ಬಾಲಿವುಡ್‌ಗೆ ಹೋದ ರಶ್ಮಿಕಾ: 'ಕಿಲ್ ಇಟ್ ರಶ್' ಎಂದ ನಟ!
ಕನ್ನಡ ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಿಂದ ತೆಲುಗು, ಅಲ್ಲಿಂದ ತಮಿಳು ಚಿತ್ರರಂಗಕ್ಕೆ ಹೆಜ್ಜೆಯಿಟ್ಟು ಸಕ್ಸಸ್ ಕಂಡಿದ್ದಾರೆ. ಈಗ ಬಾಲಿವುಡ್ ಇಂಡಸ್ಟ್ರಿಗೂ ಬಲಗಾಲಿಟ್ಟಿರುವ ನಟಿ ಸರ್ಪ್ರೈಸ್ ನೀಡಿದ್ದಾರೆ.
Recommended Video
ಬಿಟೌನ್ ನಟ ಸಿದ್ಧಾರ್ಥ್ ಮಲ್ಹೋತ್ರ ನಟಿಸುತ್ತಿರುವ ಥ್ರಿಲ್ಲರ್ ಸಿನಿಮಾ ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕಿರಿಕ್ ಸುಂದರಿಗೆ ಮೊದಲ ಹಿಂದಿ ಸಿನಿಮಾ.
ಹೀಗಾಗಿ, ರಶ್ಮಿಕಾ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ರಶ್ಮಿಕಾ ಮಂದಣ್ಣ ಅವರ ಸಹ ನಟರೊಬ್ಬರು ಈ ಚಿತ್ರಕ್ಕೆ ವಿಶ್ ಮಾಡಿದ್ದಾರೆ.

ಹೌದು, ತೆಲುಗು ನಟ ನಿತೀನ್ ಅವರು, ರಶ್ಮಿಕಾ ಅವರ ಬಾಲಿವುಡ್ ಪ್ರವೇಶಕ್ಕೆ ಶುಭಕೋರಿದ್ದು, ''ಕಿಲ್ ಇಟ್ ರಶ್'' ಎಂದು ಟ್ವೀಟ್ ಮಾಡಿದ್ದಾರೆ.
ಚೊಚ್ಚಲ ಸಿನಿಮಾಗೂ ಮೊದಲೇ ಹಿಂದಿಯ ಆಲ್ಬಂ ಹಾಡೊಂದರಲ್ಲಿ ರಶ್ಮಿಕಾ ಹೆಜ್ಜೆ ಹಾಕಿದ್ದಾರೆ. ಹಿಂದಿಯ ಖ್ಯಾತ Rapper ಬಾದ್‌ಶಾ ನಿರ್ಮಾಣದ ಹೊಸ ಹಾಡಿನಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣ ಚಂಢೀಗಡದಲ್ಲಿ ನಡೆಯುತ್ತಿದೆ.
ತೆಲುಗು ನಿತೀನ್ ಜೊತೆ ರಶ್ಮಿಕಾ ಮಂದಣ್ಣ ಭೀಷ್ಮ ಸಿನಿಮಾ ಮಾಡಿದ್ದರು. ಈ ಸಿನಿಮಾ ಸಕ್ಸಸ್ ಸಹ ಕಂಡಿತ್ತು. ವೆಂಕಿ ಕುಡುಮುಲಾ ನಿರ್ದೇಶಿಸಿದ್ದ ಈ ಚಿತ್ರ ಇದೇ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು.
ಇನ್ನುಳಿದಂತೆ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಧ್ರುವ ಸರ್ಜಾರ ಪೊಗರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ಕಾರ್ತಿ ಜೊತೆ ಸುಲ್ತಾನ್ ಎಂಬ ಸಿನಿಮಾ ಮಾಡಿದ್ದಾರೆ. ಈಗ ಬಾಲಿವುಡ್‌ಗೂ ಟಿಕೆಟ್ ಪಡೆದುಕೊಂಡಿದ್ದಾರೆ.


Click it and Unblock the Notifications











