರಿ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು: ರಿಯಾ ಗಂಭೀರ ಆರೋಪಸುಶಾಂತ್ ಸಹೋದರಿ ಕುಡಿದು ರಾತ್ರಿ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು: ರಿಯಾ ಗಂಭೀರ ಆರೋಪ

    ರಾಜಕೀಯವಾಗಿ ದುರ್ಬಳಕೆ ಆಗ್ತಿದೆ!

    ರಾಜಕೀಯವಾಗಿ ದುರ್ಬಳಕೆ ಆಗ್ತಿದೆ!

    ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ ಸತ್ಯ ಏನು ಎಂಬುದು ತಿಳಿಯಲು ಸೂಕ್ತ ತನಿಖೆ ಅಗತ್ಯ. ಆದರೆ, ಮುಂಬೈ, ಬಿಹಾರ ಸರ್ಕಾರಗಳು ಇದನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಅಭಿಪ್ರಾಯವೂ ಇದೆ. ಜೂನ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸುಶಾಂತ್ ಅನುಮಾನಸ್ಪಾದವಾಗಿ ಮೃತಪಟ್ಟಿದ್ದರು.

    English summary
    Telugu actor Nikhil Siddharth questions the statement of a journalist who called Sushant Singh Rajput case a 'national tamasha'.
    Thursday, August 20, 2020, 16:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X