For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಭೀತಿ: ನಟ ನಿತಿನ್ ಮದುವೆ ಮುಂದೂಡಿಕೆ

  |

  ಕೊರೊನಾ ಭೀತಿ ಜನರ ಜೀವನ, ದೇಶಧ ಆರ್ಥಿಕ ಸ್ಥಿತಿ ಎಲ್ಲದರ ಮೇಲೂ ಪ್ರಭಾವ ಬೀರಿದೆ. ಸಂಭ್ರಮಗಳಿಗೂ ಅಡ್ಡಗಾಲು ಹಾಕಿದೆ. ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ.

  ಸ್ಟಾರ್ ನಟ-ನಟಿಯರ ಮದುವೆಗಳೂ ಸಹ ಮುಂದೂಡಲ್ಪಡುತ್ತಿವೆ. ತೆಲುಗಿನ ಖ್ಯಾತ ನಟ ನಿತಿನ್ ಅವರ ಮದುವೆ ಸಹ ಮುಂದೂಡಲ್ಪಟ್ಟಿದೆ.

  ಲಾಕ್ ಡೌನ್ ನಡುವೆಯೂ ಭಾವಿ ಪತ್ನಿ ಭೇಟಿಯಾದ ನಿಖಿಲ್: ಇದೇಗೆ ಸಾಧ್ಯ ಎಂದು ನೆಟ್ಟಿಗರ ಪ್ರಶ್ನೆಲಾಕ್ ಡೌನ್ ನಡುವೆಯೂ ಭಾವಿ ಪತ್ನಿ ಭೇಟಿಯಾದ ನಿಖಿಲ್: ಇದೇಗೆ ಸಾಧ್ಯ ಎಂದು ನೆಟ್ಟಿಗರ ಪ್ರಶ್ನೆ

  ''ಜಯಂ'' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದ ನಿತಿನ್ ಅವರ ಮದುವೆ ಏಪ್ರಿಲ್ 15-16 ರಂದು ನಿಶ್ಚಯವಾಗಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಮದುವೆ ಮುಂದೂಡಲ್ಪಟ್ಟಿದೆ. ಮುಂದಿನ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.

  ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥವಾಗಿತ್ತು

  ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥವಾಗಿತ್ತು

  38 ವರ್ಷದ ನಿತಿನ್ ಅವರಿಗೆ ಫೆಬ್ರವರಿ ತಿಂಗಳಲ್ಲಿ ಶಾಲಿನಿ ಎಂಬುವರೊಂದಿಗೆ ನಿಶ್ಚಿತಾರ್ಥ ನಡೆದಿತ್ತು. ಮದುವೆ ಸಮಾರಂಭ ಏಪ್ರಿಲ್ 16 ರಂದು ನಿಶ್ಚಯಿಸಲಾಗಿತ್ತು, ಆದರೆ ಕೊರೊನಾ ಕಾರಣದಿಂದ ಮದುವೆ ಮುಂದೂಡಲ್ಪಟ್ಟಿದೆ.

  ದುಬೈನಲ್ಲಿ ಆಯೋಜಿಸಿದ್ದರು ಆರತಕ್ಷತೆ

  ದುಬೈನಲ್ಲಿ ಆಯೋಜಿಸಿದ್ದರು ಆರತಕ್ಷತೆ

  ಮದುವೆ ಮಾತ್ರವಲ್ಲದೆ ಏಪ್ರಿಲ್ ಅಂತ್ಯದಲ್ಲಿ ದುಬೈ ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಸಹಾ ಆಯೋಜಿಸಲಾಗಿತ್ತು, ಆದರೆ ದುಬೈನಲ್ಲಿ ಕೊರೊನಾ ತಾಂಡವವಾಡುತ್ತಿರುವ ಕಾರಣ ಆರತಕ್ಷತೆ ಸಹ ಮುಂದೂಡಲ್ಪಟ್ಟಿದೆ.

  ನಿಖಿಲ್ ಮದುವೆಗೂ ಕೊರೊನಾ ಎಫೆಕ್ಟ್, ಮದುವೆ ಶಿಫ್ಟ್?ನಿಖಿಲ್ ಮದುವೆಗೂ ಕೊರೊನಾ ಎಫೆಕ್ಟ್, ಮದುವೆ ಶಿಫ್ಟ್?

  ಹುಟ್ಟುಹಬ್ಬ ಆಚರಿಸಿಕೊಳ್ಳದ ನಿತಿನ್

  ಹುಟ್ಟುಹಬ್ಬ ಆಚರಿಸಿಕೊಳ್ಳದ ನಿತಿನ್

  ನಿನ್ನೆ ಮಾರ್ಚ್ 30 ರಂದು ನಿತಿನ್ ಅವರ ಹುಟ್ಟುಹಬ್ಬವಿತ್ತು, ಆದರೆ ಕೊರೊನಾ ಎಲ್ಲೆಡೆ ಕೊರೊನಾ ಭೀತಿ ಇರುವ ಕಾರಣ ಅವರು ತಮ್ಮ ಹುಟ್ಟುಹಬ್ಬ ಸಹ ಆಚರಿಸಿಕೊಂಡಿಲ್ಲ. ಕೇವಲ ಸಾಮಾಜಿಕ ಜಾಲತಾಣದಲ್ಲಿ ತಮಗೆ ಶುಭಾಶಯ ತಿಳಿಸಿದವರಿಗೆ ಧನ್ಯವಾದ ಹೇಳಿದ್ದಾರಷ್ಟೆ.

  ಹತ್ತು ಲಕ್ಷ ಚೆಕ್ ನೀಡಿದ ನಟ ನಿತಿನ್

  ಹತ್ತು ಲಕ್ಷ ಚೆಕ್ ನೀಡಿದ ನಟ ನಿತಿನ್

  ಕೊರೊನಾ ವಿರುದ್ಧ ಹೋರಾಡಲು ನಿತಿನ್ ನೆರವು ನೀಡಿದ್ದು, ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಭೇಟಿಯಾಗಿ 10 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ಸಿನಿಮಾ ಕಾರ್ಮಿಕರಿಗೆ ನೆರವು: ಮಾನವೀಯತೆ ಮೆರೆದ ನಿಖಿಲ್ ಕುಮಾರಸ್ವಾಮಿಸಿನಿಮಾ ಕಾರ್ಮಿಕರಿಗೆ ನೆರವು: ಮಾನವೀಯತೆ ಮೆರೆದ ನಿಖಿಲ್ ಕುಮಾರಸ್ವಾಮಿ

  ಭರ್ಜರಿ ಹಿಟ್ ನೀಡಿರುವ ಖುಷಿಯಲ್ಲಿ ನಿತಿನ್

  ಭರ್ಜರಿ ಹಿಟ್ ನೀಡಿರುವ ಖುಷಿಯಲ್ಲಿ ನಿತಿನ್

  ನಿತಿನ್ ಅವರ ಕೊನೆಯ ಚಿತ್ರ ಭೀಷ್ಮ ಭರ್ಜರಿ ಹಿಟ್ ಆಗಿದೆ. ಈ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ನಿತಿನ್ ಮುಂದಿನ ಚಿತ್ರ 'ರಂಗ್ ದೇ' ಜೊತೆಗೆ ಹಿಂದಿಯ ಅಂಧಾದುನ್ ಸಿನಿಮಾ ರೀಮೇಕ್‌ ನಲ್ಲಿ ಸಹ ಅವರು ನಟಿಸುತ್ತಿದ್ದಾರೆ.

  Read more about: tollywood marriage coronavirus
  English summary
  Telugu famous actor Nithiin's marriage postponed due to coronavirus scare. marriage organized on April 16 earlier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X