ನಿಶ್ಚಿತಾರ್ಥದ ಸಂಭ್ರಮದಲ್ಲಿ ತೆಲುಗು 'ಕಿರಿಕ್ ಪಾರ್ಟಿ' ಹೀರೋ ಸಿದ್ಧಾರ್ಥ್
ತೆಲುಗಿನ ಖ್ಯಾತ ನಟ ನಿಖಿಲ್ ಸಿದ್ಧಾರ್ಥ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇತ್ತೀಚಿಗೆ ನಿಖಿಲ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದರೀಗ ನಿಖಿಲ್ ಬಹುಕಾಲದ ಗೆಳತಿ ಡಾ.ಪಲ್ಲವಿ ವರ್ಮ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಇತ್ತೀಚಿಗೆ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ನಿಖಿಲ್ ಮತ್ತು ಪಲ್ಲವಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಎಂಗೇಜ್ ಆಗಿದ್ದಾರೆ. ತೀರಾ ಖಾಸಗಿಯಾಗಿ ನಡೆದ ಸಮಾರಂಭದಲ್ಲಿ ನಿಖಿಲ್ ಮತ್ತು ಪಲ್ಲವಿ ಕುಟುಂಬದವರು ಹಾಗೂ ತೀರಾ ಆಪ್ತರು ಮಾತ್ರ ಹಾಜರಿದ್ದರು.
ಇಬ್ಬರು ಬಹುಕಾಲದ ಗೆಳೆಯರು. ಆದರೆ ಎಲ್ಲಿಯೂ ಮದುವೆ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಭಾವಿ ಪತ್ನಿಗೆ ಪ್ರಪೋಸ್ ಮಾಡುವ ಫೋಟೋವನ್ನು ಶೇರ್ ಮಾಡಿ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದರು. ಸದ್ಯ ಇಬ್ಬರು ಎಂಗೇಜ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ನಿಖಿಲ್ ಇತ್ತೀಚಿಗೆ ಅರ್ಜುನ್ ಸುರಾವರಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿಶೇಷ ಅಂದರೆ ನಿಖಿಲ್ ಕನ್ನಡದ ಸೂಪರ್ ಹಿಟ್ ಕಿರಿಕ್ ಪಾರ್ಟಿ ಸಿನಿಮಾ ತೆಲುಗು ರಿಮೇಕ್ ನಲ್ಲಿ ನಾಯಕನಾಗಿ ಮಿಂಚಿದ್ದರು. ರಕ್ಷಿತ್ ಶೆಟ್ಟಿ ನಿಭಾಯಿಸಿದ್ದ ಪಾತ್ರದಲ್ಲಿ ನಿಖಿಲ್ ಕಾಣಿಸಿಕೊಂಡಿದ್ದರು.

ನಿಖಿಲ್ ಸಿದ್ಧಾರ್ಥ ಮತ್ತು ಪಲ್ಲವಿ ವರ್ಮಾ ಮದುವೆ ಏಪ್ರಿಲ್ ನಲ್ಲಿ ನಡೆಯುವ ಸಧ್ಯತೆ ಇದೆ. ಮೂಲಗಳ ಪ್ರಕಾರ ಇಬ್ಬರು ಏಪ್ರಿಲ್ 16ರಂದು ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್ ನಲ್ಲಿ ಮದುವೆ ನಡೆಯಲಿದ್ದು. ಈಗಾಗಲೆ ಮದುವೆ ಸಿದ್ಧತೆ ಜೋರಾಗಿ ನಡೆಯುತ್ತಿದೆ.


Click it and Unblock the Notifications











